Mahakumbh Monalisa: ಕುಂಭಮೇಳ ಮೊನಾಲಿಸಾಗೆ ಹೊಸ ಸಂಕಷ್ಟ!
ಮಹಾಕುಂಭ ಮೇಳದ ಪ್ರಾರಂಭದ ದಿನಗಳಲ್ಲಿ ದೇಶದಾದ್ಯಂತ ಫೇಮಸ್ ಆಗಿರುವ ಮೊನಾಲಿಸಾ ಭೋಂಸ್ಲೆ ಅವರು ಮಹಾಕುಂಭ ಮೇಳ ಮುಗಿಯುವ ವೇಳೆಗೆ ಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ. ಮಹಾಕುಂಭಮೇಳ ಪ್ರಾರಂಭವಾದ ದಿನಗಳಲ್ಲೇ ಮೊನಾಲಿಸಾ ಅವರು ಅವರ ಕಣ್ಣುಗಳಿಂದಲೇ ಫೇಮಸ್ ಆಗಿದ್ದಾರೆ. ಸ್ಪುರದ್ರೂಪಿ ವ್ಯಕ್ತಿತ್ವಕ್ಕೆ ಹಲವರು ಮನಸೋತಿದ್ದಾರೆ. ಕೆಲವೇ ದಿನಗಳಲ್ಲಿ ಈಕೆ ದೇಶದಾದ್ಯಂತ ಫೇಮಸ್ ಆಗಿದ್ದು. ಶ್ರೀಮಂತರಾಗಿದ್ದಾರೆ. ಆದರೆ, ಮಹಾಕುಂಭ ಮೇಳ ಮುಗಿಯುವ ವೇಳೆಗೆ ಅವರ ಲೆಕ್ಕಾಚಾರಗಳು ತಲೆಕೆಳಗಾದಂತಿದೆ. ಮಹಾಕುಂಭ ಮೇಳ ಪ್ರಾರಂಭದಲ್ಲಿ ಅಭಿವೃದ್ಧಿಯ ಪರ್ವ ಇವರ ಬಾಳಿನಲ್ಲಿ ಶುರುವಾಗಿತ್ತು. ಆದರೆ ಇದೀಗ ಹೊಸ ಸಂಕಷ್ಟ ಶುರುವಾದಂತೆ ಇದೆ.
ಹೌದು ಮೊನಾಲಿಸಾ ಈಗ ಇಂಡಿಯಾದಲ್ಲೇ ವರ್ಡ್ ಫೇಮಸ್. ಬಾಲಿವುಡ್‌ನಿಂದಲೂ ಫಿಲ್ಮ್ ಆಫರ್‌ಗಳು ಬರುತ್ತಿವೆ. ಆದರೆ, ಅವರ ಮೊದಲ ಸಿನಿಮಾಗೆ ಭಾರೀ ಸಂಕಷ್ಟ ಎದುರಾಗಿದ್ದು. ಈ ಸಿನಿಮಾ ನಿರ್ಮಾಣ ಆಗಲಿದೆಯೇ ಇಲ್ಲವೇ ಎನ್ನುವ ಅನುಮಾನ ಶುರುವಾಗಿದೆ. ಮಹಾಕುಂಭಮೇಳದಲ್ಲಿ ಮಿಂಚಿರುವ ಮೊನಾಲಿಸಾ ಈಗ ವಿವಿಧ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಹೋಗುತ್ತಿದ್ದು. ಲಕ್ಷ.. ಲಕ್ಷ ರೂಪಾಯಿ ಎಣಿಸುತ್ತಿದ್ದಾರೆ. ಅವರ ಜೀವನವೇ ಬದಲಾಗಿ ಹೋಗಿದೆ. ಸೋಷಿಯಲ್ ಮೀಡಿಯಾದ ಮೂಲಕವೇ ಫೇಮಸ್ ಆಗಿರುವ ಮೊನಾಲಿಸಾ ಅವರು ಇದೀಗ ಸಿನಿಮಾದಲ್ಲಿ ನಟಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ಮೊನಾಲಿಸಾ ಅವರ ಸಿನಿಮಾಗೆ ಪ್ರಾರಂಭದಲ್ಲೇ ವಿಘ್ನಗಳು ಶುರುವಾಗುತ್ತಿವೆ.

