ದೊಟ್ಟ ಮಟ್ಟದಲ್ಲಿ ಸಕ್ಸಸ್ ಕಂಡ ಬಿಗ್‌ ಬಾಸ್‌ ಕನ್ನಡ 11 ಸೀಸನ್: ಕಿಚ್ಚ ಸುದೀಪ್‌ ಕ್ರೆಡಿಟ್‌ ಕೊಟ್ಟಿದ್ಯಾರಿಗೆ ಗೊತ್ತಾ?

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದಾಗಿದೆ. ನಿನ್ನೆ (ಜನವರಿ 26) 11 ಸೀಸನ್‌ ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಈ ವೇಳೆ ಯೋಗರಾಜ್‌ ಭಟ್ರು ವೇದಿಕೆ ಮೇಲೆ ಆಗಮಿಸಿ ಸುದೀಪ್‌ಗೆ ಸಮಯವನ್ನು ಲೆಕ್ಕಿಸದೇ ಇಷ್ಟು ಕಷ್ಟಪಟ್ಟು 11 ಸೀಸನ್‌ವರೆಗೂ ಶೋ ನಡೆಸಿಕೊಂಡು ಬಂದಿದ್ದೀರಾ, ಈ ಬಗ್ಗೆ ಏನು ಹೇಳುತ್ತೀರಾ? ಎಂದು ಕೇಳಿದಾಗ ಕಿಚ್ಚ ಸುದೀಪ್‌ ಹೇಳಿದ್ದೇನು ಎಂದು ಇಲ್ಲಿ ತಿಳಿಯಿರಿ.

ನನ್ನ ಎಫರ್ಟ್ ಏನು ಇಲ್ಲ. ಇಲ್ಲಿರುವ ಸ್ಪರ್ಧಿಗಳೇ ದೊಡ್ಡ ಕ್ರೆಡಿಟ್‌. ನನ್ನದು ಅಂತಾ ಇರುವುದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಗಳು ಮತ್ತು ತಂದೆ ಕಡೆ ಕೈ ತೋರಿಸಿ ಇವರೇ ನೋಡಿ ಎಂದು ಹೇಳುತ್ತಾರೆ. ಇನ್ನು ಸೀಸನ್‌ 11 ಇಷ್ಟೊಂದು ಚೆನ್ನಾಗಿ ಮೂಡಿ ಬರಲು ಯಾರೆಲ್ಲ ಕಾರಣ ಅಂತಲೂ ಹೇಳಿ ಗಮನ ಸೆಳದಿದ್ದಾರೆ.

Kiccha Sudeep reaction on Bigg Boss 11 Season success Credit

ಬಳಿಕ ಮತ್ತೆ ಭಟ್ರು, ಸರ್ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸಿಕೊಟ್ಟು ನಂದೇನು ಶ್ರಮ ಇಲ್ಲ ಅಂತಾ ಹೇಳುತ್ತೀರಲ್ಲ ಎಂದು ಹೇಳುತ್ತಾರೆ. ಆಗಲೂ ಕಿಚ್ಚ ಸುದೀಪ್‌ ಅವರು ತನ್ನ ತಂದೆ ಮತ್ತು ಮಗಳ ಕಡೆ ಕೈ ಮಾಡಿ ತೋರಿಸಿ ಅವರೇ ನನ್ನ ಆಸ್ತಿ, ಅವರೇ ನನಗೆಲ್ಲ, ಅವರು ನನ್ನವರು ಎಂದು ಹೇಳಿದಾಗ ಭಟ್ರು ಭಾವುಕರಾಗಿ ಅವರನ್ನು ತಬ್ಬಿಕೊಳ್ಳುತ್ತಾರೆ.

