Darshan Thoogudeepa: ಪರಪ್ಪನ ಅಗ್ರಹಾರದಲ್ಲಿ ದುಡ್ಡು ಇದ್ದರೆ ತಲೆ ಹಿ..? ಚೀ ಥೂ ಅಂತಾ ಮುಖಕ್ಕೆ ಉಗಿದ ಜನ!
ದರ್ಶನ್ ತೂಗುದೀಪ್ & ಸಹಚರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟು, ಟೀ ಅಂತಾ ಎಂಜಾಯ್ ಮಾಡ್ತಿದ್ದಾರೆ. ಜೊತೆಗೆ, ವಿಡಿಯೋ ಕಾಲ್ ಮೂಲಕ ಮಾತನಾಡುತ್ತಾ ಇರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದೇ ತಡ ಈಗ ಇಡೀ ಕರ್ನಾಟಕ ರೊಚ್ಚಿಗೆದ್ದಿದೆ. ಅದರಲ್ಲೂ ಈ ಘಟನೆ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಹಾಗೇ, ಪರಪ್ಪನ ಅಗ್ರಹಾರದಲ್ಲಿ ದುಡ್ಡು ಇದ್ದರೆ ತಲೆ ಹಿ..? ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ ಜನರು. ಸೋಷಿಯಲ್ ಮೀಡಿಯಾದಲ್ಲಿ ಈಗ ಪರಪ್ಪನ ಅಗ್ರಹಾರದ ಅವ್ಯವಸ್ಥೆ ಬಗ್ಗೆ ಕರ್ನಾಟಕದ ಜನ ಹೇಳುತ್ತಿರುವುದು ಏನು?
ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆಯ ಕುರಿತು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆದಾಗ ಗಾಂಜಾ, ಸಿಗರೇಟ್ & ಲಿಕ್ಕರ್ ಹೀಗೆ ಏನೇನು ವಸ್ತು ಸಿಗಬಾರದೋ ಅದೆಲ್ಲಾ ಸಿಕ್ಕಿತ್ತು. ಈಗಲೂ ಅಷ್ಟೇ ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗಳಿಗೆ ಜೈಲಿನ ಅಧಿಕಾರಿಗಳೇ ಸಹಾಯ ಮಾಡುತ್ತಾರೆ, ಅದ್ರಲ್ಲೂ ಜೈಲಿನ ಒಳಗಡೆ ದುಡ್ಡು ಕೊಟ್ಟರೆ ಏನೇನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಜೈಲಿನ ಒಳಗೆ ಮಾಡ್ತಾರೆ ಎನ್ನುವ ಆರೋಪದ ನಡುವೆ, ಇದೀಗ ದರ್ಶನ್ & ಗ್ಯಾಂಗ್ ಸಿಗರೇಟು ಸೇದುತ್ತಾ ಟೀ ಕುಡಿಯುವ ಫೋಟೋ ಕೂಡ ವೈರಲ್ ಆಗಿದೆ ಅಂತಾ ಆರೋಪ ಮಾಡುತ್ತಿದ್ದಾರೆ ಜನ. ಹಾಗಾದ್ರೆ ಪರಪ್ಪನ ಅಗ್ರಹಾರದಿಂದ ಅಧಿಕಾರಿಗಳು ಸಸ್ಪೆಂಡ್ ಆಗುತ್ತಾರಾ? ಮುಂದೆ ಓದಿ.

ಪರಪ್ಪನ ಅಗ್ರಹಾರದ ಮೇಲೆ ರೇಡ್?
ಕೊಲೆ, ದರೋಡೆ, ಕಳ್ಳತನ ಹೀಗೆ ಒಂದಲ್ಲ ಒಂದು ರೀತಿಯ ಸಮಾಜ ವಿರೋಧಿ ಕೃತ್ಯವನ್ನ ಎಸಗಿದವರಿಗೆ ಅಂತಾನೆ ಪರಪ್ಪನ ಅಗ್ರಹಾರ ಜೈಲು ಇದೆ. ಜೈಲಿಗೆ ಒಬ್ಬ ಅಪರಾಧಿ ಅಥವಾ ಆರೋಪಿಯನ್ನು ಹಾಕುವುದು ಯಾಕೆ ಅಂದ್ರೆ ಆತನಿಗೆ ಬುದ್ಧಿ ಬರಲಿ ಅಂತಾ. ಆದರೆ ನಮ್ಮ ಕರ್ನಾಟಕದ ಜೈಲಲ್ಲಿ ಈಗ ಆರೋಪಿಗಳಿಗೆ & ಅಪರಾಧಿಗಳಿಗೂ ಮಜಾ ಮಾಡಲು ಅವಕಾಶ ಸಿಗುತ್ತಿದೆ. ಹಾಗಾದ್ರೆ ಕರ್ನಾಟಕದ ಕಾನೂನು & ಸುವ್ಯವಸ್ಥೆಗೆ ಏನಾಗಿದೆ ಅಂತಾ ಕರ್ನಾಟಕ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಸ್ಪೆಂಡ್ ಆಗ್ತಾರಾ? ಎಂಬ ಪ್ರಶ್ನೆ ನಡುವೆ ಇದೀಗ ಹೊಸ ಬಿರುಗಾಳಿಯೇ ಎದ್ದಿದೆ.
ಜೈಲಿನಲ್ಲಿ ಹೆಂಡ & ಸಿಗರೇಟ್ ಸಪ್ಲೈ?
ಒಟ್ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಗಳಿಗೂ ರಾಜ ಮರ್ಯಾದಿ ಸಿಗುತ್ತಿದೆಯಾ? ದುಡ್ಡು ಇದ್ದರೆ ಕೊಲೆ ಆರೋಪಿಗು ಜೈಲು ಸ್ವರ್ಗ ಆಗುತ್ತಾ? ಅಂತಾ ಜನರು ರೊಚ್ಚಿಗೆದ್ದಿದ್ದು ಈ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಈ ಫೋಟೋ ಬಿರುಗಾಳಿ ಎಬ್ಬಿಸಿದ್ದು, ಅಲ್ಲದೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.
ಆದರೆ ದರ್ಶನ್ ತೂಗುದೀಪ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂಡ ಸಿಗರೇಟ್ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಇಡೀ ಕರ್ನಾಟಕದ ಜನರನ್ನು ಕಾಡುತ್ತಿದೆ. ಹೀಗಾಗಿ, ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ ಇದರ ಜೊತೆಗೆ ವಿಡಿಯೋ ಕಾಲ್ ಕೂಡ ಮಾಡಿದ್ದಾರೆ ನಟ ದರ್ಶನ್. ದರ್ಶನ್ ತೂಗುದೀಪ್ ಅವರು ವಿಡಿಯೋ ಕಾಲ್ ಕೂಡ ಮಾಡಿರುವ ಬಗ್ಗೆ ಸಾಕ್ಷಿ ಸಿಕ್ಕಿರುವುದು ಅವರಿಗೆ ಮತ್ತಷ್ಟು ಗಂಡಾಂತರ ತರಿಸಿದೆ.












Click it and Unblock the Notifications