Bigg Boss Grand Finale: ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ದಿನಾಂಕ, ಸಮಯ ನೇರ ಪ್ರಸಾರದ ಬಗ್ಗೆ ತಿಳಿಯಿರಿ

Bigg Boss Grand Finale: ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ಗ್ರ್ಯಾಂಡ್‌ ಫಿನಾಲೆಗೆ ಇನ್ನೂಂದೇ ದಿನ ಬಾಕಿಯಿದೆ ಅಷ್ಟೇ. ಈ ಸಂಚಿಕೆಯನ್ನು ನೋಡಲು ರಾಜ್ಯಾದ್ಯಂತ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗಾದರೆ ಯಾವ್ಯಾವ ದಿನ ಎಷ್ಟು ಗಂಟೆಗೆ ಪ್ರಸಾರ ಆಗಲಿದೆ ಹಾಗೂ ಎಲ್ಲಿ ವೀಕ್ಷಣೆ ಮಾಡಬಹದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬಿಗ್‌ ಬಾಸ್‌ ಕನ್ನಡ 11 ಸೀಸನ್‌ನಲ್ಲಿ ಈ ಬಾರಿ ಒಂದು ಹೊಸ ದಾಖಲೆ ಸೃಷ್ಟಿಯಾಗಿದೆ. ಇದೇ ಮೊಟ್ಟ ಮೊದಲ ಬಾರಿ ಈ ಸೀಸನ್‌ನ ಕೊನೇ ಘಟ್ಟದವರೆಗೂ ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟವರು ಬಿಗ್‌ ಬಾಸ್‌ ಮನೆಯಲ್ಲಿ ಉಳಿದುಕೊಂಡು ದಾಖಲೆ ನಿರ್ಮಿಸಿದ್ದಾರೆ. ಇವರನ್ನು ಸೇರಿದಂತೆ ಇದೀಗ ದೊಡ್ಮನೆಯಲ್ಲಿ 6 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.

Know Bigg Boss Kannada Grand Finale Date Time and Live Broadcast Details

ಹನುಮಂತು ಹಾಗೂ ರಜತ್‌ ಬಂದ ಮೇಲೆನೇ ಬಿಗ್‌ಬಾಸ್‌ ಮನೆಗೆ ಒಂದು ಕಳೆ ಬಂತು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇವರಿಬ್ಬರು ಸಹ ಎಲ್ಲಾ ಟಾಸ್ಕ್‌ಗಳನ್ನು ಉಳಿದ ಸ್ಪರ್ಧಿಗಳಿಗಿಂತ ಉತ್ತಮವಾಗಿ ಆಡುವ ಮೂಲಕ ವೀಕ್ಷಕರ ಮನ ಗೆದ್ದಿದ್ದಾರೆ. ಅದರಲ್ಲೂ ರಜತ್‌ ಬರೀ ಬಾಯಲ್ಲೇ ಸೌಂಡ್‌ ಮಾಡುವ ಮೂಲಕ ಸಖತ್‌ ಹಿಟ್‌ ಆಗಿದ್ದರೆ, ಹನುಮಂತು ತಾನಾಯ್ತು, ತನ್ನ ಟಾಸ್ಕ್‌ಗಳಲ್ಲಿ ಭಾಗವಹಿಸುವುದು ಹಾಗೂ ಸಾಂಗ್‌ಗಳನ್ನು ಹಾಡುವ ಮೂಲಕ ಸೌಂಡ್‌ ಮಾಡಿಕೊಂಡು ಬಂದಿದ್ದಾರೆ.

ಹನುಮಂತು, ರಜತ್‌, ತ್ರಿವಿಕ್ರಮ್‌, ಮೋಕ್ಷಿತಾ, ಉಗ್ರಂ ಮಂಜು, ಭವ್ಯಾ ಗೌಡ ಈ 6 ಮಂದಿ ಇದೀಗ ಉಳಿದುಕೊಂಡಿದ್ದು, ಇವರ ಪೈಕಿ ಕಪ್‌ ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕಾತರದಿಂದ ಕಾದು ನೋಡುತ್ತಿದ್ದಾರೆ.

Know Bigg Boss Kannada Grand Finale Date Time and Live Broadcast Details

ವೀಕ್ಷಕರ ಗಮನಕ್ಕೆ: ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್‌ ಫಿನಾಲೆ ಶನಿವಾರ (ಜನವರಿ 25) ಹಾಗೂ ಭಾನುವಾರ (ಜನವರಿ 26) ನಡೆಯಲಿದೆ. ಫಿನಾಲೆ ಸಂಚಿಕೆ ಈ ಎರಡು ದಿನ ಕೂಡ ಸಂಜೆ 6 ಗಂಟೆಯಿಂದ ಪ್ರಸಾರ ಆಗಲಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಣೆ ಮಾಡಬಹುದಾಗಿದೆ.

