Kiccha Sudeep: ನನ್ನ ಫ್ಯಾನ್ಸ್‌ಗೆ ಬುದ್ಧಿ ಹೇಳುತ್ತೇನೆ ಎಂದಿದ್ಯಾಕೆ ಕಿಚ್ಚ ಸುದೀಪ್ ?
ಕಿಚ್ಚ ಸುದೀಪ್ ಅವರ ಬಹುನಿರೀಕ್ಷೆಯ ಮ್ಯಾಕ್ಸ್ ಸಿನಿಮಾ ಭರ್ಜರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇದರ ಮಧ್ಯೆ ಬೇಡ ಎಂದರೂ ಡಿ ಬಾಸ್ ದರ್ಶನ್ vs ಕಿಚ್ಚ ಸುದೀಪ್ ಎನ್ನುವುದು ಮುಂದುವರಿಯುತ್ತಲ್ಲೇ ಇದೆ. ಈ ನಡುವೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ವಾರ್ ಜೋರಾಗಿದೆ. ಮ್ಯಾಕ್ಸ್ ಸಿನಿಮಾದ ಕೇಕ್ ವಿಚಾರದ ಬಗ್ಗೆ ಈಗಾಗಲೇ ಸುದೀಪ್ ಮಾತನಾಡಿ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಟರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಬಾಸ್ ಅಂತ ಕರಿತಾರೆ. ಅದರ ಮೂಲಕ ನಾನೂ ಯಾರಿಗೂ ಟಾಂಗ್ ಕೊಡಬೇಕಾಗಿಲ್ಲ. ದರ್ಶನ್ ಅವರೂ ನಮ್ಮ ಚಿತ್ರರಂಗದವರೇ ಅಂತ ಸುದೀಪ್ ಹೇಳಿದ್ದರು. ಇದೀಗ ಅವರು ಸ್ಪಷ್ಟನೆ ಕೊಟ್ಟ ಮೇಲೂ ಫ್ಯಾನ್ಸ್ ವಾರ್ ಜೋರಾಗಿದ್ದು, ಫ್ಯಾನ್ಸ್ ವಾರ್‌ನ ಬಗ್ಗೆ ಮತ್ತೊಮ್ಮೆ ಸುದೀಪ್ ಅವರು ಮೌನ ಮುರಿದಿದ್ದಾರೆ.

ಮ್ಯಾಕ್ಸ್ ಸಿನಿಮಾ ರಿಲೀಸ್ ಆದ ಮೇಲೆ ಹಾಗೂ ಬಾಸಿಸಂ ಕೇಕ್‌ನ ವಿಚಾರವಾಗಿ ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್‌ಗಳ ನಡುವೆ ಫ್ಯಾನ್ಸ್ ವಾರ ಜೋರಾಗಿದೆ. ಬಾಸಿಸಂ ಕೇಕ್‌ಗೆ ಸೆಡ್ಡು ಹೊಡೆದಿರುವ ದರ್ಶನ್ ಫ್ಯಾನ್ಸ್ ಬಾಸಿಸಂನ ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಅಂತ ಟಕ್ಕರ್ ಕೊಡ್ತಾ ಇದ್ದಾರೆ. ದಿನದಿಂದ ದಿನಕ್ಕೆ ಡಿಬಾಸ್ ಫ್ಯಾನ್ಸ್ ಟಾಂಗ್ ಕೊಡೋದು ಜಾಸ್ತಿನೇ ಆಗ್ತಿದೆ.
ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಿದೆ. ಬಾಸಿಸಂ ವಿಚಾರ ಇರಲಿಲ್ಲ ಅಂತಾದರೆ, ಕೇಕ್ ಕಟ್ ಮಾಡುವಾಗಲೇ ಸುದೀಪ್ ಅವರು ಅದನ್ನು ತೆಗೆಸಬಹುದಿತ್ತು. ಇಲ್ಲವೇ ಬೇರೆ ಕೇಕ್ಸ್ ತರಿಸಬಹುದಿತ್ತು ಅಂತಲೂ ದರ್ಶನ್ ಫ್ಯಾನ್ಸ್ ಕಮೆಂಟ್ ಮಾಡ್ತಾ ಇದ್ದಾರೆ. ಈ ರೀತಿ ಇರುವಾಗಲೇ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ಮಾತನಾಡಿದ್ದು, ನನ್ನ ಫ್ಯಾನ್ಸ್ ಏನಾದರೂ ಮಾಡ್ತಾ ಇದ್ದಾರೆ ಹೇಳಿ ಅಂತ ಪ್ರಶ್ನೆ ಮಾಡಿದ್ದಾರೆ.

ನನ್ನ ಫ್ಯಾನ್ಸ್‌ಗೆ ನಾನು ಬುದ್ಧಿ ಹೇಳುತ್ತೇನೆ ಎಂದ ಕಿಚ್ಚ
ಸ್ಟಾರ್ ನಟರ ಫ್ಯಾನ್ಸ್ ವಾರ್‌ನ ಬಗ್ಗೆ ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ಮೌನ ಮುರಿದಿದ್ದಾರೆ. ನನ್ನ ಫ್ಯಾನ್ಸ್ ಸ್ಟಾರ್ ವಾರ್ ಮಾಡ್ತಾ ಇದ್ದರೆ ಹೇಳಿ ಅಂತ ಕೇಳಿರುವ ಅವರು, ನಾನು ನನ್ನ ಫ್ಯಾನ್ಸ್‌ಗೆ ಬುದ್ಧಿ ಹೇಳುತ್ತೇನೆ. ಬೇರೆ ನಟರು ಅವರ ಫ್ಯಾನ್ಸ್‌ಗೆ ಬುದ್ಧಿ ಹೇಳಬೇಕು ಎಂದು ಹೇಳಿದ್ದಾರೆ. ಈ ಮೂಲಕ ಸ್ಟಾರ್ ವಾರ್‌ನಲ್ಲಿ ವಿವಿಧ ನಟರ ಜವಾಬ್ದಾರಿಯೂ ಇದೆ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ. ನನ್ನ ಫ್ಯಾನ್ಸ್‌ಗೆ ನಾನು ಬುದ್ಧಿ ಹೇಳಬಲ್ಲೆ... ಉಳಿದ ಹೀರೋಗಳ ಫ್ಯಾನ್ಸ್‌ಗೆ ಅವರ ಹೀರೋಗಳೇ ಬುದ್ಧಿ ಹೇಳಬೇಕು ಅಂತ ಅವರು ಹೇಳಿದ್ದಾರೆ.
ದರ್ಶನ್ ಫ್ಯಾನ್ಸ್ Vs ಕಿಚ್ಚ ಸುದೀಪ್ ಫ್ಯಾನ್ಸ್
ದರ್ಶನ್ ಫ್ಯಾನ್ಸ್ ಹಾಗೂ ಕಿಚ್ಚ ಸುದೀಪ್ ಫ್ಯಾನ್ಸ್‌ಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ನಿಲ್ಲುತ್ತಲ್ಲೇ ಇಲ್ಲ. ಮ್ಯಾಕ್ಸ್ ಸಿನಿಮಾದ ರಿಲೀಸ್‌ನ ನಂತರ ಹಲವು ಕಾರಣಕ್ಕೆ ಈ ಇಬ್ಬರು ಫ್ಯಾನ್ಸ್‌ಗಳ ನಡುವೆ ಜಗಳ ಶುರುವಾಗಿದೆ. ಮೊದಲನೆಯದಾಗಿ ಜೈಲಿನಲ್ಲಿ ಮುದ್ದೆ ಮುರಿಯೋದಲ್ಲ... ಎನ್ನುವ ಬ್ಯಾನರ್‌ನಿಂದ ಸ್ಟಾರ್‌ವಾರ್ ಶುರುವಾಯ್ತು. ಅದಾದ ಮೇಲೆ ಬಾಸಿಸಂ ಕಾಲ ಮುಗಿಯಿತು ಎನ್ನುವುದು ಈ ವಾರ್ ಇನ್ನೂ ಜೋರಾಗುವುದಕ್ಕೆ ಕಾರಣವಾಯ್ತು. ಇದೀಗ ಸುದೀಪ್ ಅವರು ಸ್ಪಷ್ಟನೆ ಕೊಟ್ಟ ಮೇಲೂ ಫ್ಯಾನ್ಸ್ ವಾರ್ ಜೋರಾಗಿದೆ.












Click it and Unblock the Notifications