Pavithra Gowda: ಪವಿತ್ರಾ ಗೌಡ ರೇಂಜ್‌ ಏನು, ಎಷ್ಟು ಶ್ರೀಮಂತರು ಗೊತ್ತಾ? ನಾರಾಯಣ ಸ್ವಾಮಿ ಬಿಚ್ಚಿಟ್ಟ ಗುಟ್ಟೇನು?

ಕನ್ನಡ ಚಿತ್ರರಂಗದ ನಟಿ, ಮಾಡೆಲ್‌, ಉದ್ಯಮಿ ಹಾಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ಅವರು ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ನಟ ದರ್ಶನ್‌, ಪವಿತ್ರಾ ಗೌಡ ಮೇಲಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟಿ ಪವಿತ್ರಾ ಗೌಡ A1 ಆರೋಪಿಯಾಗಿದ್ದರೇ, ನಟ ದರ್ಶನ್‌ A2 ಆರೋಪಿಯಾಗಿದ್ದಾರೆ. ನಟಿ ಪವಿತ್ರಾ ಗೌಡ ಅವರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಾಮೆಂಡ್‌ ಗಳು ಬರುತ್ತಿರುತ್ತವೆ.

ಪವಿತ್ರಾ ಗೌಡ ಅವರ ಬಳಿ ರೇಂಜ್‌ ರೋವರ್‌ ಕಾರ್‌ ಬರಲು ನಟ ದರ್ಶನ್‌ ಕಾರಣ ಎಂದು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದರು. ಇದಕ್ಕೆ ಪವಿತ್ರಾ ಗೌಡ ಪರ ವಕೀಲ ನಾರಾಯಣ್‌ ಸ್ವಾಮಿ ಅವರು ನ್ಯಾಶನಲ್ ಟಿವಿ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟ ಉತ್ತರವನ್ನ ನೀಡಿದ್ದಾರೆ. ಅಲ್ಲದೇ ನಟಿ ಹಾಗೂ ಉದ್ಯಮಿ ಪವಿತ್ರಾ ಗೌಡ ಅವರ ರೇಂಜ್‌ ಏನು? ಹಾಗೂ ಅವರ ಎಷ್ಟು ಶ್ರೀಮಂತರು ಎಂಬ ಬಗ್ಗೆ ವಕೀಲರಾದ ನಾರಾಯಣ್‌ ಸ್ವಾಮಿ ಅವರು ಮಾತನಾಡಿದ್ದಾರೆ.

lawyer narayana Swamy On Pavithra Gowda Family Background

ಇನ್ನೂ ವಕೀಲರಾದ ನಾರಾಯಣ್‌ ಸ್ವಾಮಿ ಅವರು ಮಾತನಾಡಿ, ಪವಿತ್ರಾ ಗೌಡ ತುಂಬ ಸ್ವಾವಲಂಬಿ, ತಾನು ಬೆಳೆದು, ತನ್ನ ಮಗಳನ್ನು ಬೆಳೆಸಬೇಕು ಎಂದು ಬಯಸುವ ವ್ಯಕ್ತಿತ್ವ ಅವರದ್ದು. ಕೋರ್ಟ್‌ಗೆ ಅವರು ರೆಡಿಯಾಗಿ ಬಂದ್ರೆ ಏನು ತಪ್ಪು? ಏನು ಗತಿ ಇಲ್ಲದೆ ಬರಬೇಕಾ? ಹಣದ ವಿಚಾರದಲ್ಲಿ ಜೋರಿದ್ದಾರೆ. ಪವಿತ್ರಾ ಗೌಡ ಅವರ ತಂದೆ ಸಹ ಶ್ರೀಮಂತರು, ಅವರ ತಾತ ಆಗಿನ ಕಾಲದಲ್ಲಿ ಹಣಕಾಸು ವಿಚಾರದಲ್ಲಿ ಮುಂದಿದ್ದಾರೆ. ಇವರ ಅಪ್ಪ ಪುಟ್ಟಣ್ಣ ಕೂಡ ರಿಚ್.‌ ಈಗಲೂ ಅವರ ಅಪಾರ್ಟ್‌ಮೆಂಟ್‌ಗಳು, ಮನೆಗಳು, ಲ್ಯಾಂಡ್‌ ಇದೆ. ಅಪ್ಪ ಕೊಡಿಸಿರುವ ರೇಂಜ್‌ ರೋವರ್‌ ಕಾರ್‌ಗೆ ನಟಿ ಪವಿತ್ರಾ ಗೌಡ ಅವರು ಈಗಲೂ ಬಡ್ಡಿ ಕಟ್ಟುತ್ತಿದ್ದಾರೆ ಎಂದು ಹೇಳಿದರು.

ಪವಿತ್ರಾ ಗೌಡ ಅವರಿಂದ ದರ್ಶನ್‌ ಸಂಸಾರ ಹಾಳಾಗಿಲ್ಲ. ದರ್ಶನ್‌ಗೂ ಬುದ್ಧಿ ಇದೆ. ಈ ಹಿಂದೆಯೂ ದರ್ಶನ್‌ ಜೈಲಿಗೆ ಹೋಗಿದ್ದು ಯಾವ ಕಾರಣಕ್ಕೆ ಎನ್ನೋದು ಎಲ್ಲರಿಗೂ ಗೊತ್ತಿದೆ. ಸಂಜಯ್‌ ಸಿಂಗ್‌ ಅವರಿಂದ ಪವಿತ್ರಾ ಗೌಡ ಅವರು ಡಿವೋರ್ಸ್‌ ಪಡೆದು ಹತ್ತು ವರ್ಷ ಆಗಿದೆ. ಹತ್ತು-ಹದಿನೈದು ಸಿನಿಮಾ ಆಗೋವರೆಗೂ ದರ್ಶನ್‌ ಅಷ್ಟು ಗಟ್ಟಿಯಾಗಿರಲಿಲ್ಲ. ಆಗ ಅವರು ಹೇಗೆ ಪವಿತ್ರಾಗೆ ಸಹಾಯ ಮಾಡ್ತಾರೆ? ಎಂದು ವಕೀಲ ನಾರಾಯಣ್‌ ಸ್ವಾಮಿ ಅವರು ಹೇಳಿದ್ದಾರೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಪವಿತ್ರಾ ಗೌಡ ಅವರು ಭಾಗಿಯಾಗಿಲ್ಲ. ಸುಮ್ಮನೆ ಅವರನ್ನು ಸೇರಿಸಲಾಗಿದೆ. ಪವಿತ್ರಾ ಗೌಡ ಅವರನ್ನು ಕುಗ್ಗಿಸಬಾರದು. ಪವಿತ್ರಾ ಗೌಡ ಅವರಿಂದ ದರ್ಶನ್‌ ಈ ರೀತಿ ಅನುಭವಿಸ್ತಿದ್ದಾರೆ ಅಂತ ಹೇಳೋದು ತಪ್ಪು. ಯಾರಿಂದ ಯಾರ ಐಡೆಂಟಿಟಿ ಇಲ್ಲ. ಯಾರೋ ದೇವಸ್ಥಾನಕ್ಕೆ ಹೋದರು ಅಂತ ಇವರು ಹೋಗಬಾರದು ಅಂತಿಲ್ಲ. ದೇವಸ್ಥಾನಕ್ಕೆ ಯಾರಪ್ಪನ ಸ್ವಂತದ್ದಾ? ಯಾವುದೇ ಹೆಣ್ಣು ಮಕ್ಕಳ ಬಗ್ಗೆ ತಪ್ಪಾಗಿ ಮಾತನಾಡೋಕೆ ನಮಗೆ ಅಧಿಕಾರ ಇಲ್ಲ ಎಂದು ವಕೀಲ ನಾರಾಯಣ್‌ ಸ್ವಾಮಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+