Darshan Thoogudeepa: ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಸ್ಪೆಂಡ್? ಕರ್ನಾಟಕದ ಜನರಿಂದ ಪ್ರತಿಭಟನೆಗೆ ತಯಾರಿ?

ಕನ್ನಡ ನಾಡು ಶಾಂತಿಯ ಬೀಡು, ಕನ್ನಡ ನಾಡು ನೆಮ್ಮದಿಯ ನಾಡು. ಹೀಗಿದ್ದಾಗ ನಮ್ಮ ಕನ್ನಡ ನಾಡಿನಲ್ಲಿ ಈಗ ಏನಾಗುತ್ತಿದೆ? ಅಂದಹಾಗೆ ಈ ಪ್ರಶ್ನೆ ಕೇಳುತ್ತಿರುವುದು ಕರ್ನಾಟಕದ ಜನ. ದರ್ಶನ್ ತೂಗುದೀಪ್ & ಸಹಚರರು ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂತು ಸಿಗರೇಟು ಸೇದುತ್ತಾ ಟೀ ಕುಡಿಯುತ್ತಿರುವ ಫೋಟೋ ವೈರಲ್ ಆದ ನಂತರ, ಕರ್ನಾಟಕದ ಮೂಲೆ ಮೂಲೆಯಲ್ಲೂ ಆಕ್ರೋಶ ಭುಗಿಲೆದ್ದಿದೆ. ಅಲ್ಲದೆ ಕರ್ನಾಟಕದ ಜನರು ಈಗ ಏನು ಹೇಳುತ್ತಿದ್ದಾರೆ ಗೊತ್ತಾ?

ಕೊಲೆ, ದರೋಡೆ, ಕಳ್ಳತನ ಹೀಗೆ ಒಂದಲ್ಲ ಒಂದು ರೀತಿಯ ಸಮಾಜ ವಿರೋಧಿ ಕೃತ್ಯವನ್ನ ಎಸಗಿದವರಿಗೆ ಅಂತಾನೆ ಪರಪ್ಪನ ಅಗ್ರಹಾರ ಜೈಲು ಇದೆ. ಜೈಲಿಗೆ ಒಬ್ಬ ಅಪರಾಧಿ ಅಥವಾ ಆರೋಪಿಯನ್ನ ಹಾಕುವುದು ಯಾಕೆ ಅಂದ್ರೆ ಆತನಿಗೆ ಬುದ್ಧಿ ಬರಲಿ ಅಂತಾ. ಆದರೆ ನಮ್ಮ ಕರ್ನಾಟಕದ ಜೈಲಲ್ಲಿ ಈಗ ಆರೋಪಿಗಳಿಗೆ & ಅಪರಾಧಿಗಳಿಗೂ ಮಜಾ ಮಾಡಲು ಅವಕಾಶ ಸಿಗುತ್ತಿದೆ. ಹಾಗಾದ್ರೆ ಕರ್ನಾಟಕದ ಕಾನೂನು & ಸುವ್ಯವಸ್ಥೆಗೆ ಏನಾಗಿದೆ ಅಂತಾ ಕರ್ನಾಟಕ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಸ್ಪೆಂಡ್ ಆಗ್ತಾರಾ? ಮುಂದೆ ಓದಿ.

Karnataka People Saying That Darshan Thoogudeepa Is Enjoying Very Much In Parappana Agrahara

ದುಡ್ಡು ಇದ್ದರೆ ಫುಲ್ ಮಜಾ?

ಹಣ ಕೊಟ್ರೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಬಾಯಿ ಬಿಡ್ತಾರಾ? ಎಂಬ ಆರೋಪವು ಕೇಳಿಬಂದಿದೆ. ಪರಪ್ಪನ ಅಗ್ರಹಾರ ಜೈಲು ವ್ಯವಸ್ಥೆ ಹಾಳಾಗಿ ಹೋಗಿದ್ದು ಜೈಲಿನ ಒಳಗಡೆ ಈಗ ಗಾಂಜಾ & ಡ್ರಗ್ಸ್ ಸಮೇತ ಎಣ್ಣೆ ಎಲ್ಲವೂ ಸಪ್ಲೈ ಆಗುತ್ತೆ ಎಂಬ ಆರೋಪ ಕೇಳಿಬರುತ್ತಿತ್ತು. ಇದೀಗ ನೋಡಿದರೆ ಜೈಲಿನ ಒಳಗಡೆಯೇ ಖೈದಿಗಳಿಗೆ ಸಿಗರೇಟು ಸಪ್ಲೈ ಮಾಡಿರುವ ಆರೋಪ ಕೂಡ ಕೇಳಿಬಂದು, ಅದಕ್ಕೆ ಸಾಕ್ಷಿಯಾಗಿ ಫೋಟೋ ಕೂಡ ವೈರಲ್ ಆಗಿದೆ.

