Dr. Rajkumar: ಚೀನಾಕ್ಕೂ ಗೊತ್ತು ಡಾ.ರಾಜ್‌ಕುಮಾರ್ ಗತ್ತು; ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಅಣ್ಣಾವ್ರ ಹಾಡು:ಕನ್ನಡಿಗರು ಖುಷ್
ನಟಸಾರ್ವಭೌಮ ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ. ಭಾರತೀಯ ಚಿತ್ರರಂಗ ಕಂಡ ಮಹಾನ್ ಕಲಾವಿದ. ಆರಂಭದಿಂದ ಇಲ್ಲಿಯವರೆಗೂ ಕರ್ನಾಟಕದಲ್ಲಿ ಅವರಿಗೆ ಕ್ರೇಜ್ ಕಡಿಮೆಯಾದ ಸಂದರ್ಭವೇ ಇಲ್ಲ. ಅಣ್ಣಾವ್ರ ಕ್ರೇಜ್ ಹೊರ ರಾಜ್ಯಗಳಲ್ಲಿ ಮಾತ್ರವಲ್ಲದೇ ದೇಶವನ್ನೂ ದಾಟಿ ಕನ್ನಡವೇ ಗೊತ್ತಿಲ್ಲದ ಚೀನಾ ದೇಶಕ್ಕೆ ಹೋಗಿ ಮುಟ್ಟಿದೆ.
ಹೌದು, ಚೀನಾದ ದೇಶದ ಸೂಪರ್‌ಮಾರ್ಕೆಟ್‌ವೊಂದರಲ್ಲಿ ಡಾ.ರಾಜ್‌ಕುಮಾರ್ ಅವರ ಐಕಾನಿಕ್ ಹಾಡುಗಳಲ್ಲಿ ಒಂದಾದ 'ನಾವಾಡುವ ನುಡಿಯೇ ಗಂಧದ ಗುಡಿ' ಹಾಡು ಮೊಳಗಿದೆ. ಚೀನಾ ಮಾರ್ಕೆಟ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಮೆಂಟ್‌ನಲ್ಲಿ ಫ್ಯಾನ್ಸ್ ವಾಹ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಣ್ಣಾವ್ರು ಕನ್ನಡ ನಾಡಿನ ದೊರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಚೀನಾ ಮಾರ್ಕೆಟ್ ನಲ್ಲಿ ಅಣ್ಣಾವ್ರ ಹಾಡು ಕೇಳಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.

ಚೀನಾದ ಸೂಪರ್‌ಮಾರ್ಕೆಟ್‌ವೊಂದರಲ್ಲಿ ಡಾ. ರಾಜ್‌ಕುಮಾರ್ ಅವರ ಹಾಡು ಕೇಳಿಬಂದಿದ್ದು, ಕನ್ನಡದ ಹೆಮ್ಮೆಯನ್ನು ಸಾರುವ ಈ ಹಾಡು, ಚೀನಾದಲ್ಲಿ ಕೇಳಿಬಂದಿದ್ದು ಅಭಿಮಾನಿಗಳಿಗೆ ಹೆಮ್ಮೆ ತಂದಿದ್ದು, ಅಲ್ಲದೇ ಈ ಘಟನೆ ಕನ್ನಡ ಚಿತ್ರರಂಗದ ಜಾಗತಿಕ ಮನ್ನಣೆಗೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ.
ಚೀನಾದಲ್ಲಿ ಮಾರ್ಕೆಟ್ ನಲ್ಲಿ ಅಣ್ಣಾವ್ರ ಹಾಡಿನ ವಿಡಿಯೋವನ್ನ ಟ್ವೀಟರ್ ನಲ್ಲಿ ಪ್ರವೀಣ್ ಆರ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅಣ್ಣಾವ್ರ ಕನ್ನಡ ನಾಡಿನ ದೊರೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಈ ವಿಡಿಯೋವನ್ನು ಇಲ್ಲಿಯವರೆಗೂ 75 ಸಾವಿರಕ್ಕೂ ಅಧಿಕ ಮಂದಿ ಈ ರೀಲ್ಸ್‌ಅನ್ನು ವೀಕ್ಷಣೆ ಮಾಡಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ.
ಇನ್ನೂ ಗಂಧದ ಗುಡಿ ಸಿನಿಮಾದ ಐಕಾನಿಕ್ ಗೀತೆಗಳಲ್ಲಿ ಒಂದಾಗಿರುವ ನಾವಾಡುವ ನುಡಿಯೆ ಹಾಡನ್ನು ಸೂಪರ್ ಮಾರ್ಕೆಟ್‌ನಲ್ಲಿ ಪ್ಲೇ ಮಾಡಲಾಗಿತ್ತು. ಈ ವೇಳೆ ಸೂಪರ್‌ಮಾರ್ಕೆಟ್ ಬಳಿ ಹೋಗಿರುವ ಕರ್ನಾಟಕ ಮೂಲದ ದಂಪತಿಗಳಿಗೆ ಒಂದು ಕಡೆ ರಾಜ್ಯ ಕುಮಾರ್ ಅವರ ಹಾಡು ಕೇಳಿ ಖುಷಿಯಾಗಿದ್ದರೆ, ಇನ್ನೊಂದೆಡೆ ಈ ಹಾಡನ್ನು ಪ್ಲೇ ಮಾಡಿದ್ದು ಯಾಕೆ ಎನ್ನುವ ಕುತೂಹಲ ಉಂಟಾಗಿತ್ತು. ಅದಕ್ಕಾಗಿ ಸೂಪರ್ ಮಾರ್ಕೆಟ್‌ನ ಒಳಗೆ ಹೋಗಿ ವಿಚಾರಿಸಿದಾಗ ತಾಂತ್ರಿಕ ಸಮಸ್ಯೆಯಿಂದ ಈ ಹಾಡು ಪ್ಲೇ ಆಗಿರುವುದಾಗಿ ಗೊತ್ತಾಗಿದೆ.
ಭಾರತೀಯರು ಇನ್ನು ಜಾತಿ , ಧರ್ಮ,ಭಾಷೆ ಅಂತ ಇದೀವಿ ಆದರೆ, ಬೇರೆ ದೇಶದವರು ಕುವೆಂಪು ರವರ ವಿಶ್ವಮಾನವ ಸಂದೇಶವನ ಪಾಲಿಸುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೀನಾ ಎಂದಿಗೂ ಕನ್ನಡಿಗರ ಸರಳತೆಯನ್ನು ಅರ್ಥ ಮಾಡಿಕೊಂಡಿದೆ. ಚೀನಾದಲ್ಲಿ ಇನ್ನಷ್ಟು ಅಣ್ಣಾವ್ರ ಹಾಡು ಮೊಳಗಲಿ ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಹಾಡು ಕನ್ನಡದ ಹೆಮ್ಮೆಗೆ ಗೌರವ ಸಲ್ಲಿಸುತ್ತದೆ ಮತ್ತು ಡಾ. ರಾಜ್‌ಕುಮಾರ್ ಅವರ ಅಭಿಮಾನಿಗಳಲ್ಲಿ ಅಚ್ಚುಮೆಚ್ಚಿನ ಹಾಡಾಗಿ ಉಳಿದಿದೆ. ಕರ್ನಾಟಕದ ಸಾಂಸ್ಕೃತಿಕ ಪ್ರತಿಮೆಯಾಗಿ ಉಳಿದಿರುವ ಡಾ. ರಾಜ್‌ಕುಮಾರ್ ಅವರ ಫಾಲೋವರ್‌ಗಳಿಗೆ ಈ ವಿಡಿಯೋ ಅಪಾರ ಹೆಮ್ಮೆ ತಂದಿದೆ.












Click it and Unblock the Notifications