ಕತ್ತಿನ ಮೇಲೆ PIKU ಟ್ಯಾಟೂ ಹಾಕಿಸಿಕೊಂಡ ಸುದೀಪ್‌ ಪುತ್ರಿ: ಯಾರ ಹೆಸರಿದು?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಒಬ್ಬಳೇ ಮಗಳು ಸಾನ್ವಿ ಸುದೀಪ್ ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಸಖತ್‌ ಆ್ಯಕ್ಟೀವ್‌ ಆಗಿರುವ ಸಾನ್ವಿ ಸುದೀಪ್ ತಂದೆಯಂತೆಯೇ ಬಹುಮುಖ ಪ್ರತಿಭೆ. ಈಗಾಗಲೇ ಜಿಮ್ಮಿ ಚಿತ್ರಕ್ಕೆ ಹಾಡುವ ಮೂಲಕ ಗಾಯಕಿಯಾಗಿ ಸೈ ಎನಿಸಿಕೊಂಡಿರುವ ಸಾನ್ವಿ ಸುದೀಪ್ ಚಿತ್ರ ಬಿಡಿಸುವುದರಲ್ಲಿಯೂ ಸೂಪರ್‌.

ಸಾನ್ವಿ ಸುದೀಪ್ ಕೆಲವೊಮ್ಮೆ ತಾವು ಬಿಡಿಸಿದ ಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಜೊತೆಗೆ ಒಂದಿಷ್ಟು ರೀಲ್ಸ್‌, ಹಾಡು. ಇದರಿಂದಲೇ ತಮ್ಮದೇ ಆದ ಫಾಲೋವರ್ಸ್‌ಗಳನ್ನು ಸಾನ್ವಿ ಸುದೀಪ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಸದಾ ಆ್ಯಕ್ಟೀವ್‌ ಇರುವ ಸಾನ್ವಿ ಸುದೀಪ್ ಇದೀಗ ಹೊಸ ಟ್ಯಾಟೂವೊಂದನ್ನು ಹಾಕಿಸಿಕೊಂಡು ಫೋಟೋ ಹಾಗೂ ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

Kiccha Sudeep Daughter Sanvi Sudeep New Tattoo Video Goes Viral In Social Media

ಸಾನ್ವಿ ಸುದೀಪ್​ ತಮ್ಮ ಕತ್ತಿನ ಮೇಲೆ ಪೀಕು PIKU ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸದ್ಯ ಹೊಸ ಟ್ಯಾಟೂ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೇ ಟ್ಯಾಟೂ ಹಾಕಿಸಿಕೊಳ್ಳುವ ವಿಡಿಯೋವನ್ನು ಇನ್ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. PIKU ಹೆಸರೇ ಹೊಸದಾಗಿದ್ದು, ಟ್ಯಾಟೂ ನೋಡಿದ ಅಭಿಮಾನಿಗಳು ಏನಿದು PIKU, ಯಾರ ಹೆಸರಿದು PIKU..? ಈ ಕೋಡ್‌ವರ್ಡ್‌ ಏನು ಎಂದು ತಲೆ ಕೆಡಿಸಿಕೊಂಡಿದ್ದಾರೆ.

Kiccha Sudeep Daughter Sanvi Sudeep New Tattoo Video Goes Viral In Social Media

ಆದರೆ PIKU ಹೆಸರಿನ ಅರ್ಥವೇನು..? ಇದು ಯಾರ ಹೆಸರು ಎನ್ನುವುದನ್ನು ಸ್ವತಃ ಸಾನ್ವಿ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್‌ ಸ್ಟೋರಿನಲ್ಲಿ ವಿವರಿಸಿದ್ದಾರೆ. PIKU ಎಂದರೆ ಸಾನ್ವಿ ಅವರ ತಾಯಿ. ಅಂದರೆ ಕಿಚ್ಚ ಸುದೀಪ್‌ ಅವರ ಪತ್ನಿ ಪ್ರಿಯಾ ಸುದೀಪ್‌ ಅವರ ಹೆಸರು. 'ನೀವೆಲ್ಲಾ ಏನೇನೋ ಊಹಿಸುವ ಮುನ್ನ ನಾನೇ ಹೇಳ್ತೀನಿ. ಪೀಕು ಎನ್ನುವುದು ನನ್ನ ತಾಯಿಯ ನಿಕ್‌ನೇಮ್. ಅವರ ತಂದೆ ಅದೇ ರೀತಿ ಆಕೆಯನ್ನು ಕರೆಯುತ್ತಿದ್ದರು' ಎಂದು ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಸಾನ್ವಿ ಸುದೀಪ್ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಂದಹಾಗೆ ಸಾನ್ವಿ ಸುದೀಪ್ ಸ್ಕಿನ್‌ಡೀಪ್ ಟ್ಯಾಟೂ ಸ್ಟುಡಿಯೋದಲ್ಲಿ ಈ ಹಚ್ಚೆ ಹಾಕಿಸಿಕೊಂಡಿದ್ದು, ವಿಡಿಯೋದಲ್ಲಿ ಟ್ಯಾಗ್‌ ಮಾಡಿ ಧನ್ಯವಾದ ತಿಳಿಸಿದ್ದಾರೆ. ಸಾನ್ವಿ ಸುದೀಪ್‌ ಅವರ ಸ್ಟೋರಿ ನೋಡದ ಕೆಲವರು PIKU ಎಂದರೆ ಏನು ಎಂದು ಕಮೆಂಟ್‌ ಮಾಡುತ್ತಿದ್ದರೆ, ಇನ್ನು ಒಬ್ಬ ಫಾಲೋವರ್‌ P ಪ್ರಿಯಾ i ನಾನು k ಕಿಚ್ಚ u ನೀನು (ಪ್ರಿಯಾ-ನಾನು ಕಿಚ್ಚ-ನೀನು) ಎಂದು ಕಮೆಂಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+