ಕಿಚ್ಚ ಸುದೀಪ್‌ ಅಂದ್ರೆ ಕನ್ನಡ ಬಿಗ್‌ ಬಾಸ್‌. ಇಲ್ಲದಿದ್ರೆ ಬಿಗ್ ಬಾಸ್‌ ಕಾರ್ಯಕ್ರಮಕ್ಕೆ ಕಳೆನೇ ಇರಲ್ಲ ಎಂದು ಕರ್ನಾಟಕದ ಬಹುತೇಕ ಮಂದಿ ಹೇಳುತ್ತಿದ್ದಾರೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 1ರಿಂದ 11ರವರೆಗೂ ಎಲ್ಲೂ ತಪ್ಪಾಗದಂತೆ ಅದ್ಭುತವಾಗಿ ಶೋ ನಡೆಸಿಕೊಂಡು ಬಂದಿದ್ದಾರೆ. ಅಲ್ಲದೆಮ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಅದರಲ್ಲೂ ಈ ಬಾರಿಯ ಸೀಸನ್‌ 11 ದೊಡ್ಡ ಮಟ್ಟದಲ್ಲಿ ಸಕ್ಸಸ್‌ ಕಂಡಿದೆ ಇದಕ್ಕೆ ಕಿಚ್ಚ ಸುದೀಪ್‌ ಅವರ ಶ್ರಮ ಹೆಚ್ಚಿದೆ ಅಂದರೆ ತಪ್ಪಾಗಲಾರದು.

ಯಾಕೆಂದರೆ ವೇದಿಕೆ ಮೇಲೆ ನಿಂತುಕೊಂಡು 2 ತಾಸುಗಟ್ಟಲೇ ನಿಂತುಕೊಂಡು ಸ್ಪರ್ಧಿಗಳನ್ನು ತಿದ್ದಿ ಉತ್ತಮ ದಾರಿಯಲ್ಲಿ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಬಿಗ್‌ ಬಾಸ್‌ ಮನೆಗೆ ಬರುವ ಎಲ್ಲಾ ಸ್ಪರ್ಧಿಗಳು ಒಂದೇ ರೀತಿಯಾಗಿ ಇರಲ್ಲ. ಇಂತಹದ್ಧರಲ್ಲೂ ತಾಳ್ಮೆಯಿಂದ ಅವರ ತಪ್ಪುಗಳನ್ನೆಲ್ಲಾ ತಿದ್ದಿ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಸಕ್ಸಸ್‌ ಅಗುವಂತೆ ಮಾಡಿರುವುದರ ಹಿಂದೆ ಸುದೀಪ್‌ ಅವರ ಶ್ರಮ ತುಂಬಾ ಇದೆ.

ಸೀಸನ್‌ 11 ಶೋ ಬಳಿಕ ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ಕನ್ನಡ ಶೋ ನಿರೂಪಕರಾಗಿ ಮುಂದುಬರೆಯುವುದಿಲ್ಲ ಎಂದು ಹೇಳಿದ್ದರು. ಇದರಿಂದ ಅಭಿಮಾನಿಗಳು ಶಾಕ್‌ ಆಗಿದ್ದು, ಸುದೀಪ್‌ ನಿರೂಪಣೆ ಇಲ್ಲದೆ, ಬಿಗ್‌ ಬಾಸ್‌ ನೋಡುವುಗು ಕಷ್ಟ ಎಂದು ಅಭಿಮಾನಿಗಳು ಬೇಸರವನ್ನು ಹೊರಹಾಕುತ್ತಲ ಇದ್ದಾರೆ.

ಇನ್ನು ಬಿಗ್‌ ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ವೇಳೆ ಸುದೀಪ್ ಅವರಿಗೆ ನಿರ್ದೇಶಕ ಯೋಗರಾಜ್ ಭಟ್ ಅವರ ಮೂಲಕ ಗೌರವ ಸಲ್ಲಿಕೆ ಮಾಡಲಾಗಿದೆ. ಸ್ವತಃ ಯೋಗರಾಜ್‌ ಭಟ್ಟರು ಬಿಗ್ ಬಾಸ್‌ ವೇದಿಕೆಗೆ ಬಂದು ಸುದೀಪ್‌ ಅವರಿಗೆ ಗೌರವ ಸಲ್ಲಿಸಿದರು. ಈ ವೇಳೆ ಸುದೀಪ್‌ ಅವರನ್ನು ಯೋಗರಾಜ್‌ ಭಟ್ಟರು ಮಾತನಾಡಿಸಿದರು.

ಈ 11 ಸೀಸನ್‌ ಅನ್ನು ನಡೆಸಿಕೊಂಡು ಬಂದಿದ್ದೀರಿ, ನೀವಿಲ್ಲದೇ ಬಿಗ್‌ ಬಾಸ್‌ ಇಲ್ಲ, ಬಿಗ್‌ ಬಾಸ್‌ಗೆ ತೂಕ ತಂದು ಕೊಟ್ಟವರೇ ನೀವು. ಕೊನೆಯದಾಗಿ ನೀವು ಈ ಶೋ ಬಗ್ಗೆ ಏನು ಹೇಳುತ್ತೀರಿ ಎಂದು ಸುದೀಪ್‌ಗೆ ಯೋಗರಾಜ್‌ ಭಟ್ ಕೇಳಿದರು. ಆಗ ಸುದೀಪ್‌ ಒಂದೇ ಮಾತಿನಲ್ಲಿ, ಭಟ್ರು ಹೇಳಿದಂತೆ ಹೌದು ಸ್ವಾಮಿ ಎಂದು ಒಂದೇ ಮಾತಿನಲ್ಲಿ ಉತ್ತರ ನೀಡಿದರು.

ಇಡೀ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗೆಲುವಿನ ಕ್ರೇಡಿಟ್‌ ಅನ್ನು ಸುದೀಪ್‌ ಅವರಿಗೆ ಯೋಗರಾಜ್ ಭಟ್ ನೀಡಿದರು. ಆಗ ಸುದೀಪ್‌, ನನ್ನದೇನು ಇಲ್ಲ. ಇಷ್ಟು ದಿನ ಶೋ ಹಿಂದೆ ಕೆಲಸ ಮಾಡಿದ ಪಿಸಿಆರ್‌ ಟೀಮ್‌ಗೆ ಕ್ರೆಡಿಟ್‌ ಕೊಟ್ಟು ವೀಕ್ಷಕರ ಮನ ಗೆದ್ದರು. ಅಲ್ಲದೆ, ಇವತ್ತು ಈ ಬಿಗ್‌ ಬಾಸ್‌ ಶೋ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣವೇ ತೆರೆ ಹಿಂದೆ ಕೆಲಸ ಮಾಡಿದ ಪಿಸಿಆರ್‌ ಟೀಂ ಎಂದು ಹೇಳಿದರು.

ಆರಂಭವಾದ ಮೊದಲ ದಿನದಿಂದಲೂ ಪಿಸಿಆರ್‌ ಟೀಂ ತುಂಬಾ ಹಾರ್ಡ್‌ವರ್ಕ್‌ ಮಾಡಿದೆ. ಪಿಸಿಆರ್‌ನ ಹುಡುಗರು ತುಂಬಾ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ನಾನು ಒಂದು ದಿನ ಬಂದು ಶೋ ನೋಡಿ ತೀರ್ಪು ಕೊಡುತ್ತೇನೆ. ಆದರೆ, ಇವರೆಲ್ಲಾ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಇವರನ್ನು ಹೀಗೆ ಮುಂದುವರಿಸಿಕೊಂಡು ಹೋದರೆ, ಮುಂದಿನ ಸೀಸನ್‌ಗಳು ಹೀಗೆ ಯಶಸ್ವಿಯಾಗಿ ನಡೆಯುತ್ತದೆ ಎಂದು ಹೇಳಿದರು.

ಅಲ್ಲದೆ, ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಹೊಗಳಿದ ಕಿಚ್ಚ ಸುದೀಪ್‌, ಬಿಗ್‌ ಬಾಸ್‌ ಸೀಸನ್‌ 11 ಇಷ್ಟೊಂದು ಯಶಸ್ವಿಯಾಗಿ ಮೂಡಿ ಬರಲು ಬಿಗ್‌ ಬಾಸ್‌ ಸ್ಪರ್ಧಿಗಳೇ ಕಾರಣ. ಎಲ್ಲರ ಭವಿಷ್ಯ ಚೆನ್ನಾಗಿರಲಿ ಎಂದು ಆರೈಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+