Kili Paul: ಈ ಕೈ ಕರ್ನಾಟಕದ ಆಸ್ತಿ..! ವಿಷ್ಣು ದಾದಾ, ಯಶ್ ಸಿನಿಮಾ ಡೈಲಾಗ್ ಹೊಡೆದ ತಾಂಜೇನಿಯ ಯೂಟ್ಯೂಬರ್
ತಾಂಜೇನಿಯ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಭಾರತದ ಮೇಲೆ ವಿಶೇಷ ಅಭಿಮಾನ ಇಟ್ಟುಕೊಂಡಿದ್ದಾರೆ. ಭಾರತದ ಹಲವು ಭಾಷೆಗಳ ಚಿತ್ರಗಳ ಡೈಲಾಗ್ ಮತ್ತು ಹಾಡುಗಳ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹಲವು ಕನ್ನಡ ಸಿನಿಮಾ ಹಾಡುಗಳನ್ನು ರೀಲ್ಸ್ ಮಾಡುವ ಮೂಲಕ ಕಿಲಿ ಪೌಲ್ ಗಮನ ಸೆಳೆದಿದ್ದರು. ರಾಜಕುಮಾರ ಸಿನಿಮಾದ ಗೊಂಬೆ ಹೇಳುತೈತೆ ಹಾಡಿಗೆ ರೀಲ್ಸ್ ಮಾಡಿ ಪುನೀತ್ ಅವರನ್ನು ಸ್ಮರಿಸಿದ್ದರು.

ಈಗ ಡಾ. ವಿಷ್ಣುವರ್ಧನ್ ಅವರ ಜನಪ್ರಿಯ ಡೈಲಾಗ್‌ನ ವಿಡಿಯೋ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ವಿಷ್ಣುವರ್ಧನ್ ಅಭಿನಯದ ಕದಂಬ ಸಿನಿಮಾದ ಜನಪ್ರಿಯ ಸಂಭಾಷಣೆ, ಈ ಕೈ ಕರ್ನಾಟಕದ ಆಸ್ತಿ ಎನ್ನುವ ಡೈಲಾಗ್‌ಗೆ ಕಿಲಿ ಪೌಲ್ ವಿಡಿಯೋ ಮಾಡಿದ್ದಾರೆ.
ವಿಷ್ಣು ದಾದಾ ಡೈಲಾಗ್‌ಗೆ ಮೆಚ್ಚುಗೆ
ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಕನ್ನಡಿಗರು ಕಾಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಇನ್‌ಸ್ಟಾಗ್ರಾಂನಲ್ಲಿ 2.74 ಲಕ್ಷ ಮಂದಿ ಲೈಕ್ ಮಾಡಿದ್ದು, 21 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಇದೊಂದೆ ಅಲ್ಲದೆ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ವಯಲೆನ್ಸ್ ಡೈಲಾಗ್‌ಗೆ ಕೂಡ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ಗಾಗಿ ಸೂಟಿನಲ್ಲಿ ಮಿಂಚಿರುವ ಕಿಲಿ ಪೌಲ್ ಭರ್ಜರಿಯಾಗಿ ಡೈಲಾಗ್ ಸಿಂಕ್ ಮಾಡಿದ್ದಾರೆ. ಈ ವಿಡಿಯೋವನ್ನು 13 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಇದರ ಜೊತೆ ಡಿ. 29ರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಟೇರ ಸಿನಿಮಾದ ಪಸಂದಾಗವ್ನೆ ಹಾಡಿಗೂ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದರು. ತಾಂಜೇನಿಯಾದ ಕಿಲಿ ಪೌಲ್ ತಮ್ಮ ಸಾಂಪ್ರದಾಯಿಕ ಉಡುಗೆ ಮೂಲಕ ಪ್ರಸಿದ್ಧಿ ಹೊಂದಿದವರು, ಇನ್‌ಸ್ಟಾಗ್ರಾಂನಲ್ಲಿ 59 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.
ಯಾರು ಈ ಕಿಲಿ ಪೌಲ್
ತಾಂಜೇನಿಯಾದ ಕಂಟೆಂಟ್ ರಚನೆಕಾರರಾದ ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ಅವರು ವಿವಿಧ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮತ್ತು ನೃತ್ಯ ಮಾಡುವ ಮೂಲಕ ಭಾರತದಲ್ಲಿ ಹೆಚ್ಚಿನ ಖ್ಯಾತಿ ಗಳಿಸಿದ್ದಾರೆ. ಅಣ್ಣ-ತಂಗಿ ಜೋಡಿ ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ ವಿವಿಧ ಭಾರತೀಯ ಹಾಡುಗಳಿಗೆ ನಟಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ.












Click it and Unblock the Notifications