ಇಷ್ಟು ದಿನ ಪ್ರತಿ ದಿನ ಎಪಿಸೋಡ್ ರಾತ್ರಿ 9:30ಕ್ಕೆ ಪ್ರಸಾರ ಆಗುತ್ತಿತ್ತು. ವೀಕೆಂಡ್ ಎಪಿಸೋಡ್ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು. ಆದರೆ, ಫಿನಾಲೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಯಿಂದ ಫಿನಾಲೆ ಪ್ರಸಾರ ಆರಂಭವಾಗಲಿದೆ. ಪ್ರೋಮೋ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತ ಅವರು ಟಾಸಕ್ಸ್‌ಗಳನ್ನು ಉತ್ತಮ ರೀತಿಯಲ್ಲಿ ಆಡಿ ವೀಕ್ಷಕೆ ಮನ ಗೆದ್ದಿದ್ದಾರೆ. ಯಾವುದೇ ಮೋಸ, ವಂಚನೆ, ಕಪಟ ಏನೂ ಅರಿಯದೆ ಅವರು ದೊಡ್ಮನೆಯಲ್ಲಿ ಇಷ್ಟು ದಿನ ಜೀವಿಸಿದ್ದಾರೆ. ಆದ್ದರಿಂದ ಅವರಿಗೆ ಬಿಗ್ ಬಾಸ್ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ದೊಡ್ಮನೆಯಲ್ಲಿ ಈ ಬಾರಿ ಹೊಸ ಹೊಸ ಪ್ರಯತ್ನ ಮಾಡಲಾಗಿದ್ದು, ಅಭಿಮಾನಿಗಳನ್ನು ಕರೆಸಿದ್ದು ಕೂಡ ಒಂದು. ಅಭಿಮಾನಿಗಳನ್ನು ಬಿಗ್ ಬಾಸ್ ಮನೆ ಒಳಗಡೆ ಆಹ್ವಾನಿಸಲಾಗಿತ್ತು. ಪ್ರತಿ ಸ್ಪರ್ಧಿಯನ್ನು ಗಾರ್ಡನ್ ಏರಿಯಾಗೆ ಕರೆಸಲಾಗಿದ್ದು, ಈ ವೇಳೆ ಅಲ್ಲಿ ಸ್ಪರ್ಧಿಗಳ ಅಭಿಮಾನಿಗಳನ್ನ ಕರೆಸಲಾಗಿದೆ.

ಇನ್ನು ಬಿಗ್ ಬಾಸ್ ಹನುಮಂತ ಅವರ ಬಗ್ಗೆ ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ. ಹನುಮಂತ ಮೊದಲ ಟಾಸ್ಕ್‌​ನಲ್ಲಿ ಆಟ ಆಡುವಾಗ ಸುಸ್ತಾಗಿ ಬಿದ್ದಿದ್ದು ನೋಡಿ ಸುತ್ತಲೂ ಇದ್ದ ಪ್ರತಿಯೊಬ್ಬರ ಮನದಲ್ಲಿ ಇದ್ದಿದ್ದು ಒಂದೇ ಪ್ರಶ್ನೆ. ಈಗೇನು ಮಾಡುತ್ತಾನೆ ನಿಮ್ಮ ಹೀರೋ ಎಂದು. ಆಗ ಹೀರೋ ಮಾತನಾಡುವುದಿಲ್ಲ. ಮನೆಯ ಪ್ರತಿ ಸದಸ್ಯರನ್ನ ಹಿಂದೆ ಹಾಕಿ ಟಿಕೆಟ್​ ಟು ಫಿನಾಲೆವರೆಗೂ ಬಂದಿರುವುದು ಅವರ ದೊಡ್ಡ ಸಾಧನೆಯಾಗಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಶೈಲಿಯಲ್ಲಿ ಆಟ ಆಡುವ ಮೂಲಕ ವೀಕ್ಷಕರಿಗೆ ಬದುಕಿನ ಪಾಠ ಕಲಿಸಿದ್ದೀರಿ. ಆಟ ಅಂತಾ ಬಂದಾಗ ದೋಸ್ತಾ ಅನ್ನೋದನ್ನ ನೋಡಲಿಲ್ಲ. ದೋಸ್ತ್‌ನ ವಿಷಯದಾಗ ಯಾವುದೇ ಆಟ ಆಡಿಲ್ಲ. ಬಿಗ್ ಬಾಸ್ ಮನೆಯಲ್ಲಿ ಧೀಮಂತ ಆಟ ಆಡಿದ ಹನುಮಂತ ನಿಮ್ಮ ಲುಂಗಿ ಲಾಂಚನ ಎಂದಿಗೂ ಬಾಗದಿರಲಿ. ಮನದಾಳದ ಅಭಿನಂದನೆಗಳು ಅಂತಲೂ ಬಿಗ್ ಬಾಸ್ ಹೇಳಿದರು. ಈ ಮೂಲಕ ಹನುಮಂತ ಅವರು ಈ ಬಾರಿ ಕಪ್ ಗೆಲ್ಲುವ ರೇಸ್‌ನಲ್ಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+