K.N.Jagadesh Kumar: ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗ್ಗದೀಶ್ ಅಂಕಲ್.. ಆಂಟಿ ಯಾರು ಗೊತ್ತಾ?-ನೆಟ್ಟಿಗರು ಹೇಳೋದೇನು?
ಕನ್ನಡದ ರಿಯಾಲಿಟಿ ಶೋಗಳಲ್ಲಲಿ ಬಿಗ್ ಬಾಸ್ ಕೂಡ ಒಂದಾಗಿದೆ. ಈ ಶೋನ ಸೀಸನ್ 11ರಲ್ಲಿ ಲಾಯರ್ ಜಗದೀಶ್ ಮಾಡುವ ಕಾಮಿಡಿಗಳು ಭಾರೀ ವೈರಲ್ ಆಗುತ್ತಿದೆ. ಅದರಲ್ಲೂ ಇದೀಗ ಕ್ಯಾಪ್ಟನ್ ಆಗಿರುವ ಹಂಸ ಅವರ ಜೊತೆ ಡ್ಯಾನ್ಸ್, ಕಾಮಿಡಿ ದೃಶ್ಯಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಇನ್ನೂ ಇವರಿಬ್ಬರ ಬಗ್ಗೆ ನೆಟ್ಟಿಗರು ಏನು ಹೇಳುತ್ತಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಮೊದಲಿಗೆ ಹೊರಗಡೆ ಇದ್ದಾಗ ಕಾಮಿಡಿ ಪೀಸ್ ಆಗಿದ್ದ ಲಾಯರ್ ಜಗದೀಶ್ ಬಿಗ್ ಬಾಸ್ ಮನೆ ಸೇರಿದಾಗಿನಿಂದ ಪ್ರೇಮದ ಬಲೆಗೆ ಬಿದ್ದಿದ್ದಾರೆ ಎನ್ನುವುದಕ್ಕಿಂತ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮೆನಯಲ್ಲಿ ಕ್ಯಾಪ್ಟನ್ ಆಗಿರುವ ಹಂಸ ಹಾಗೂ ಜಗದೀಶ್ ನಡುವೆ ಆಗಾಗ ಜಗಳ ನಡಯುತ್ತಿದ್ದು, ಕೊನೆಗೆ ಅದು ಪ್ರೀತಿಯ ಕಡೆ ವಾಲುತ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಲ್ಲದೆ, ನಿಮ್ಮಿಬ್ಬರ ಅಂಕಲ್, ಆಂಟಿ ಜೋಡಿ ಚೆನ್ನಾಗಿದೆ ಅಂತಲೂ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇನ್ನು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಆಟಕ್ಕೆ ತಕ್ಕಂತೆ ಗಿಫ್ಟ್ ಸಿಕ್ಕಿದೆ. ಜನರು ಕಳಿಸಿರುವ ಗಿಫ್ಟ್ ಕಂಡು ಸ್ಪರ್ಧಿಗಳು ಆಶ್ಚರ್ಯಕ್ಕೆ ಒಳಗಾಗಿದ್ದರು. ಕಳೆದ ವಾರ ಮನೆಯ ಕ್ಯಾಪ್ಟನ್ ಆಗಿ ಮನೆ ನಿಭಾಯಿಸುವಲ್ಲಿ ಎಡವಿದ ಹಂಸಗೆ ಮಿದುಳಿನ ಫೋಟೋ ಗಿಫ್ಟ್ ಸಿಕ್ಕಿದ್ದು, ಇದರ ಅರ್ಥ ಬುದ್ದಿ ಉಪಯೋಗಿಸಿ ಎನ್ನುವಂತಿದೆ.
ಸಾಮಾಜಿಕ ಜಾಲತಾಣದಲ್ಲಿ ಜನರನ್ನು ನಕ್ಕು ನಲಿಸಿದ ಕಾಮಿಡಿಯನ್ ಧನರಾಜ್‌ಗೆ ಸೈಕಲ್ ಪಂಪ್ ಗಿಫ್ಟ್ ಬಂದಿದೆ. ಇದರ ಅರ್ಥ ಗಾಡಿ ಪಂಚರ್ ಆಗಿದೆ. ಪಂಪ್ ಹಾಕಿ ಓಡಿಸಿ ಎಂದರ್ಥ. ಭವ್ಯ ಗೌಡಗೆ ಕ್ಯಾಲ್ಕುಲೇಟರ್ ಗಿಫ್ಟ್ ಸಿಕ್ಕಿದ್ದು, ಲೆಕ್ಕಾಚಾರ ಹಾಕಿ ಆಟ ಆಡಿದರೆ, ಕಳೆದು ಹೋಗುತ್ತೀರಾ ಎಂದು ಬರೆಯಲಾಗಿದೆ.
ಜಗದೀಶ್‌ಗೆ ಜನ ಕಳುಹಿಸಿದ ಗಿಫ್ಟ್ ಏನು?: ಲಾಯರ್ ಕೆ.ಎನ್.ಜಗದೀಶ್ ಅವರಿಗೆ ಜನರು ಹಾರ್ಟ್ ಶೇಪ್ ಪತ್ತ ಕಳುಹಿಸಿದ್ದು, ಅದರ ಮೇಲೆ ಕ್ರಶ್ ಆಫ್ ಕರ್ನಾಟಕ ಎಂದು ಬರೆದಿದೆ. ಜೊತೆಗೆ ರೆಡ್ ಕಲರ್ ಬನಿಯನ್ ಕೂಡ ಕಳುಹಿಸಿದ್ದಾರೆ. ಹೊರಗೆ ವಿವಾದಗಳಿಂದ ಸದ್ದು ಮಾಡಿದ್ದೀರಿ, ಒಳಗೆ ಚೆನ್ನಾಗಿ ಆಡಿ ನಿಮ್ಮ ಜೊತೆ ನಾವಿದ್ದೇವೆ ಜಗ್ಗಿ ಅಂಕಲ್ ಎಂದು ಬರೆದು ಕಳುಹಿಸಿದ್ದಾರೆ.
