Yash Mother Pushpa: ಸಿನಿಮಾ ರಿಲೀಸ್ ಮುನ್ನವೇ ಕೋಟಿ ಹೇಳಿಕೆ: ಯಶ್ ತಾಯಿ ಪುಷ್ಪಾದ ಮಾತಿಗೆ ಫ್ಯಾನ್ಸ್ ಅಸಮಾಧಾನ
Yash Mother Pupshpa: 'ಟಾಕ್ಸಿಕ್' ಮತ್ತು 'ರಾಮಾಯಣ' ಮೂಲಕ ಬಹಳಷ್ಟು ನಿರೀಕ್ಷೆ ಉಂಟಾಗಲು ಕಾರಣರಾದ ರಾಕಿಂಗ್ ಸ್ಟಾರ್ ಯಶ್ ಎಂದರೆ ಅಪಾರ ಗೌರವ, ಅಭಿಮಾನ ಮತ್ತು ವಿಶೇಷ ಪ್ರೀತಿಯಿದೆ. ಇಂತಹ ಅಭಿಮಾನಕ್ಕೆ ಕುತ್ತು ಬರುತ್ತಿದಿಯಾ? ಅದಕ್ಕೆ ಮುನ್ಸೂಚನೆ ಸಿಗುವಂತಹ ಬೆಳವಣಿಗೆಗಳು ನಡೆಯುತ್ತಿವೆಯೆ ಎಂದು ಇತ್ತೀಚಿಗೆ ಅನ್ನಿಸುತ್ತಿದೆ. ಯಶ್ ಅಭಿಮಾನಿಗಳಲ್ಲಿ ಕೊಂಚ ಚಿಂತೆ ಕಾಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಯಶ್ ಅವರ ತಾಯಿ ಪುಷ್ಪಾ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದು, 'ಕೊತ್ತಲವಾಡಿ'ಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ತೆರೆಗೆ ಬರುವುದು ಬಾಕಿ ಇದೆ. ಹೀಗಿದ್ದಾಗಲೇ ಅವರು ನೀಡುತ್ತಿರುವ ಹೇಳಿಕೆಗಳು ಚಿತ್ರರಂಗದಲ್ಲಿ, ಮೇಲಾಗಿ ಅಭಿಮಾನಿಗಳಲ್ಲಿ ಕಸಿವಿಸಿಗೆ ಕಾರಣವಾಗುತ್ತಿವೆ. ಯಶ್ ಬೆಳವಣಿಗೆ, ಅವರ ಮೇಲಿನ ಗೌರವಕ್ಕೂ ಚ್ಯುತಿ ಬರುವ ಸಾಧ್ಯತೆ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮಾಧ್ಯಮಗಳ ಮುಂದೆ ಯಶ್ ತಾಯಿ ಮತ್ತು ನಿರ್ಮಾಪಕಿ ಪುಷ್ಪಾ ಅವರು ಕೊಡುವ ಹೇಳಿಕೆಗಳು ಚರ್ಚೆಗೀಡಾಗುತ್ತಿವೆ. ಕೆಲವು ಹೇಳಿಕೆಗಳಿಗೆ ಮಿಶ್ರ ಪ್ರತಿಕ್ರಿಯೆಯು ವ್ಯಕ್ತವಾಗಿದೆ. ಕೆಲವರು ಇದನ್ನು ದುಡ್ಡಿನ ದರ್ಪದ ಮಾತುಗಳು ಅಂತಲೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಸಮೇತ ಮಾತನಾಡುತ್ತಿದ್ದಾರೆ.

