‘ಕೆಜಿಎಫ್’ ಸ್ಟಾರ್ ರಾಕಿಭಾಯ್ ಯಶ್ ಅಯೋಧ್ಯೆಗೆ ಹೋಗುತ್ತಾರಾ?
ಅದೊಂದು ಕ್ಷಣಕ್ಕಾಗಿ ದೇಶವೇ ಕಾಯುತ್ತಿರುವ ಸಮಯದಲ್ಲಿ ಮತ್ತೆ ಮತ್ತೆ ಸರ್ಪ್ರೈಸ್‌ಗಳು ಸಿಗುತ್ತಿವೆ. ಅದರಲ್ಲೂ 'ಕೆಜಿಎಫ್' ಸ್ಟಾರ್ ರಾಕಿಭಾಯ್ ಯಶ್ ಅವರು ದೇಶಾದ್ಯಂತ ಭಾರಿ ದೊಡ್ಡ ಹೆಸರನ್ನು ಮಾಡಿದ್ದು, ಇದೇ ಸಮಯದಲ್ಲಿ ಅವರಿಗೆ ಶ್ರೀರಾಮನ ಸನ್ನಿಧಿಗೆ ಬನ್ನಿ ಎಂದು ಕರೆ ನೀಡಲಾಗಿದೆಯಂತೆ. ಹಾಗಾದರೆ 'ಕೆಜಿಎಫ್' ಸ್ಟಾರ್ ರಾಕಿಭಾಯ್ ಯಶ್ ಅಯೋಧ್ಯೆಗೆ ಹೋಗುತ್ತಾರಾ?
ಹೌದು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಸಮಾರಂಭ ಅದ್ಧೂರಿಯಾಗಿ ನಡೆಲಿದೆ. 2024ರ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರವು, ಲೋಕಾರ್ಪಣೆ ಆಗಲಿದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಯಲ್ಲಿ ದೇಶ & ವಿದೇಶಗಳ ಗಣ್ಯರಿಗೆ ದೇವಾಲಯ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಅದರಲ್ಲೂ ಕನ್ನಡ ನೆಲದ ಹಲವು ಗಣ್ಯರಿಗೆ ಕೂಡ ಆಹ್ವಾನ ಹೋಗಿದ್ದು, ಕನ್ನಡ ನಾಡಿನ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೂ ಅಯೋಧ್ಯೆಗೆ ಬರುವಂತೆ ಆಹ್ವಾನ ನೀಡಲಾಗಿದೆ ಅಂತ ಹೇಳಲಾಗಿದೆ.

ಯಶ್, ಪ್ರಭಾಸ್ ಅಯೋಧ್ಯೆಗೆ ಹೋಗ್ತಾರಾ?
ನಟ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ನಟ ಡಾರ್ಲಿಂಗ್ ಪ್ರಭಾಸ್ ಅವರಿಗೂ ಇದೀಗ ಆಹ್ವಾನ ಹೋಗಿದೆ ಎನ್ನಲಾಗಿದೆ. ಅಲ್ಲದೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರಲು, ರಣಬೀರ್ ಕಪೂರ್, ಅಲಿಯಾ ಭಟ್ ಸೇರಿ ಅಜಯ್ ದೇವಗನ್, ಸನ್ನಿ ಡಿಯೋಲ್ ಅವರಿಗೂ ಆಹ್ವಾನ ಹೋಗಿದೆಯಂತೆ. ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್ & ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಟ ಚಿರಂಜೀವಿ, ಮೋಹನ್ ಲಾಲ್, ಧನುಷ್ ಮತ್ತು ಕನ್ನಡದ ರಿಷಬ್ ಶೆಟ್ಟಿ ಅವರನ್ನು ಹಿಂದೆಯೇ ಆಹ್ವಾನಿಸಲಾಗಿದೆ.
ಕ್ರಿಕೆಟ್ ಸ್ಟಾರ್‌ಗಳಿಗೂ ಹೋಗಿದೆ ಆಹ್ವಾನ
ಸಿನಿಮಾ ಸ್ಟಾರ್ಸ್ ಮಾತ್ರವಲ್ಲದೆ, ಕ್ರಿಕೆಟ್ ಸ್ಟಾರ್‌ಗಳಿಗೂ ಇದೀಗ ಆಹ್ವಾನ ಹೋಗಿದೆ. ಈ ಮೂಲಕ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಲಾಗಿದೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ & ಉದ್ಯಮಿ ಮುಕೇಶ್ ಅಂಬಾನಿ ಅವರು, ರತನ್ ಟಾಟಾ & ಗೌತಮ್ ಅದಾನಿ ಅವರು ಸೇರಿದಂತೆ ಒಟ್ಟಾರೆ 7000 ಗಣ್ಯರನ್ನ ದೇವಾಲಯದ ಟ್ರಸ್ಟ್ ಆಹ್ವಾನಿಸಿದೆ ಎನ್ನಲಾಗಿದೆ. 3,000 ವಿವಿಐಪಿ ಸೇರಿದಂತೆ ಒಟ್ಟು 7000 ಮಂದಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನ ಪತ್ರಿಕೆ ನೀಡಿದೆ ಎನ್ನಲಾಗಿದೆ.

ಒಟ್ನಲ್ಲಿ ಮಹತ್ವದ ಕಾರ್ಯಕ್ರಮಕ್ಕೆ ಸಿನಿಮಾ ಸ್ಟಾರ್ಸ್ ಸೇರಿದಂತೆ ಗಣ್ಯರಿಗೆ ಈಗ ಆಹ್ವಾನ ನೀಡಲಾಗಿದೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಸಮಾರಂಭ ನಡೆಸಲು ಸಕಲ ಸಿದ್ದತೆಯ ನಡೆಸಲಾಗಿದೆ. ಹೀಗಾಗಿಯೆ ಅಯೋಧ್ಯೆಯಲ್ಲಿ ಭದ್ರತೆ ಕೂಡ ಹೆಚ್ಚಿಸಲಾಗಿದ್ದು ಇಂಚಿಂಚು ಜಾಗದಲ್ಲೂ ಹದ್ದಿನ ಕಣ್ಣಿಡಲಾಗಿದೆ. ಅಲ್ಲದೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು ಪ್ರಧಾನಿ ಮೋದಿ ಅವರು & ಗೃಹ ಸಚಿವರಾದ ಅಮಿತ್ ಶಾ ಅವರು ಕೂಡ ಸಮಾರಂಭದ ಭಾಗವಾಗಲಿದ್ದಾರೆ.












Click it and Unblock the Notifications