Bigg Boss Kannada: ಕನ್ನಡಿಗ ಕಿಚ್ಚ ಸುದೀಪ್‌ಗೆ ಅನ್ಯಾಯ? ಸುದೀಪ್ ಅವರ ಅಭಿಮಾನಿಗಳಿಂದ...

ಕಿಚ್ಚ ಸುದೀಪ್ ಅಭಿಮಾನಿಗಳು ಇದೀಗ ರೊಚ್ಚಿಗೆದ್ದಿದ್ದು, 'ಕನ್ನಡ ಬಿಗ್‌ಬಾಸ್' ಕಾರ್ಯಕ್ರಮ ಇದೀಗ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. 'ಬಿಗ್‌ಬಾಸ್' ನಿರೂಪಣೆ ಹೊಣೆಯನ್ನು ಸುದೀಪ್ ಅವರು ಬಿಟ್ಟು ಬಿಡಲು ನಿರ್ಧಾರ ಪ್ರಕಟಿಸಿದ ನಂತರ ತಲ್ಲಣ ಸೃಷ್ಟಿಯಾಗಿದೆ. ಹಾಗೇ ಈ ಸಮಯದಲ್ಲೇ ಕನ್ನಡಿಗ ಕಿಚ್ಚ ಸುದೀಪ್‌ಗೆ ಅನ್ಯಾಯ? ಎಂಬ ವಿಚಾರ ಸೋಷಿಯಲ್ ಮೀಡಿಯ ವೇದಿಕೆಯಲ್ಲಿ ಭರ್ಜರಿ ಚರ್ಚೆಗೂ ಕಾರಣವಾಗುತ್ತಿದ್ದು, ಸುದೀಪ್ ಅವರ ಅಭಿಮಾನಿಗಳಿಂದ..

ಕಿಚ್ಚ ಸುದೀಪ್ ಅವರು ಅಂದ್ರೆ ಬಿಗ್ ಬಾಸ್, ಹಾಗೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಿಚ್ಚ ಎಂಟ್ರಿ ಇದ್ದರೆ ಮಾತ್ರ ಜೋಶ್ ಅಂತಾರೆ ಅಭಿಮಾನಿಗಳು. ಇಂತಹ ಸಮಯದಲ್ಲೇ ಕಿಚ್ಚ ಸುದೀಪ್ ಅವರು ಮಹತ್ವದ ನಿರ್ಧಾರವನ್ನ ಇಂದು ಪ್ರಕಟಿಸಿದ್ದು, ಭಾರಿ ಸಂಚಲನ ಸೃಷ್ಟಿ ಮಾಡಿದೆ.

Kiccha Sudeep Fans Are Saying This About Kannada Bigg Boss

ಹೀಗೆ ನಟ ಕಿಚ್ಚ ಸುದೀಪ್ ಅವರು ಕೈಗೊಂಡಿರುವ ನಿರ್ಧಾರ ಇದೀಗ ಕನ್ನಡ ಸಿನಿಮಾ ರಂಗ ಸೇರಿ ಸೋಷಿಯಲ್ ಮೀಡಿಯಾದಲ್ಲೂ ಕೂಡ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಕಿಚ್ಚ ಸುದೀಪ್ ಅಭಿಮಾನಿಗಳು ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ, ಹಾಗಾದರೆ ಇದೀಗ ಕನ್ನಡಿಗ ಕಿಚ್ಚ ಸುದೀಪ್‌ಗೆ ಅನ್ಯಾಯ? ಅಂತಾ ಚರ್ಚೆ ಮಾಡ್ತಿರುವುದು ಏಕೆ ಅಂತ ತಿಳಿಯೋಣ ಬನ್ನಿ.

ಇತಿಹಾಸ ಸೃಷ್ಟಿಸಿದ್ದ ಕಿಚ್ಚ ಸುದೀಪ್!

ನಿಮಗೆಲ್ಲಾ ಗೊತ್ತಿರುವಂತೆ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ಕನ್ನಡಿಗರಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಕಿಚ್ಚ ಸುದೀಪ್ ಅವರೇ ಸತತ 11ನೇ ಆವೃತ್ತಿಯಲ್ಲಿ ನಿರೂಪಣೆ ಹೊಣೆಯ ಹೊತ್ತು ಕಾರ್ಯಕ್ರಮ ಕೂಡ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತೊಂದು ಕಡೆ ಈ ಸೀಸನ್‌ನ ಬಿಗ್ ಬಾಸ್‌ಗೆ ಭರ್ಜರಿ ಟಿಆರ್‌ಪಿ ಕೂಡ ಸಿಕ್ಕಿದ್ದು, ಪ್ರಸಕ್ತ ವಾರದಲ್ಲಿ 9.9 ಅಂಕ ಪಡೆದು ಹೊಸ ಇತಿಹಾಸ ಸೃಷ್ಟಿ ಮಾಡಿದೆ ಕಾರ್ಯಕ್ರಮ. ಇಂತಹ ಸಮಯದಲ್ಲೇ ದಿಢೀರ್ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಬಿಟ್ಟು ಹೋಗುತ್ತಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ!

ಸುದೀಪ್ ಅವರ ಅಭಿಮಾನಿಗಳು ಹೇಳಿದ್ದೇನು?

ಕಿಚ್ಚ ಸುದೀಪ್ ಅವರೇ ತಿಳಿಸಿರುವ ಪ್ರಕಾರ ಮುಂದಿನ ಸೀಸನ್‌ನಲ್ಲಿ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲವಂತೆ. ಹಿಗಾಗಿ ಈಗ ಸೋಷಿಯಲ್ ಮೀಡಿಯಾ ಮಂದಿ ಹೊಸ ಚರ್ಚೆ ಶುರು ಮಾಡಿದ್ದು, ಕನ್ನಡಿಗ ಕಿಚ್ಚ ಸುದೀಪ್‌ಗೆ ಅನ್ಯಾಯ ಆಯ್ತಾ? ಎಂಬ ಪ್ರಶ್ನೆ ಮುಂದಿಡುತ್ತಿದ್ದಾರೆ.

ಆದರೆ ಈ ನಿರ್ಧಾರವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ತೆಗೆದುಕೊಂಡಿರುವ ಕಾರಣ ಇದರಲ್ಲಿ ಅನ್ಯಾಯ ಇಲ್ಲ. ಆದರೆ, ಕಾರ್ಯಕ್ರಮ ನೋಡುವಾಗ ವೀಕ್ಷಕರಿಗೆ ಕಿಚ್ಚ ಸುದೀಪ್ ಅವರು ಕಾಣದೇ ಇದ್ದರೆ ಅದೇ ಅನ್ಯಾಯ ಅಂತಿದ್ದಾರೆ ಸುದೀಪ್ ಅವರ ಅಭಿಮಾನಿಗಳು. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ವೆರೈಟಿ ವೆರೈಟಿ ಚರ್ಚೆ & ಮಾತುಕತೆ ನಡೆಯುತ್ತಿದೆ ಈಗ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+