Bigg Boss: ಫಿನಾಲೆ ಟಿಕೆಟ್‌ಗಾಗಿ ಮಂಜು-ತ್ರಿವಿಕ್ರಮ್ ನಡುವೆ ಪೈಪೋಟಿ: ಬಿಗ್‌ಬಾಸ್‌ ಮನೆಯಲ್ಲಿ ಬಿಗ್‌ ಫೈಟ್

ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿಯುವ ಹಂತ ತಲುಪುತ್ತಿದ್ದಂತೆ ಮನೆಯಲ್ಲಿ ಸ್ಪರ್ಧಿಗಳಿಗೆ ಆಟ ಕಠಿಣವಾಗುತ್ತಿದೆ. ಪ್ರಸ್ತುತ ಮನೆಯಲ್ಲಿ ಒಂಬತ್ತು ಜನ ಮಾತ್ರ ಉಳಿದುಕೊಂಡಿದ್ದು ನೇರ ಜಿದ್ದಾಜಿದ್ದಿ ಶುರುವಾಗಿದೆ. ಪ್ರತಿಯೊಬ್ಬರ ಶಕ್ತಿ, ಸಾಮಾರ್ಥ್ಯ, ಜಾಣ್ಮೆ ಎಲ್ಲವನ್ನೂ ಬಿಗ್ ಬಾಸ್ ಅಳಿಯಲು ಶುರುಮಾಡಿದ್ದಾರೆ. ಹೀಗಾಗಿ ಇನ್ಮುಂದಿನ ಟಾಸ್ಕ್ ಸ್ಪರ್ಧಿಗಳಿಗೆ ಬಿಸಿ ತುಪ್ಪವಾಗಲಿದೆ. ಅಂದಹಾಗೆ ಇಂದು ಕಲರ್ಸ್ ಕನ್ನಡ ವಾಹಿನಿ ಬಿಗ್‌ಬಾಸ್‌ ಮನೆಯ ಒಂದು ವೀಡಿಯೋ ಕ್ಲಿಪ್‌ ಅನ್ನು ಹಂಚಿಕೊಂಡಿದೆ. ಇದರಲ್ಲಿ ಫಿನಾಲೆ ಟಿಕೆಟ್‌ಗಾಗಿ ಬಿಗ್‌ಬಾಸ್‌ ಮನೆಯಲ್ಲಿ ಮಾರಾಮಾರಿ ನಡೆದಿದೆ.

ಹೌದು... ಇಂದು ಕಲರ್ಸ್‌ ಕನ್ನಡ ವಾಹಿನಿ ವೀಡಿಯೋವೊಂದನ್ನು ಹಂಚಿಕೊಂಡಿದೆ. ಈ ವೀಡಿಯೋ ಅದ್ಭುತವಾಗಿದೆ. ಈ ವೀಡಿಯೋಕ್ಕೆ 'ಯಾರ ಸ್ಥಾನ ಖಾತರಿ ಯಾರ ಸ್ಥಾನಕ್ಕೆ ಕತ್ತರಿ' ಎನ್ನುವ ಕ್ಯಾಪ್ಶನ್ ಕೂಡ ನೀಡಲಾಗಿದೆ. ಈ ವೀಡಿಯೋದಲ್ಲಿ ಬಿಗ್‌ಬಾಸ್‌ 'ಸ್ಪರ್ಧಿಗಳಿಗೆ ಸರಣಿ ಆಟ ಶುರುವಾಗುತ್ತದೆ. ಯಾರು ಆಟ ಚೆನ್ನಾಗಿ ಆಡ್ತಾರೆ ಅವರು ಫಿನಾಲೆಗೆ ಹೋಗಬಹುದು. ಆಟ ಚೆನ್ನಾಗಿ ಆಡದೇ ಇರುವವರು ಫಿನಾಲೆಯಲ್ಲಿ ಭಾಗವಹಿಸುವುದನ್ನು ಕಳೆದುಕೊಳ್ಳುತ್ತಾರೆ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

manju-trivikram compete for finale ticket big fight in bigg boss house

ಇದಕ್ಕಾಗಿ ಟಾಸ್ಕ್‌ವೊಂದನ್ನು ಬಿಗ್‌ಬಾಸ್‌ ಮನೆಯ ಎಲ್ಲಾ ಸ್ಪರ್ಧಿಗಳಿಗೆ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ಗೌತಮಿ ವಿರುದ್ಧ ಭವ್ಯಾ, ಹನುಮಂತು ವಿರುದ್ಧ ಧನ್‌ರಾಜ್, ಚೈತ್ರಾ ವಿರುದ್ಧ ಮೋಕ್ಷಿತಾ, ಉಗ್ರಂ ಮಂಜು ವಿರುದ್ಧ ತ್ರಿವಿಕ್ರಮ್ ಅವರು ಆಟ ಆಡುತ್ತಿದ್ದಾರೆ. ಈ ಆಟ ತುಂಬಾ ಚೆನ್ನಾಗಿದ್ದು, ಪ್ರತಿಯೊಬ್ಬ ಸ್ಪರ್ಧಿಗಳ ಶಕ್ತಿ ಹಾಗೂ ಜಾಣ್ಮೆಯನ್ನು ತೋರಿಸುತ್ತದೆ.

