ಈಗ ಮೆಣಸಿನಕಾಯಿ ಬೇಡ, ಬೇರೆ ವೇದಿಕೆಯಲ್ಲಿ ಮಾತನಾಡ್ತೀನಿ: ಕನಕಪುರ ಶ್ರೀನಿವಾಸ್ ವಿಚಾರಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ
Kiccha Sudeep press meet: ನಟ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಇತ್ತೀಚೆಗಷ್ಟೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮಹತ್ವದ ಗೆಲುವಿನ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಈ ಹಿಂದೆ ಸುದೀಪ್ ಸೇರಿದಂತೆ ಸ್ಯಾಂಡಲ್ವುಡ್ನ ನಟರು ಹಾಗೂ ನಿರ್ದೇಶಕರ ಬಗ್ಗೆ ವೇದಿಕೆಯಲ್ಲೇ ಅವಾಚ್ಯ ಪದಗಳನ್ನು ಬಳಸಿರುವ ವಿಚಾರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದವು. ಇದಕ್ಕೆ ಇಂತಹ ಸಮಯದಲ್ಲಿ ಮೆಣಸಿನಕಾಯಿ ಯಾಕೆ? ಎಂದರು.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ವಿಷಯವನ್ನು ಬೇರೆಯದೇ ಶೈಲಿಯಲ್ಲಿ ತಿರುಗಿಸಿ ಉತ್ತರಿಸಿದರು. "ಇಂತಹ ಸಿಹಿಯಾದ ಸಮಯದಲ್ಲಿ ಮೆಣಸಿನಕಾಯಿ ಯಾಕೆ ಈಗ? ಅದಕ್ಕೆ ಇನ್ನೊಂದು ವೇದಿಕೆ ಹತ್ತುತ್ತೀನಿ, ಆಗ ಮಾತನಾಡ್ತೀನಿ. ಲಾಡು ತಿನ್ನುವ ಸಮಯದಲ್ಲಿ ಮೆಣಸಿನಕಾಯಿ ಬೇಡ" ಎಂದು ಹೇಳಿದರು.

30 ವರ್ಷದ ಅನುಭವದ ಮಾತು
ತಮ್ಮ ಉತ್ತರವನ್ನು ಇನ್ನಷ್ಟು ಸ್ಪಷ್ಟಪಡಿಸಿದ ಸುದೀಪ್, "ಇದು ನನ್ನ 30 ವರ್ಷದ ಅನುಭವದ ಮಾತು. ನಾವು ಈ ಕಪ್ ಗೆಲ್ಲೋಕೆ 12 ವರ್ಷ ಕಾದಿದ್ದೀವಿ. ಆ ವಿಷಯಕ್ಕೂ ಸ್ವಲ್ಪ ಕಾಯಿರಿ" ಎಂದು ಹೇಳಿದ್ದಾರೆ. ಸದ್ಯಕ್ಕೆ ಸಿಸಿಎಲ್ ಗೆಲುವಿನ ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಿರುವ ಸುದೀಪ್, ವಿವಾದಾತ್ಮಕ ವಿಚಾರಗಳ ಬಗ್ಗೆ ಮಾತನಾಡಲು ಸೂಕ್ತ ಸಮಯ ಮತ್ತು ವೇದಿಕೆ ಬೇರೆ ಇದೆ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ.
ಸುದೀಪ್ ಅವರ ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು "ಸಮಯಕ್ಕೆ ತಕ್ಕ ಉತ್ತರ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿಸಿಎಲ್ ಕಪ್ ಗೆಲುವಿನ ಖುಷಿಯಲ್ಲಿ ಸ್ಯಾಂಡಲ್ವುಡ್ ಸಂಭ್ರಮದಲ್ಲಿರುವಾಗ, ಮುಂದಿನ ದಿನಗಳಲ್ಲಿ ಈ ವಿವಾದದ ಬಗ್ಗೆ ಸುದೀಪ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಫಿಲ್ಮ್ ಚೇಂಬರ್ಗೆ ದೂರು
ಈ ಹಿಂದೆಯೂ ಸಿನಿಮಾ ಸಿನಿಮಾ ವೇದಿಕೆಯಲ್ಲಿ ಕನಕಪುರ ಶ್ರೀನಿವಾಸ್ ಅವರು ನಟ ಕಿಚ್ಚ ಸುದೀಪ್ ಬಗ್ಗೆ ಆರೋಪಗಳನ್ನು ಮಾಡಿದ್ದರು. ಏಕವಚನದಲ್ಲಿ ನಿಂದಿಸಿದ್ದರು. ಆಗಲೂ ಶ್ರೀನಿವಾಸ್ ಅವರು ಮಾತನಾಡಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದರ ಬಗ್ಗೆಯೂ ಸುದೀಪ್ ಮಾತನಾಡಲಿಲ್ಲ. ಇತ್ತೀಚೆಗೆ ಕಾಟನ್ಪೇಟೆ ಸಿನಿಮಾದ ವೇದಿಕೆಯಲ್ಲೂ ಶ್ರೀನಿವಾಸ್ ಅವರು ನಟರಾದ ದರ್ಶನ್, ಧ್ರುವ ಸರ್ಜಾ, ಪುನೀತ್ ರಾಜ್ಕುಮಾರ್, ನಿರ್ದೇಶಕರಾದ ಪ್ರೇಮ್, ಎ.ಪಿ.ಅರ್ಜುನ್ ಸೇರಿದಂತೆ ಹಲವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರು.
ದರ್ಶನ್ಗೆ ನಾನು ದುಡ್ಡು ಕೊಟ್ಟಿದ್ದೆ. ಪುನೀತ್ ರಾಜ್ಕುಮಾರ್ನ ಹೀರೋ ಆಗಿದ್ದು ನನ್ನಿಂದ, ರಾಜ್ಕುಮಾರ್ ಇಂದ ಅಲ್ಲ. ನನಗೆ ಮೋಸ ಮಾಡಿದ್ದಕ್ಕೆ ದೇವರು ಮೇಲೆ ಕರ್ಕೊಂಡ ಎಂದು ನಾಲಿಗೆ ಹರಿಬಿಟ್ಟಿದ್ದರು. ಪ್ರೇಮ್ ಬಗ್ಗೆಯೂ ಏಕವಚನ ಬಳಸಿದ್ದ ಶ್ರೀನಿವಾಸ್, ಗಂಡಸಾಗಿದ್ರೆ, ಧಮ್ ಇದ್ರೆ ನನ್ ಮುಂದೆ ಬಂದು ನಿಲ್ಲೋಕೆ ಹೇಳಿ ಎಂದು ಸವಾಲ್ ಕೂಡ ಹಾಕಿದ್ದರು. ಈ ಸಂಬಂಧ ಶ್ರೀನಿವಾಸ್ ಅವರ ವಿರುದ್ಧ ಪ್ರೇಮ್ ಫಿಲ್ಮ್ ಚೇಂಬರ್ಗೆ ದೂರು ಸಹ ನೀಡಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications