Big Boss: ಸೀರೆ ಕೊಡ್ತೀವಿ ಉಟ್ಕೊಳಿ.. ಜಗದೀಶ್ ನಿಮ್ಗೆ ಹೆಂಗಸಾಗೋಕೂ ಯೋಗ್ಯತೆ ಇಲ್ಲ.. ಲಾಯರ್‌ಗೆ ಹೀಗಂದಿದ್ದು ಯಾರು?
ಬಿಗ್‌ಬಾಸ್ ಮನೆ ರಣರಂಗವಾಗಿ ಹೋಗಿದೆ. ಲಾಯರ್ ಜಗದೀಶ್ ಮಾತಿಗೆ ಕೆಂಡಾಮಂಡಲರಾದ ದೊಡ್ಮನೆ ಹೆಣ್ಮಕ್ಕಳು ವಾದಕ್ಕಿಳಿದ ಘಟನೆ ನಡೆದಿದೆ. ಕಳೆದ ದಿನ ರೊಚ್ಚಿಗೆದ್ದ ಸ್ಪರ್ಧಿಗಳು ಜಗದೀಶ್ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವ ಲಾಯರ್ ಜಗದೀಶ್ ಚಳಿ ಬಿಡಿಸಿದ್ದಾರೆ ಬಿಗ್‌ಬಾಸ್ ಸ್ಪರ್ಧಿಗಳು.
ಜಗದೀಶ್ ಮನೆಯ ಮಹಿಳಾ ಸ್ಪರ್ಧಿಗಳ ಬಗ್ಗೆ ತುಂಬಾ ಕೆಟ್ಟದಾದ ಪದಗಳನ್ನು ಬಳಕೆ ಮಾಡಿದ್ದಾರೆ. ಜಗದೀಶ್ ಮಾತಿಗೆ ಕೋಪಗೊಂಡ ಮಾನಸ 'ಸೀರೆ ಕೊಡ್ತೀವಿ ಉಟ್ಕೋ' ಎಂದು ಕಿಡಿ ಕಾರಿದರೆ, ಹಂಸ 'ಅವರು ಹೆಂಗಸಾಗೋಕೂ ಯೋಗ್ಯತೆ ಇಲ್ಲ' ಎಂದಿದ್ದಾರೆ.

ಹೌದು... ಬಿಗ್‌ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಹವಾ ಸ್ವಲ್ಪಮಟ್ಟಿಗೆ ಇಲ್ಲ. ಮನೆಯಲ್ಲಿ ಹೀರೋ ಜೊತೆಗೆ ವಿಲನ್ ಕೂಡ ಆಗಿದ್ದಾರೆ ಜಗದೀಶ್. ಎಂಟ್ರಿಯಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಜಗದೀಶ್ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ವಿಲನ್ ಆಗಿದ್ದಾರೆ. ಹೀಗಿರುವಾಗ ಒಂದು ಹೊಸ ಪ್ರೋಮೋನ ಕಲರ್ಸ್ ಕನ್ನಡ ರಿಲೀಸ್ ಮಾಡಿದೆ.
ಈ ಪ್ರೋಮೋದಲ್ಲಿ ಗೋಲ್ಡ್ ಸುರೇಶ್ ಮಹಿಳೆಯರ ಬಗ್ಗೆ ಮಾತನಾಡಬೇಡ ಎಂದಿದ್ದಾರೆ. ಇದಕ್ಕೆ ಫುಲ್ ಗರಂ ಆಗಿರುವ ಜಗದೀಶ್ ನಾನು ಮಾತನಾಡುತ್ತೇನೆ, ಏನೋ ಇವಾಗ? ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮನೆ ಮಹಿಳೆಯರೆಲ್ಲ ಜಗದೀಶ್ ವಿರುದ್ಧ ವಾದಕ್ಕಿಳಿದಿದ್ದು ಕಂಡು ಬಂದಿದೆ.

ಕಳೆದ ದಿನ ಲಾಯರ್ ಜಗದೀಶ್ ಹಾಗೂ ರಂಜಿತ್ ನಡುವೆ ಬಿಗ್ ಫೈಟ್ ನಡೆದು ಇಬ್ಬರು ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆನ್ನುವ ಸುದ್ದಿ ಹರಿದಾಡಿತ್ತು. ಈ ನಡುವೆ ಪ್ರೋಮೋವೊಂದು ಬಿಡುಗಡೆ ಮಾಡಲಾಗಿದೆ. ಈ ಪ್ರೋಮೊದಲ್ಲಿ ಚೈತ್ರಾ, ಮಾನಸ, ಹಂಸ ಜಗದೀಶ್ ವಿರುದ್ಧ ಕೂಗಾಡಿರುವುದು ಕಂಡು ಬಂದಿದೆ. ಈ ವೇಳೆ ಜಗದೀಶ್ ತಾಕತ್ ಇದ್ದರೇ ಏನ್ ಮಾಡ್ಕೊಂತಿಯಾ ಮಾಡ್ಕೊ ಹೋಗು ಎಂದು ಚೈತ್ರಾಗೆ ಹೆದರಿಸಿದ್ದಾರೆ. ನಂತರ ಎಲ್ಲಾ ಮಹಿಳೆಯರು ಕೈಕೈ ಮಿಲಾಯಿಸುವ ಮಟ್ಟಿಗೆ ಗುಂಪಾಗಿ ಜಗಳ ಮಾಡಿದ್ದಾರೆ.
'ನಿನ್ನಂತವರನ್ನು ಎಷ್ಟು ಜನ ನೋಡಿಲ್ಲ..' ಅಂತ ಹೇಳುವ ಜಗದೀಶ್ ಮಾತಿಗೆ ಮಾನಸ 'ಸೀರೆ ಕೊಡ್ತೀವಿ ಉಟ್ಕೊಂ..' ಎಂದಿದ್ದಾರೆ. ಇದಕ್ಕೆ ಹಂಸಾ ಅವರು 'ಅವರು ಹೆಂಗಸು ಆಗೋಕು ಯೋಗ್ಯತೆ ಇಲ್ಲ..' ಎಂದಿದ್ದಾರೆ. ತಕ್ಷಣ ಜಗದೀಶ್ ಕೋಪದಿಂದ ಹೋಗಲೇ ಎಂದಿದ್ದಾರೆ. ಇದರಿಂದ ಕೋಪಗೊಂಡ ಹಂಸಾ ಬಿಗ್‌ಬಾಸ್ ಕ್ಯಾಮರಾ ಮುಂದೆ ಬಂದು ಇದಕ್ಕೆ ಪರಿಹಾರ ಬೇಕೇ ಬೇಕು ಎಂದು ಕೇಳಿದ್ದಾರೆ.
ಕಳೆದ ದಿನ ಲಾಯರ್ ಜಗದೀಶ್ ಹಾಗೂ ರಂಜಿತ್ ನಡುವೆ ಬಿಗ್ ಫೈಟ್ ನಡೆದು ಇಬ್ಬರು ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಈವರೆಗೂ ಬಿಗ್‌ಬಾಸ್‌ನಲ್ಲಿ ತೋರಿಸಲಾಗಿಲ್ಲ. ಆದರೆ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ಜಗಳ ನಡೆದಿರುವುದು ಮಾತ್ರ ಸತ್ಯ. ಯಾಕೆಂದರೆ ಬಿಗ್‌ಬಾಸ್ ಮನೆಯಿಂದ ಲಾಯರ್ ಜಗದೀಶ್ ಹೊರಬಂದಿದ್ದಾರೆ. ಅವರು ಹೊರ ಬಂದ ತಕ್ಷಣ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ ಜಗಳಕ್ಕೆ ಕಾರಣ ಏನು ಎನ್ನುವುದು ಮಾತ್ರ ಪ್ರೋಮೋದಲ್ಲಿ ಸ್ಪಷ್ಟವಾಗಿದೆ. ಲಾಯರ್ ಜಗದೀಶ್ ಮಾತು ಅವರಿಗೆ ಮುಳುವಾಗಿದ್ದು, ಮನೆಯಿಂದ ಹೊರಬರಲು ಕಾರಣ ಎನ್ನುವುದು ಗೊತ್ತಾಗಿದೆ. ಆದರೆ ಈ ಜಗಳ ಎಲ್ಲಿಂದ ಹೇಗೆ ಯಾರೊಂದಿಗೆ ಆರಂಭವಾಗಿ ಯಾರೊಂದಿಗೆ ಅಂತ್ಯಗೊಂಡಿದೆ ಎನ್ನುವ ವಿಚಾರ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಇದನ್ನು ತಿಳಿಯಲು ಇಂದಿನ ಎಪಿಸೋಡ್ ವರೆಗೂ ಕಾಯಬೇಕಿದೆ.












Click it and Unblock the Notifications