ಪುಷ್ಪಾ ಅವರು ನಿರ್ಮಿಸಿದ್ದು 'ಕೊತ್ತಲವಾಡಿ' ಸಿನಿಮಾ. ಇದು ಅವರ ಮೊದಲ ಸಿನಿಮಾ, ಇನ್ನೂ ತೆರೆ ಕಂಡಿಲ್ಲ. ಅದಕ್ಕೂ ಮುನ್ನವೇ 2000 ಕೊಟಿ ರೂಪಾಯಿ, 5000 ಕೋಟಿ ರೂಪಾಯಿ ಎಂದು ಮಾತನಾಡುತ್ತಿದ್ದಾರೆ. ಇದರಿಂದ ಯಶ್ ಫ್ಯಾನ್ಸ್‌ಗೆ ಕಸಿವಿಸಿ ಆಗುತ್ತಿದೆ. ನಿಮ್ಮ ಹೇಳಿಕೆಗಳಿಂದ ಮುಜುಗರ ಉಂಟಾಗುತ್ತಿದೆ. ಮಾತನಾಡುವಾಗ ಆಲೋಚಿಸಿ ಎಂದು ಯೂಟ್ಯೂಬರ್ ಶ್ರೀಕಾಂತ್ ಶೆಟ್ಟಿ ಅಫೀಸಿಯಲ್ ಅವರು ತನ್ನ ಚಾನಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಈ ವಿಶ್ಲೇಷಣೆಗೆ ಸಾಮಾಜಿಕ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮಗೆ ಯಶ್ ಮೇಲೆ ಗೌರವ ಇದೆ. ಆದರೆ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಬಳಕೆದಾರರು ಧ್ವನಿಗೂಡಿಸಿದ್ದಾರೆ.
''ಯಶ್ ತಾಯಿ ಪುಷ್ಪಾ ಅವರು ಮಾಧ್ಯಮ ಮುಂದೆ ಬಂದರೆ ಸಾಕು ಯಶ್ ಅಭಿಮಾನಿಗಳು ತಲೆ ಕೆಡಿಸಿಕೊಳ್ಳುವಂತಾಗಿದೆ. ಯಶ್ ಅಭಿಮಾನಿಗಳಿಗೆ ಮುಜುಗರವಾಗುತ್ತಿದೆ. ಡಾ. ರಾಜಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್, ದರ್ಶನ್, ಸುದೀಪ್ ಅವರು ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹೀಗಿದ್ದರು ಸುದೀಪ್, ದರ್ಶನ್ ಅವರ ತಾಯಿ ಮೀಡಿಯಾ ಮುಂದೆ ಬಂದು ಈ ರೀತಿ ಬಿಲ್ಡಪ್ ಕೊಟ್ಟಿದ್ದು ನೋಡಿಲ್ಲ''.

''ಮಗನಿಗೆ ಸಿನಿಮಾ ಮಾಡುತ್ತೀರಾ ಎಂದು ಕೇಳಿದರೆ 2000 ಕೋಟಿ ನೀವು ಕೊಡ್ತಿರಾ, 5000 ಕೋಟಿ ಕೊಡ್ತಿರಾ ಎಂದು ಕೇಳಿ ಮುಜುಗರ ಮಾಡುತ್ತಿದ್ದಾರೆ. ಕೋಟಿ ಕೋಟಿ ರೂಪಾಯಿ ಬಗೆಗಿನ ತರ್ಲೆ ಹೇಳಿಕೆ, ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಯಾರೇ ಆಗಲಿ ಮಕ್ಕಳ ಭವಿಷ್ಯ ಹಾಳು ಮಾಡಬಾರದು. ಯಶ್ ಅವರಿಗೆ ಸಮಾಜದಲ್ಲಿ ಚಿತ್ರರಂಗದಲ್ಲಿ ಸ್ಥಾನ ಮಾನ, ಗೌರವ ಇದೆ. ಆದರೆ ನೀವು ಇಂತಹ ಹೇಳಿಕೆಗಳಿಂದ ಮಗನ ಹೆಸರ ಹಾಳು ಮಾಡಬೇಡಿ. ಜನರಿಗೆ ನಿಮ್ಮ ಹಿನ್ನೆಲೆಯೂ ಬಗ್ಗೆ ಗೊತ್ತು, ಯಶ್ ಅವರ ಬಗ್ಗೆಯೂ ಗೊತ್ತು'' ಎಂದಿದ್ದಾರೆ. ಹಿಡಿತದಲ್ಲಿ, ಸೂಕ್ಷ್ಮವಾಗಿ ಮಾತನಾಡುವಂತೆ ಅವರು ಕೇಳಿಕೊಂಡಿದ್ದಾರೆ.