ಫಿನಾಲೆ ಟಿಕೆಟ್‌ಗಾಗಿ ಬಿಗ್‌ಬಾಸ್‌ ಮನೆಯಲ್ಲಿ ಬಿಗ್‌ ಫೈಟ್

ಟಾಸ್ಕ್ ಏನು ಅಂದರೆ ಒಂದು ಕೈಯಲ್ಲಿ ಕೋಲು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ನೀರು ತುಂಬಿದ ಬಾಟಲಿಯನ್ನು ಹಿಡಿದುಕೊಂಡಿರಬೇಕು. ಕೋಲಿನಿಂದ ಎದುರಾಳಿ ಸ್ಪರ್ಧಿಯ ಬಾಟಲಿಯನ್ನು ಒಡೆದು ನೀರು ಚೆಲ್ಲುವ ಮೂಲಕ ಸ್ಪರ್ಧಿಗಳು ತಮ್ಮ ಕೈಯಲ್ಲಿ ಇರುವ ನೀರು ಕೆಳಗೆ ಚೆಲ್ಲದಂತೆ ನೋಡಿಕೊಳ್ಳಬೇಕು. ಹೀಗೆ ಆಟದ ಕೊನೆಯಲ್ಲಿ ಯಾರ ಕೈಯಲ್ಲಿ ನೀರು ಕೆಳಗೆ ಚೆಲ್ಲದಂತೆ ಉಳಿದಿರುತ್ತೋ ಅವರು ಈ ಆಟದಲ್ಲಿ ಜಯ ಸಾಧಿಸುತ್ತಾರೆ.

ಇನ್ನೂ ವೀಡಿಯೋದಲ್ಲಿ ನೋಡುವುದಾದರೆ ಗೌತಮಿ ವಿರುದ್ಧ ಭವ್ಯಾ ಗೆಲ್ಲಬಹುದು ಎಂದು ಅನಿಸುತ್ತದೆ. ಆ ನಂತರ ಧನ್‌ರಾಜ್ ವಿರುದ್ಧ ಹನುಮಂತ ಗೆಲ್ಲಬಹುದು ಹಾಗೆ ಚೈತ್ರಾ ವಿರುದ್ಧ ಮೋಕ್ಷಿತಾ ಗೆಲ್ಲಬಹುದು ಅನಿಸುತ್ತದೆ. ಇನ್ನೂ ವೀಡಿಯೋದ ಕೊನೆಯಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಪೈಟ್‌ ಮಾಡುವುದು ಕಂಡು ಬರುತ್ತದೆ.

ಫಿನಾಲೆ ಟಿಕೆಟ್ ಟಾಸ್ಕ್: ಮಂಜು-ತ್ರಿವಿಕ್ರಮ್ ನಡುವೆ ಫೈಟ್

ಈ ಸಮಯದಲ್ಲಿ ತ್ರಿವಿಕ್ರಮ್ ಜೊತೆಗೆ ಮಂಜು ಅವರು ಜಗಳ ಕೂಡ ಆಡುತ್ತಾರೆ. ಅಟ್ಟಾಡಿಸಿಕೊಂಡು ತ್ರಿವಿಕ್ರಮ್ ಅವರ ಕೈಯಲ್ಲಿ ಇದ್ದ ನೀರನ್ನು ಚೆಲ್ಲಲು ಪ್ರಯತ್ನ ಪಡುತ್ತಾರೆ. ವೀಡಿಯೋ ನೋಡಿದರೆ ಈ ಟಾಸ್ಕ್‌ನಲ್ಲಿ ರೌಂಡ್ಸ್ ಇದ್ದಂತೆ ಕಾಣಿಸುತ್ತದೆ. ಈ ವೇಳೆ ತ್ರಿವಿಕ್ರಮ್ ಅವರು 'ನಾವು ಇದೇ ರೀತಿ ಆಟ ಆಡಿದರೆ ನೀವು ಸುಮ್ಮನೆ ಇರುತ್ತೀರಾ' ಎಂದು ಮಂಜು ಅವರಿಗೆ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ನೀನು ಆಡು ಎಂದು ಮಂಜು ಅವರು ಹೇಳುತ್ತಾರೆ. ಹೀಗಾಗಿ ಮಂಜು ಅವರು ಯಾವ ರೀತಿ ಹೊಡೆದ್ರೋ ನಾನು ಕೂಡ ಎರಡೇ ಸೆಂಕೆಂಡ್‌ನಲ್ಲಿ ಹೊಡೆಯುತ್ತೇನೆ ಎಂದು ತ್ರಿವಿಕ್ರಮ್ ಹೇಳುತ್ತಾರೆ.

ಹೀಗಾಗಿ ಇವರಿಬ್ಬರಲ್ಲಿ ಯಾರು ಗೆದ್ದರು ಎಂದು ಹೇಳುವುದು ತುಂಬಾನೇ ಕಷ್ಟ. ಊಹಿಸುವುದಾದರೆ ತ್ರಿವಿಕ್ರಮ್ ಗೆದ್ದಿರುವ ಸಾಧ್ಯತೆ ಇದೆ. ಇನ್ನೂ ಈ ಟಾಸ್ಕ್ ಮಾತ್ರ ತುಂಬಾನೇ ಅದ್ಭುತವಾಗಿದೆ. ಪ್ರತಿಯೊಬ್ಬರ ಸಾಮಾರ್ಥ್ಯ ಅರ್ಥವಾಗಲಿದೆ. ಯಾರು ಎಷ್ಟು ಬಲಿಷ್ಟರು, ಎಷ್ಟು ಜಾಣರು ಅನ್ನೋದು ಕೂಡ ಈ ಟಾಸ್ಕ್‌ನಿಂದ ಅರ್ಥವಾಗಲಿದೆ. ಹೀಗಾಗಿ ಇಂದಿನ ವೀಡಿಯೋ ಭಾರೀ ಕೂತೂಹಲವನ್ನು ಮೂಡಿಸಿದ್ದು, ಇದರಲ್ಲಿ ಯಾರು ವಿನ್ ಆಗ್ತಾರೆ ಅನ್ನೋದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+