Sudeep: ವಿಶೇಷ ಉಡುಗೊರೆ ಜೊತೆ ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ಬಂದ ಕಿಚ್ಚ ಸುದೀಪ್
ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊಮ್ಮಗನ ನಾಮಕರಣ ಅದ್ದೂರಿಯಾಗಿ ನಡೆಯಿತು. ಮಗುವಿಗೆ ತಾತನ ನೆನಪಿಗಾಗಿ ವಿಶೇಷ ಹೆಸರನ್ನು ಇಡುವ ಮೂಲಕ ಕುಟುಂಬವು ಗೌರವ ಸಲ್ಲಿಸಿದೆ. ಅಂಬರೀಶ್ ಅವರ ಮೂಲ ಹೆಸರಾದ ಅಮರನಾಥ್ ಆಗಿದ್ದು ಅಭಿಷೇಕ್ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರು ಇಡಲಾಗಿದೆ. ವಂಶದ ಪರಂಪರೆಯನ್ನು ಗೌರವಿಸಲು ಅ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಆಯ್ಕೆ ಮಾಡಿದೆ.
ಈ ಸಭೆಯಲ್ಲಿ ಸುಮಲತಾ, ಅಭಿಷೇಕ್ ಅಂಬರೀಶ್ ಅವರ ಕುಟುಂಬದವರು, ಆಪ್ತ ಸ್ನೇಹಿತರು ಭಾಗವಹಿಸಿದ್ದರು. ಸ್ಯಾಂಡಲ್‌ವುಡ್‌ನ ಅನೇಕ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಿಚ್ಚ ಸುದೀಪ್ ಕೂಡ ಪತ್ನಿ ಪ್ರಿಯಾ ಸುದೀಪ್ ಕಾರ್ಯಕ್ರಮಕ್ಕೆ ಆಗಮಿಸಿದರು.

ಅಂಬರೀಶ್ ಕುಟುಂಬದ ಜೊತೆ ಸುದೀಪ್ ಆತ್ಮೀಯ ಸಂಬಂಧವನ್ನು ಹೊಂದಿದ್ದು ನಾಮಕರಣದಲ್ಲಿ ಭಾಗಿಯಾಗಿ ನವಜಾತ ಶಿಶುವಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಗುವಿಗೆ ವಿಶೇಷವಾದ ಉಡುಗೊರೆ ನೀಡುವ ಮೂಲಕ ಗಮನ ಸೆಳೆದರು. ಮೃದುವಾದ ಟೆಡ್ಡಿ ಬೇರ್ ಮತ್ತು ಮೊಲವನ್ನು ಹೊಂದಿರುವ ತೊಟ್ಟಿಲು ತರಹದ ಬುಟ್ಟಿಯನ್ನು ನೀಡಿದ್ದಾರೆ.
2024ರ ನವೆಂಬರ್ 12ರಂದು ಅಭಿಷೇಕ್ ಅಂಬರೀಶ್ ಮತ್ತು ಅವಿವಾ ದಂಪತಿಗೆ ಗಂಡು ಮಗು ಜನಿಸಿತ್ತು. ಸುಮಲತಾ ಸೇರಿದಂತೆ ಕುಟುಂಬಸ್ಥರು ಹಲವು ತಿಂಗಳ ಚರ್ಚೆಯ ಬಳಿಕ ಮಗುವಿಗೆ ರಾಣಾ ಅಮರ್ ಅಂಬರೀಶ್ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅನೇಕ ನಟ, ನಟಿಯರು, ರಾಜಕೀಯ ನಾಯಕರು ಆಗಮಿಸಿದ್ದರೂ, ಖಾಸಗಿಯಾಗಿ ನಡೆಯಿತು. ಚಲನಚಿತ್ರ ಮತ್ತು ರಾಜಕೀಯ ವಲಯದಲ್ಲಿ ಅಂಬರೀಶ್ ಅಪಾರ ಗೆಳೆಯರನ್ನು ಹೊಂದಿದ್ದರು. ಕುಟುಂಬವು ಅಂಬರೀಶ್ ಅವರ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತದೆ ಎಂದು ತಿಳಿಸಿದೆ.
ನಟರಾದ ದರ್ಶನ್, ಯಶ್ ಗೈರು
ಸುಮಲತಾ ಅವರಿಗೆ ಆಪ್ತರವಾಗಿರುವ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾಗ ಅವರ ಗೆಲುವಿನಲ್ಲಿ ಯಶ್ ಮತ್ತು ದರ್ಶನ್ ಮಹತ್ವದ ಪಾತ್ರ ವಹಿಸಿದ್ದರು. ಇಬ್ಬರು ಕೂಡ ಮಂಡ್ಯದಲ್ಲಿ ಹಗಲು ರಾತ್ರಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ನಟ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗಾಗಿ ಮುಂಬೈನಲ್ಲಿದ್ದು ಅವರು ಬೇರೊಂದು ದಿನ ಬರುವ ಸಾಧ್ಯತೆ ಇದೆ. ಮತ್ತೊಂದು ಕಡೆ ದರ್ಶನ್ ಕೂಡ ಮೈಸೂರಿನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮಾಡುತ್ತಿದ್ದು ಇದೇ ಕಾರಣಕ್ಕೆ ಬಂದಿಲ್ಲ ಎನ್ನಲಾಗಿದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications