ಬಿಗ್ ಬಾಸ್ ವೇದಿಕೆ ಮೇಲೆ ತಂದೆ ಬಳಿ ಕ್ಷಮೆ ಕೇಳಿದ ಕಿಚ್ಚ ಸುದೀಪ್

Kiccha Sudeep: ಬಿಗ್‌ ಬಾಸ್‌ ಶೋ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಈಗಾಗಲೇ ನಿನ್ನೆಗೆ ಸೀಸನ್‌ 11 ಕೂಡ ಮುಕ್ತಾಯವಾಗಿದ್ದು, ವಿನ್ನರ್ ಸ್ಪರ್ಧಿ ಕೂಡ ಘೋಷಣೆಯಾಗಿದೆ. ಈ ವೇಳೆ ಕಿಚ್ಚ ಸುದೀಪ್‌ ಅವರು ವೇದಿಕೆ ಮೇಲೆ ತಮ್ಮ ತಂದೆಗೆ ಕ್ಷಮೆಯಾಚಿಸಿದ ಘಟನೆ ನಡೆದಿದೆ. ಹಾಗಾದರೆ ಇದರ ಇಂದಿನ ಸರ್ಥವೇನು ಎಂದು ಇಲ್ಲಿ ತಿಳಿಯಿರಿ.

ಸುದೀಪ್‌ ಅವರು ಯಾವಾಗಲೂ ಒಂದು ಮಾತನ್ನೂ ಹೇಳುತ್ತಿರುತ್ತಾರೆ. ನಾವು ತಪ್ಪು ಮಾಡಿದರೆ ಅದು ನಮ್ಮ ತಂದೆ-ತಾಯಿಗೆ ಮಾಡಿದ ಅವಮಾನ. ಆದರೆ ನಾನು ಇದುವರೆಗೂ ನಮ್ಮ ತಂದೆ-ತಾಯಿ ಘಟತೆಯನ್ನು ಎತ್ತಿಹಿಡಿಯುವಂತಹ ಕೆಲಸವನ್ನು ಮಾಡಿದ್ದೇನೆ. ಇದೀಗ ಬಿಗ್ ಬಾಸ್‌ ಗ್ರ್ಯಾಂಡ್‌ ಫಿನಾಲೆ ವೇಳೆ ವೇದಿಕೆ ಮೇಲೆ ತಾವು ಹೇಳಿದಂತೆಯೇ ನಡೆದುಕೊಂಡಿದ್ದಾರೆ.

Kichcha Sudeep Apologizes to His Father on Bigg Boss Stage

ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್‌ ಫಿನಾಲೆಯಲ್ಲಿ ಸುದೀಪ್ ಅವರ ತಂದೆ ಸಂಜೀವ್ ಮತ್ತು ಮಗಳು ಸಾನ್ವಿ ವೇದಿಕೆ ಮೇಲೆ ಬಂದಿದ್ದು ವಿಶೇಷ ಆಗಿತ್ತು. ವೇದಿಕೆಯಲ್ಲಿನ ವರ್ತನೆಗೆ ಸುದೀಪ್ ತಮ್ಮ ತಂದೆಗೆ ಕ್ಷಮೆ ಕೇಳಿದರು. ಇದು ಅವರು ತಮ್ಮ ತಂದೆ-ತಾಯಿ ಮೇಲೆ ಇಟ್ಟಿರುವ ಅಪಾರ ಪ್ರೀತಿ, ಗೌರವವನ್ನು ಎತ್ತಿ ತೋರಿಸಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಸುದೀಪ್ ಪಾಲಿಗೆ ತುಂಬಾನೇ ವಿಶೇಷ ಆಗಿತ್ತು. ಆದ್ದರಿಂದ ಅವರ ಕುಟುಂಬ ವೇದಿಕೆ ಮೇಲೆ ಆಗಮಿಸಿತ್ತು. ಸುದೀಪ್ ಅವರ ತಂದೆ ಸಂಜೀವ್ ಅವರು ಇದೇ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆ ಮೇಲೆ ಬಂದಿದ್ದರು. ಅಲ್ಲದೆ, ಅವರ ಮಗಳು ಸಾನ್ವಿ ಕೂಡ ಆಗಮಮಿಸಿದ್ದು, ಇದು ಸುದೀಪ್ ಅವರಿಗೆ ದೊಡ್ಡ ಸರ್ಪೈಸ್‌ ಆಗಿತ್ತು.

ಈ ಸಂದರ್ಭ ಅವರ ಸಂತೋಷವನ್ನು 100 ಪಟ್ಟು ಹೆಚ್ಚು ಮಾಡಿದಂತಿತ್ತು. ಅವರು ವೇದಿಕೆ ಮೇಲೆ ತಂದೆಗೆ ಕ್ಷಮೆ ಕೇಳಿದ್ದು, ಇದಕ್ಕೆ ಕಾರಣವನ್ನೂ ಸಹ ಕೊಟ್ಟಿದ್ದಾರೆ. ಸುದೀಪ್ ಅವರು ಹೊರ ರಾಜ್ಯಗಳಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ಕಾರ್ಯನಿರತವಾಗಿದ್ದರೂ ಸಹ ಬಿಗ್ ಬಾಸ್ ಶೂಟ್ ಸಮಯದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದರು.

ಹೀಗೆ ಬರುವಾಗ ಮೊದಲು ಮನೆಗೆ ಹೋಗಿ ತಂದೆ-ತಾಯಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದೇ ಬಿಗ್ ಬಾಸ್ ಸೆಟ್‌ಗೆ ಎಂಟ್ರಿ ಕೊಡುತ್ತಿದ್ದರು. ಈ ಬಗ್ಗೆ ಅವರೇ ಅನೇಕ ಬಾರಿ ಹೇಳಿಕೊಂಡಿರುವ ಉದಾಹರಣೆಗಳುವೆ. ಇದು ಕಿಚ್ಚ ಸುದೀಪ್ ಅವರು ತಂದೆ-ತಾಯಿ ಮೇಲಿಟ್ಟಿದ್ದ ವಿಶೇಷ ಪ್ರೀತಿ ಬಗ್ಗೆ ಎತ್ತಿ ತೋರಿಸುತ್ತದೆ. ಇನ್ನು ಈ ಗೌರವಕ್ಕೆ ಧಕ್ಕೆ ಬಂದರಿಬಹುದು ಎಂದು ಕಿಚ್ಚ ಸುದೀಪ್‌​ಗೆ ಅನಿಸಿದ್ದು, ಈ ಕಾರಣಕ್ಕೆ ತಂದೆ ಬಳಿ ಕ್ಷಮೆ ಕೇಳಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಬಿಗ್ ಬಾಸ್ ವೇದಿಕೆ ಮೇಲೆ ಹತ್ತಿದ ಮೇಲೆ ಖಡಕ್‌ ಮಾತು ಬೇಕೇ ಬೇಕಾಗುತ್ತದೆ. ಆದ್ದರಿಂದ ಕಿಚ್ಚ ಸುದೀಪ್ ಅವರು ಗತ್ತಿನಲ್ಲಿ ಮಾತನಾಡುತ್ತಾರೆ. ಇದೇ ಕಾರಣಕ್ಕೆ ಅವರಿಗೆ ತುಂಬಾ ಅಭಿಮಾನಿ ಬಳಗವೇ ಇದೆ. ಆದರೆ, ನಿನ್ನೆ ಗ್ರ್ಯಾಂಡ್‌ ಫೀನಾಲೆ ವೇಳೆಯೂ ಹೀಗೆಯೇ ಮಾತನಾಡುತ್ತಿರುವಾಗ ಎದುರಿಗೆ ಅವರ ತಂದೆ ಕೂಡ ಇದ್ದರು.

ಅವರ ಎದುರು ಈ ರೀತಿ ಮಾತನಾಡಿದ್ದಕ್ಕೆ ಸುದೀಪ್ ಅವರಿಗೆ ಮುಜುಗರ ಎನಿಸಿದೆ. ವೇದಿಕೆ ಮೇಲೆ ಬಂದು ತಂದೆ ಎದುರು ಜೋಬ್ ಅಲ್ಲಿ ಕೈ ಹಾಕಿಕೊಂಡು ನಿಂತಿದ್ದು ಇಲ್ಲ. ಕ್ಷಮೆ ಇರಲಿ ಅಪ್ಪ ಎಂದು ಸುದೀಪ್ ಕೇಳಿಕೊಂಡರು. ಈಗಾಗಲೇ ಸುದೀಪ್‌ ಅವರು ಅವರು ತಾಯಿ ಕಳೆದುಕೊಂಡ ನೋವಿನಲ್ಲಿದ್ದಾರೆ. ಇನ್ನು ಅವರು ಕುಟುಂಬದ ಮೇಲೆ ಎಷ್ಟು ಗೌರವ ಇಟ್ಟಿದ್ದಾರೆ ಎಂದು ಈ ಘಟನೆಯಲ್ಲೇ ಗೊತ್ತಾಗುತ್ತದೆ. ಇನ್ನು ಸಾನ್ವಿ ಕೂಡ ಅಮ್ಮ ಅಮ್ಮ ಎಂಬ ಹಾಡು ಹಾಡಿದ್ದಾರೆ ಎಂದು ಭಟ್ರು ಹೇಳಿದಾಗ ಮಗಳ ಕಡೆ ನೋಡಿ ಹಾರ್ಟ್‌ ಸಿಂಬಲ್‌ ತೋರಿಸುತ್ತಾ ಕಿಚ್ಚ ಸುದೀಪ್‌ ಭಾವುಕರಾದ ಘಟನೆಯೂ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+