''ಪುಷ್ಪಾ ಅವರು ನಿರ್ಮಿಸಿದ ಮೊದಲ ಸಿನಿಮಾ 'ಕೊತ್ತಲವಾಡಿ' ಇನ್ನು ರಿಲೀಸೇ ಆಗಿಲ್ಲ. ಹೀಗಿದ್ದರೂ ನೀವು ಕೋಟಿ ಕೊಟಿ ರೂಪಾಯಿ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುತ್ತೀರಿ. ಕನ್ನಡ ಚಿತ್ರರಂಗ ಅದೆಷ್ಟೋ ದೊಡ್ಡ ದೊಡ್ಡ ನಿರ್ಮಾಪಕರನ್ನು ನೋಡಿದೆ. ಸಿನಿಮಾ ಬಿಡುಗಡೆ ಮೊದಲೇ ಕೋಟಿ ಕೋಟಿ ರೂಪಾಯಿ ಮಾತನಾಡಿದರೆ ಅದರಿಂದ ನಿಮಗಾಗಲಿ, ಮಗ ಯಶ್ ಅವರಿಗಾಗಲಿ ಒಳಿತಲ್ಲ. ಇದು ಮುಂದುವರಿದರೆ ಮುಂದಿನ ದಿನಗಳ ನಿಮ್ಮ ಹಾಗೂ ಯಶ್ ಅವರ ಮಧ್ಯ ದೊಡ್ಡ ಬಿರುಕು ಬರಲಿದೆ'' ಎಂದು ಅವರು ಎಚ್ಚರಿಸಿದ್ದಾರೆ.
'ಅಲ್ಪನಿಗೆ ಐಶ್ವರ್ಯ ಸಿಕ್ಕರೆ.....'
ಮಾಧ್ಯಮಗಳ ಮುಂದೆ ಬಂದಾಗ ಸರಿಯಾಗಿ ಮಾತನಾಡಬೇಕು. ಜನರು ನಿಮ್ಮ ಗುರುತಿಸುತ್ತಾರೆ ಎಂದರೆ ಅದಕ್ಕೆ ನಿಮ್ಮ ಮಗ ಯಶ್ ಕಾರಣ. ಅದನ್ನು ಮರೆತು ಮಾತನಾಡದೇ, ಸೂಕ್ಷ್ಮವಾಗಿ ಮಾತನಾಡಿ. ಇಲ್ಲದಿದ್ದರೆ ಅಭಿಮಾನಿಗಳಿಗೆ ಕಿರಿ ಕಿರಿ ಉಂಟಾಗುತ್ತದೆ. ನಿಮ್ಮನ್ನು ಅಭಿಮಾನಿಗಳು, ಚಿತ್ರರಂಗ ಸಹಿಸಿಕೊಳ್ಳುತ್ತಿದೆ. ಅದಕ್ಕೆಲ್ಲ ನಿಮ್ಮ ಮಗನ ಮೇಲೆ ಇಟ್ಟುಕೊಂಡ ಗೌರವಕ್ಕೆ ಕಾರಣ. ಹೀಗಾಗಿ ಸುಮ್ಮನನಿದ್ದಾರೆ. 'ಅಲ್ಪನಿಗೆ ಐಶ್ವರ್ಯ ಸಿಕ್ಕರೆ, ಮಧ್ಯರಾತ್ರಿ ಕೊಡೆಹಿಡಿದಂತೆ' ಎಂದು ಗಾದೆಯನ್ನು ಉಲ್ಲೇಖಿಸಿ ಯೂಟ್ಯೂಬರ್ ಮಾತನಾಡಿದ್ದಾರೆ. ಯಶ್ ಅವರಿಂದ ಕೀರ್ತಿ, ಹಣ, ಗೌರವ ಸ್ಥಾನ ಮಾನ ಸಿಕ್ಕಿದೆ. ಅದನ್ನು ಹಾಳು ಮಾಡದೇ, ಯಶ್ ಗೌರವಕ್ಕೆ ಧಕ್ಕೆ ಬರದಂತೆ ನಡೆದಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ನಿಮ್ಮ ವಿಶ್ಲೇಷಣೆ ಸರಿಯಾಗಿದೆ. ಈ ಅಮ್ಮನ ಬಾಯಿ ಬೊಂಬಾಯಿ, ಇವರಿಗೆ ದುಡ್ಡಿ ದರ್ಪ, ಕೋಟಿ ಕೋಟಿ ಬಗ್ಗೆ ಅಹಕಾರದಿಂದ ಮಾತನಾಡುತ್ತಿದ್ದಾರೆ. ಸಾಹುಕಾರರ ಮುಖಲಕ್ಷಣ ಎದ್ದು ಕಾಣುತ್ತಿದೆ. ನಿಮ್ಮ ಹಳೆಯ ಕಥೆ ಎಲ್ಲರಿಗೂ ಗೊತ್ತು ಎಂದೆಲ್ಲ ಕಾಮೆಂಟ್ ಮಾಡಿ ಯಶ್ ತಾಯಿ ಪುಷ್ಪಾ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕಿ ಪುಷ್ಪಾ ಅವರು ಹೇಳಿದ್ದೇನು?
ಯಶ್ ಅವರಿಗೆ ಸಿನಿಮಾ ಮಾಡುತ್ತೀರಾ ಎಂದರೆ ನೀವು 2000 ಕೋಟಿ, 5000 ಕೋಟಿ ರೂಪಾಯಿ ಸಾಲಕೊಡ್ಸಿ, ಇಲ್ಲವೇ ಬಂಡವಾಳ ಹೂಡಿದರೆ ನಾನು ಸಿನಿಮಾ ಮಾಡ್ತಿನಿ. ಯಶ್ ಡೇಟ್ಸ್ ತಗೋತಿನಿ. ನೀವು ಕೊಡ್ತಾರಾ? ಎಂದು ಕೇಳುವುದನ್ನು ಕೆಲವರು ದರ್ಪದ ರೀತಿ ಪರಿಣಿಸಿದ್ದಾರೆ. ಹಣ ಬಂದ ಕೂಡಲೇ ಈ ರೀತಿ ಸಂಯಮ ಬಿಟ್ಟು ಮಾತನಾಡಬಾರದು ಎಂದಿದ್ದಾರೆ. ಮತ್ತೆ ಕೆಲವರು, 'ಯಶ್ ಅವರು ಸಿನಿಮಾ ನೋಡಿದರೆ ಗೆಲ್ಲಲ್ಲ, ಜನರ ಸಿನಿಮಾ ನೋಡಬೇಕು. ಸಿನಿಮಾ ರಂಗಕ್ಕೆ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ನಿರ್ಮಾಣಕ್ಕೆ ಇಳಿಸಿದೆ. ಹೊಸಬರನ್ನು ಪ್ರೋತ್ಸಾಹಿಸಬೇಕು' ಎಂಬ ಪುಷ್ಪಾ ಅವರ ಹೇಳಿಕೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೊತ್ತಲವಾಡಿ ಟ್ರೈಲರ್ ರಿಲೀಸ್
ಯಶ್ ತಾಯಿ ಪುಷ್ಪಾ ಅವರ ನಿರ್ಮಾಣದ ಕೊತ್ತಲವಾಡಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿನ ಸ್ಟಂಟ್, ಫೈಟ್, ಪ್ರೇಮ ಹಾಗೂ ಸೆಂಟಿಮೆಂಟ್ ಇಷ್ಟವಾಗಿದೆ. ಪ್ರೇಕ್ಷಕರು ಸಿನಿಮಾ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೃಥ್ವಿ ಅಂಬರ್ ನಾಯಕನಾಗಿ ಅಬ್ಬರಿಸಿದ್ದಾರೆ.












Click it and Unblock the Notifications