ಇದು ಭಾರಿ ಆಕ್ರೋಶ ಭುಗಿಲೇಳುವ ರೀತಿ ಮಾಡಿದೆ. ಮತ್ತೊಂದು ಕಡೆ ಈ ಕುರಿತು ತನಿಖೆ ನಡೆಯಬೇಕು, ಹಾಗೇ ಸಿದ್ದರಾಮಯ್ಯ ಅವರ ಸರ್ಕಾರ ಈ ಘಟನೆಯನ್ನ ಗಂಭೀರವಾಗಿಯು ಪರಿಗಣಿಸಬೇಕು. ತಪ್ಪು ಮಾಡಿರುವ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ ಕನ್ನಡ ನಾಡಿನ ಜನರು. ಹೀಗಿದ್ದಾಗಲೇ ಈ ಘಟನೆ ಕೂಡ ಮುಚ್ಚಿ ಹೋಗಲಿದೆ ಎಂಬ ಆರೋಪ ಕೇಳಿಬಂದಿದೆ.

ದರ್ಶನ್ ತೂಗುದೀಪ್‌ಗೆ ರೌಡಿಗಳ ಸಂಪರ್ಕ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ದರ್ಶನ್ ತೂಗುದೀಪ್‌ಗೆ ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಿದೆ. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಅವರಿಗೆ ರೌಡಿಗಳ ಸಂಪರ್ಕವಿದೆ ಎಂದು ಆರೋಪಿಸಲಾಗಿತ್ತು. ಈ ಮಧ್ಯೆ ಕರ್ನಾಟಕದ ಮೂಲೆ ಮೂಲೆಯಲ್ಲೂ ದರ್ಶನ್ ತೂಗುದೀಪ್ & ರೌಡಿಗಳ ಮಧ್ಯೆ ಹಲವು ರೀತಿ ವ್ಯವಹಾರ ಇದೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ಆರೋಪಗಳಿಗೆ ಇದೀಗ ಬಲವಾದ ಸಾಕ್ಷಿ ಸಿಕ್ಕಿದ್ದು, ನಟ ದರ್ಶನ್ ತೂಗುದೀಪ್ ಬೆಂಗಳೂರಿನ ಟಾಪ್ ರೌಡಿಗಳ ಪೈಕಿ ಮುಂಚೂಣಿಯಲ್ಲಿ ಇರುವ ರೌಡಿ ಶೀಟರ್ ನಾಗ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಹಣ ಅಂದ್ರೆ ಹೆಣ ಕೂಡ...

ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆಯ ಕುರಿತು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆದಾಗ ಗಾಂಜಾ, ಸಿಗರೇಟ್ & ಲಿಕ್ಕರ್ ಹೀಗೆ ಏನೇನು ವಸ್ತು ಸಿಗಬಾರದೋ ಅದೆಲ್ಲಾ ಸಿಕ್ಕಿತ್ತು. ಈಗಲೂ ಅಷ್ಟೇ ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗಳಿಗೆ ಜೈಲಿನ ಅಧಿಕಾರಿಗಳೇ ಸಹಾಯ ಮಾಡುತ್ತಾರೆ, ಅದ್ರಲ್ಲೂ ಜೈಲಿನ ಒಳಗಡೆ ದುಡ್ಡು ಕೊಟ್ಟರೆ ಏನೇನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಜೈಲಿನ ಒಳಗೆ ಮಾಡ್ತಾರೆ ಎನ್ನುವ ಆರೋಪದ ನಡುವೆ, ಇದೀಗ ದರ್ಶನ್ & ಗ್ಯಾಂಗ್ ಸಿಗರೇಟು ಸೇದುತ್ತಾ ಟೀ ಕುಡಿಯುವ ಫೋಟೋ ಕೂಡ ವೈರಲ್ ಆಗಿದೆ ಅಂತಾ ಆರೋಪ ಮಾಡುತ್ತಿದ್ದಾರೆ ಜನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+