Kiccha Sudeep: ಕೈಗೆ ಬ್ಯಾಂಡೇಜ್, ನಟ ಕಿಚ್ಚ ಸುದೀಪ್‌ಗೆ ಏನಾಯ್ತು?
ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಸುದೀಪ್ ಅವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರ ಕೈಗೆ ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ತಮ್ಮ ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಕಿಚ್ಚನ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇಷ್ಟಕ್ಕೂ ಕಿಚ್ಚ ಸುದೀಪ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು? ಈ ವಿಚಾರ ಗೊತ್ತಾಗಿದ್ದು ಹೇಗೆ?
ವರದಿಗಳ ಪ್ರಕಾರ ಕಿಚ್ಚ ಸುದೀಪ್ ಅವರು ತಮ್ಮ ಮುಂದಿನ ಸಿನಿಮಾ ಬಿಲ್ಲ ರಂಗ ಭಾಷ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಇತ್ತೀಚೆಗೆ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ವಿಡಿಯೋ ಮೂಲಕ ಅವರು ಪ್ರತ್ಯಕ್ಷರಾಗಿದ್ದು, ಈ ವೇಳೆ ಅವರ ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವುದು ಬಹಿರಂಗವಾಗಿದೆ. ಬಿಗ್‌ಬಾಸ್ ಖ್ಯಾತಿಯ ನಟ ರಾಕೇಶ್ ಅಡಿಗ ಅಭಿನಯದ 'ನಾನು ಮತ್ತು ಗುಂಡ 2' ಸಿನಿಮಾಗೆ ಸುದೀಪ್ ವಿಶ್ ಮಾಡಿದ್ದಾರೆ. ಇದೇ ವಿಡಿಯೋದಲ್ಲಿ ಅವರ ಕೈಯಲ್ಲಿ ಬ್ಯಾಂಡೇಜ್ ಇರುವುದು ಗೊತ್ತಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಕಿಚ್ಚನ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಚೆನ್ನಾಗಿದ್ದ ಸುದೀಪ್ ಕೈಯಲ್ಲಿ ಬ್ಯಾಂಡೇಜ್ ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಸುದೀಪ್ ಅವರಿಗೆ ಏನಾಯ್ತು? ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಬಿಲ್ಲ ರಂಗ ಭಾಷಾ ಸಿನಿಮಾ ಶೂಟಿಂಗ್ ವೇಳೆ ಸುದೀಪ್ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿಡಿಯೋ ನೋಡಿದರೆ ಸುದೀಪ್ ಅವರು ಆರೋಗ್ಯವಾಗಿದ್ದು, ತುಂಬಾ ಜೋಶ್‌ನಿಂದಲೇ ಮಾತನಾಡಿರುವುದು ಸಹ ಕಂಡುಬರುತ್ತದೆ. ಸುದೀಪ್ ಅವರ ಕೈಯಲ್ಲಿ ಬ್ಯಾಂಡೇಜ್ ನೋಡಿ ಕಿಚ್ಚನಿಗಾಗಿ ಫ್ಯಾನ್ಸ್ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ರಾಕೇಶ್ ಅಡಿಗ ಸಿನಿಮಾಗೆ ಕಿಚ್ಚ ಸಾಥ್
ನಟ ರಾಕೇಶ್ ಅಡಿಗ ಅಭಿನಯದ 'ನಾನು ಮತ್ತು ಗುಂಡ 2' ಸಿನಿಮಾಗೆ ಸುದೀಪ್ ಶುಭಹಾರೈಸಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಸಿನಿಮಾದ ಮೊದಲ ಪಾರ್ಟ್ ಬಂದಾಗ ಆ ಟ್ರೈಲರ್ ನಂಗೆ ಬಹಳ ಇಷ್ಟವಾಗಿತ್ತು. ಈಗ ಭಾಗ ಎರಡರ ಟ್ರೈಲರ್ ಕೂಡ ನೋಡಿದೆ. ಅದೂ ಇಷ್ಟ ಆಯ್ತು. ಇತ್ತೀಚೆಗೆ ಚಾರ್ಲಿ ಸಿನಿಮಾ ಕೂಡ ಬಂದಿತ್ತು. ಸಾಕುಪ್ರಾಣಿಗಳೊಂದಿಗೆ ಅದ್ಭುತವಾಗ ಎಮೋಷನ್ಸ್ ಇಟ್ಕೊಂಡು ಸಿನಿಮಾ ಮಾಡಿರ್ತಾರೆ. ರಾಕೇಶ್ ಕೂಡ ಒಳ್ಳೆಯ ಪ್ರತಿಭೆ. ಇವರು ಕೂಡ ಅದ್ಭುತವಾದ ಸಿನಿಮಾ ಪ್ರಯತ್ನ ಮಾಡಿದ್ದಾರೆ. ಈ ಟ್ರೈಲರ್ ನನಗಂತೂ ಇಷ್ಟ ಆಯ್ತು, ನೀವೂ ನೋಡಿ ಎಂದಿದ್ದಾರೆ.
ಪಾರ್ಟ್ ಒನ್‌ಗೆ ತುಂಬಾ ಒಳ್ಳೆಯ ರೆಸ್ಪಾನ್ಸ್ ಸಿಕ್ತು. ಹಾಗಾಗಿ ಎರಡನೇ ಭಾಗ ಸಿನಿಮಾ ಮಾಡಿದ್ದೇವೆ ಎಂದು ರಾಕೇಶ್ ಅಡಿಗ ಹೇಳಿದ್ದಾರೆ. ಸಿನಿಮಾ ಎಮೋಷನ್ ಎರಡೂ ಒಂದಾದಾಗ ಒಳ್ಳೆಯ ಸಿನಿಮಾ ಮೂಡುತ್ತೆ. ಇದು ಕೂಡ ಒಳ್ಳೆಯ ಪ್ರಯತ್ನ. ರಾಕೇಶ್ ಅಂತಹವರು ಮತ್ತಷ್ಟು ಬೆಳೆಯಲಿ, ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಅಂದಿದ್ದಾರೆ ಸುದೀಪ್.












Click it and Unblock the Notifications