ಮೊನಾಲಿಸಾ ಅವರ ಮೊದಲ ಸಿನಿಮಾದ ಬಗ್ಗೆ ಅದರ ಪ್ರಾರಂಭಕ್ಕೂ ಮುಂಚೆಯೇ ಸುಳ್ಳು ಸುದ್ದಿ ಹಾಗೂ ಅಪಪ್ರಚಾರ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಮೊನಾಲಿಸಾ ರುದ್ರಾಕ್ಷಿ ಮಾರುತ್ತಿದ್ದರು ಒಂದೇ ಒಂದು ಫೋಟೋ ಅವರ ಬದುಕನ್ನೇ ಬದಲಾಯಿಸಿ ಬಿಟ್ಟಿತು. ರಾತ್ರೋ ರಾತ್ರಿ ಅವರು ಸ್ಟಾರ್ ಆಗಿ ಬದಲಾಗಿ ಹೋದರು ನಿತ್ಯವು ಸಾವಿರಾರು ರೂಪಾಯಿ ಲೆಕ್ಕಾಚಾರದಲ್ಲಿ ನಡೆಯುತ್ತಿದ್ದ ಅವರ ಬದುಕು ಇದೀಗ ಲಕ್ಷಗಳಿಗೆ ಬದಲಾಗಿದೆ.
ಇನ್ನೇನು ಅವರು ಸಿನಿಮಾದ ಮೂಲಕ ಹೊಸ ಜೀವನ ಪ್ರಾರಂಭಿಸಲಿದ್ದಾರೆ. ಬಾಲಿವುಡ್‌ನಲ್ಲೂ ಹೊಸ ದಾಖಲೆ ಸೃಷ್ಟಿ ಮಾಡಲಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಸಿನಿಮಾ ಪ್ರಾರಂಭ ಮಾಡುವುದಕ್ಕೆ ಕೆಲವರು ಬಿಡುತ್ತಿಲ್ಲ ಅಂತ ಈ ಸಿನಿಮಾದ ನಿರ್ದೇಶಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಸಿನಿಮಾಗೆ ತೊಂದರೆ ಕೊಟ್ಟವರು ಹಾಗೂ ತಡೆಯೊಡ್ಡಿದವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ದಿ ಡೈರಿ ಆಫ್ ಮಣಿಪುರ್: ಇನ್ನು ಮೊನಾಲಿಸಾ ಅವರು ನಟಿಯಾಗಿ ಚೊಚ್ಚಲ ಚಿತ್ರ ದಿ ಡೈರಿ ಆಫ್ ಮಣಿಪುರ್ ಸಿನಿಮಾ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ಶುರುವಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಸನೋಜ್ ಮಿಶ್ರಾ ಅವರು ನಿರ್ದೇಶಿಸುತ್ತಿದ್ದಾರೆ. ಆದರೆ ಕೆಲವು ಯೂಟ್ಯೂಬರ್‌ಗಳು ಈ ಸಿನಿಮಾದ ಬಗ್ಗೆ ಫೇಕ್ ವಿಡಿಯೋ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಿರ್ದೇಶಕ ಇಲ್ಲಿಯವರೆಗೆ ಮಾಡಿರುವ ಯಾವುದೇ ಸಿನಿಮಾ ಸಕ್ಸಸ್ ಇರಲಿ ಬಿಡುಗಡೆ ಸಹ ಆಗಿಲ್ಲ ಎಂದು ಕೆಲವರು ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ.
ಇದೀಗ ಈ ರೀತಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ನಿರ್ದೇಶಕ ಮಿಶ್ರಾ ಅವರು ದೂರು ನೀಡಿದ್ದು 5 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇವರು ಮೊನಾಲಿಸಾ ನಟಿಸಲಿರುವ ಸಿನಿಮಾವನ್ನು ನಿಲ್ಲಿಸುವುದಕ್ಕೆ ನೋಡುತ್ತಿದ್ದಾರೆ ಅಂತ ನಿರ್ದೇಶಕರು ದೂರಿದ್ದಾರೆ.












Click it and Unblock the Notifications