ತ್ರಿವಿಕ್ರಮ್‌ಗೆ ವಿಶ್ಯೂಲ್ ಗಿಫ್ಟ್ ಸಿಕ್ಕಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತೀರ ಅಂತಾ ಅಂದುಕೊಂಡಷ್ಟು ಸದ್ದು ಬರುತ್ತಿಲ್ಲ ಎನ್ನುವುದು ಇದರ ಅರ್ಥವಾಗಿದೆ. ಉರೀತಾ ಇದ್ದ ಫೈಯರ್ ಬ್ರ್ಯಾಂಡ್ ಈಗ ಹಾರಿ ಹೋಗಿದೆ. ಹತ್ಕೊಳುತ್ತೆ ಬೆಂಕಿ, ಹತ್ತಿಸುತ್ತೀನಿ ಅಂತಾ ಚೈತ್ರಾ ಕುಂದಾಪುರ ಹೇಳಿದ್ದರು. ಆದರೆ ಇದ್ಯಾವುದು ಆಗುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಗೌತಮಿಗೆ ಮುಖವಾಡ ಗಿಫ್ಟ್ ಸಿಕ್ಕಿದ್ದು, ಮುಖವಾಡ ತೆಗೆದು ನಿಜವಾದ ಆಟಕ್ಕೆ ಯಾವಾಗ ಇಳಿಯುತ್ತೀರಾ ಎನ್ನುವ ಸಂದೇಶ ಬಂದಿದೆ. ಇನ್ನು ನಿಮ್ಮ ಸತ್ಯ ಹೊರಗೆ ಬರುತ್ತಿಲ್ಲ ಎಂದು ಕಿಚ್ಚ ಹೇಳುತ್ತಿದ್ದಂತೆ ಗೌತಮಿ ಕಣ್ಣಲ್ಲಿ ನೀರು ತುಂಬಿತ್ತು. ಆಟಕ್ಕೆ ತಕ್ಕಂತೆ ಸ್ಪರ್ಧಿಗಳಿಗೆ ಸಿಕ್ಕಿರುವ ಗಿಫ್ಟ್ ಆಟಗಾರರನ್ನು ಗುರಿ ತಲುಪಿಸುತ್ತಾ ಎಂಂದು ಇನ್ಮುಂದೆ ಕಾದು ನೋಡಬೇಕಿದೆ.
ಇನ್ನು ಹಂಸಾ ಅವರ ಕ್ಯಾಪ್ಟನ್ಸಿಯಲ್ಲಿ ಏನೇನು ಫೆಸಲಿಟಿ ಇತ್ತು ಎಂದು ಲಾಯರ್ ಜಗದೀಶ್‌ಗೆ ಸುದೀಪ್ ಅವರು ಪ್ರಶ್ಕೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಲಾಯರ್ ಜಗದೀಶ್ ಅವರು, ಬೇಜಾರ್ ಎಂದರೆ ನನ್ನ ಜೊತೆ ಡುಯೇಟ್ ಮಾಡಿದ್ದು ಅಂತಾ ಹೇಳುವ ಮೂಲಕ ಎಲ್ಲಾ ಸ್ಪರ್ಧಿಗಳನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತಾರೆ.
ಅಲ್ಲದ ಹಂಸಾ ಕೂಡ ಮಾತನಾಡಿದ್ದು, ಲಾಯರ್ ಬಳಿ ಮಾತಿನಿಂದ ಗೆಲ್ಲಲು ಆಗುವುದಿಲ್ಲ. ಮನಸನ್ನಾದ್ರೂ ಗೆದ್ದರೇ ನನ್ನ ಕೆಲಸ ಮಾಡಿಕೊಳ್ಳಬಹುದು ಎಂದು ಹೇಳಿದರು. ಇದಕ್ಕೆ ಸುದೀಪ್ ಏನು ಗೆದ್ದರೇ ಎಂದು ಪ್ರಶ್ನಿಸುತ್ತಿದ್ದಂತೆ ಎಲ್ಲರೂ ಬಿದ್ದು ಬದ್ದು ನಕ್ಕರು. ಇನ್ನು ಧನರಾಜ್ ಕಿಚ್ಚನ ಪಂಚಾಯತಿಯಲ್ಲಿ ಲಾಯರ್ ಬಗ್ಗೆ ಮಾತನಾಡಿ, ರಾತ್ರಿ ಮಲಗಿಕೊಳ್ಳಬೇಕಾದರೆ, ನನಗೆ ಫೀಲ್ ಆಗುತ್ತಿದೆ. ನನ್ನ ಹೆಂಡತಿ ಜೊತೆ ಒಂದು ಸಾರಿನೂ ಈ ಥರ ಡುಯೇಟ್ ಮಾಡಿಲ್ಲ ಎಂದು ಹೇಳಿದರು.
ಈ ವೇಳೆ ಜಗದೀಶ್ ಹಾಗೂ ಹಂಸಾ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಅಲ್ಲದೆ, ಸ್ಪರ್ಧಿಗಳು, ವೀಕ್ಷಕರನ್ನು ನಕ್ಕು ನಲಿಸಿದರು. ಹೀಗೆ ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರ ನಡುವೆ ನಡೆಯುವ ಪ್ರತಿಯೊಂದು ಕಾಮಿಡಿ ಮಾತುಕತೆಯೂ ಮನರಂಜನೆ ನೀಡಿವಂತಿರುತ್ತವೆ.












Click it and Unblock the Notifications