Katrina Kaif: ಕುಕ್ಕೆಯಲ್ಲಿ ಮಾಡಿಸಿದ ಆ ಪೂಜೆಯಿಂದ ನಟಿ ಕತ್ರಿನಾ ಕೈಫ್‌ಗೆ ಸಂತಾನ ಭಾಗ್ಯ?
ಬಾಲಿವುಡ್‌ನ ತಾರಾಜೋಡಿಗಳಲ್ಲಿ ಒಂದಾಗಿರುವ ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಮದುವೆ ಆಯ್ತು, ಗುಡ್‌ನ್ಯೂಸ್ ಯಾವಾಗ? ಎಂದು ಕೇಳುತ್ತಿದ್ದವರಿಗೆ ಕೊನೆಗೂ ಫೋಟೋ ಮೂಲಕ ಉತ್ತರ ಕೊಟ್ಟಿದ್ದಾರೆ. ಕತ್ರಿನಾ-ವಿಕ್ಕಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಸಿಹಿಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ದಂಪತಿಗಳು ತಮ್ಮ ಮಗುವಿನ ಬಂಪ್ ಫೋಟೋದೊಂದಿಗೆ ಕತ್ರಿನಾ ಗರ್ಭಿಣಿ ಎನ್ನುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮೊದಲನ್ನು ವರಮಾಡಿಕೊಳ್ಳಲು ಸಜ್ಜಾಗಿದ್ದು, ವಿಶೇಷವಾದ ಬೇಬಿ ಬಂಪ್ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯಗಳೊಂದಿಗೆ ಪ್ರಾರಂಭಿಸುವ ಹಾದಿಯಲ್ಲಿ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು 2021ರ ಡಿಸೆಂಬರ್‌ನಲ್ಲಿ ರಾಜಸ್ತಾನದ ಸಿಕ್ಸ್ ಸೆನ್ಸ್‌ಸ್ ಫೋರ್ಟ್ ಬರ್ವಾರಾದಲ್ಲಿ ಭವ್ಯವಾಗಿ ಮದುವೆಯಾಗಿದ್ದರು. ಕತ್ರಿನಾಗಿಂತ ವಿಕ್ಕಿ ವಯಸ್ಸಿನಲ್ಲಿ ಸಣ್ಣವರು. ಈ ವಿಚಾರವಾಗಿಯೂ ಈ ಜೋಡಿ ಹೆಚ್ಚು ಸದ್ದು ಮಾಡಿತ್ತು. ಇದೀಗ ಈ ಜೋಡಿ ತಮ್ಮ ಮೊದಲ ಮಗುವಿನ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಕುಕ್ಕೆಗೆ ಬಂದು ಕತ್ರಿನಾ ವಿಶೇಷ ಪೂಜೆ
ಬಾಲಿವುಡ್‌ನ ಟಾಪ್ ನಟಿಯಾಗಿರುವ ಕತ್ರಿನಾ ಕೈಫ್ ಅವರು ಕಳೆದ ಮಾರ್ಚ್‌ನಲ್ಲಿ ಕರ್ನಾಟಕದ ಪ್ರಸಿದ್ಧ ದೇಗುಲವಾದ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಕತ್ರಿನಾ ಕುಕ್ಕೆಯಲ್ಲಿ ಎರಡು ದಿನ ವಾಸ್ತವ್ಯ ಹೂಡಿ, ಸರ್ಪ ಸಂಸ್ಕಾರ ಪೂಜೆ ಸಹ ಮಾಡಿಸಿದ್ದರು. ಆಶ್ಲೇಷಾ ನಕ್ಷತ್ರದಂದು ಸರ್ಪ ಸಂಸ್ಕಾರ ಪೂಜೆ ನೆರವೇರಿಸಿದ್ದರು. ಬೆಳಿಗ್ಗೆ ಆದಿ ಸುಬ್ರಹ್ಮಣ್ಯ ಸರ್ಪ ಸಂಸ್ಕಾರ ಯಾಗಶಾಲೆಯಲ್ಲಿ ಮೊದಲ ಹಂತದ ಆಚರಣೆ ನೆರವೇರಿಸಿ, ದೇವಸ್ಥಾನದಲ್ಲಿ ಅನ್ನ ಪ್ರಸಾದ ಸೇವಿಸಿದರು. ಬಳಿಕ ವಿವಿಧ ಆಚರಣೆಗಳಲ್ಲಿ ಭಾಗಿಯಾಗಿದ್ದರು. ದೇವಾಲಯದ ಅಧಿಕಾರಿಗಳು ಕತ್ರಿನಾ ಅವರ ಆಚರಣೆಗಳು ಸುಗಮವಾಗಿ ನಡೆಯುವಂತೆ ವಿಶೇಷ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು.
ಸರ್ಪ ಸಂಸ್ಕಾರ ಪೂಜೆ ಸಾಮಾನ್ಯವಾಗಿ ಹಾವಿನ ದೋಷವನ್ನು ನಿವಾರಿಸುವ ಒಂದು ಧಾರ್ಮಿಕ ವಿಧಿವಿಧಾನವಾಗಿದೆ. ಇದನ್ನು ಮುಖ್ಯವಾಗಿ ಹಿಂದಿನ ಜನ್ಮಗಳಲ್ಲಿ ಹಾವಿಗೆ ಹಾನಿ ಮಾಡಿದ್ದಕ್ಕಾಗಿ, ಸರ್ಪ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಪರಿಹಾರವಾಗಿ ಮಾಡಲಾಗುತ್ತದೆ. ಈ ಪೂಜೆಯನ್ನು ನಿರ್ದಿಷ್ಟ ನಿಯಮಗಳ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯದಂತಹ ಪುಣ್ಯಕ್ಷೇತ್ರಗಳಲ್ಲಿ ಮಾತ್ರವೇ ನಡೆಸಲಾಗುತ್ತಿದ್ದು. ಅಲ್ಲದೆ ಸಂತಾನ ಭಾಗ್ಯ, ಆರ್ಥಿಕ ಸಮಸ್ಯೆಗಳ ನಿವಾರಣೆ ಮತ್ತು ಕೌಟುಂಬಿಕ ಶಾಂತಿಗಾಗಿಯೂ ಈ ಪೂಜೆ ಮಾಡಿಸುತ್ತಾರೆ. ಮುಖ್ಯವಾಗಿ ದಂಪತಿಗಳಲ್ಲಿ ಸಂತಾನ ಪ್ರಾಪ್ತಿಗಾಗಿ ಈ ಪೂಜೆ ಮಾಡಿಸಲಾಗುತ್ತದೆ. ಕತ್ರಿನಾ ಕೂಡ ಈ ವಿಶೇಷ ಪೂಜೆ ಮಾಡಿಸಿದ ಕೆಲವೇ ತಿಂಗಳಲ್ಲಿ ಸಂತಾನ ಭಾಗ್ಯ ಸಿಕ್ಕಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications