CCL 2025: ಸಿಸಿಎಲ್‌ ಪಂದ್ಯಾವಳಿಗೆ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನ 11 ನೇ ಸೀಸನ್ ಫೆಬ್ರವರಿ 8ರಿಂದ ಆರಂಭವಾಗಲಿದ್ದು 8 ಚಿತ್ರರಂಗಳಿಂದ ತಂಡಗಳು ಈ ಜನಪ್ರಿಯ ಕ್ರಿಕೆಟ್ ಲೀಗ್‌ನಲ್ಲಿ ಆಡಲಿವೆ. ಮನರಂಜನೆ ಮತ್ತು ಕ್ರೀಡೆಯನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಯಶಸ್ವಿಯಾಗಿದ್ದು, 10 ಆವೃತ್ತಿಗಳು ಸೂಪರ್ ಹಿಟ್ ಆಗಿರುವುದೇ ಸಾಕ್ಷಿಯಾಗಿದೆ. ನಟರು ಮತ್ತು ಚಲನಚಿತ್ರ ತಂಡದ ಸದಸ್ಯರು ಈ ತಂಡದಲ್ಲಿ ಸ್ಥಾನ ಪಡೆಯುತ್ತಾರೆ.

ಕನ್ನಡ ಚಿತ್ರೋದ್ಯಮದಿಂದ ಕರ್ನಾಟಕ ಬುಲ್ಡೋಜರ್ಸ್ ತಂಡವು ಸಿಸಿಎಲ್‌ನಲ್ಲಿ ಆಡುತ್ತದೆ. ಕಿಚ್ಚ ಸುದೀಪ್ ನಾಯಕತ್ವದ ತಂಡ ಸಿಸಿಎಲ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಈ ಬಾರಿ ಸಿಸಿಎಲ್‌ಗಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಪ್ರಕಟಿಸಲಾಗಿದೆ.

karnataka bulldozers complete squad celebrity cricket league 2025

ಕಿಚ್ಚ ಸುದೀಪ್ ತಂಡವನ್ನು ಮುನ್ನಡೆಸಲಿದ್ದಾರೆ. ಡಾರ್ಲಿಂಗ್ ಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಾರ್ತಿಕ್ ಜಯರಾಮ್‌ರಂತಹ ತಾರೆಯರು ಸೇರಿದಂತೆ 15 ಸದಸ್ಯರು ತಂಡದಲ್ಲಿದ್ದಾರೆ.

ಕರ್ನಾಟಕ ಬುಲ್ಡೋಜರ್ಸ್ ತಂಡ

ಕಿಚ್ಚ ಸುದೀಪ್ (ನಾಯಕ), ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್, ಡಾರ್ಲಿಂಗ್ ಕೃಷ್ಣ, ಸುನೀಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ, ನಿರೂಪ್ ಭಂಡಾರಿ, ಅನುಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕನಂದಾ, ಸಿದ್ದು ಮೂಲಿಮನಿ.

  • ತಂಡದ ಬೆಂಬಲ ಸಿಬ್ಬಂದಿ
  • ಮುಖ್ಯ ಕೋಚ್ - ರಿತೇಶ್ ಭಟ್ಕಳ್
  • ಸಹಾಯಕ ಕೋಚ್- ಎನ್‌ಸಿ ಅಯ್ಯಪ್ಪ
  • ಸಹಾಯಕ ಕೋಚ್ - ರಂಜನ್ ಮ್ಯಾನುಯೆಲ್
  • ಫಿಸಿಯೋ - ಅಜಯ್
  • ಎವಿಪಿ - ಮಯೂಖಾ ದೇವಂಗಿ
  • ವ್ಯವಸ್ಥಾಪಕ- ಹೇಮಂತ್

ಕರ್ನಾಟಕದ ಪಂದ್ಯ ಯಾವಾಗ?

ಫೆಬ್ರವರಿ 8ರಂದು ಪಂದ್ಯಾವಳಿ ಆರಂಭವಾಗಲಿದ್ದು ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ನಡೆಯುವ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ಬೆಂಗಾಲ್ ಟೈಗರ್ಸ್ ತಂಡವನ್ನು ಎದುರಿಸಲಿದ್ದು, ಸಂಜೆ 6 ಗಂಟೆಯಿಂದ ಆರಂಭವಾಗುವ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತೆಲುಗು ವಾರಿಯರ್ಸ್ ತಂಡವನ್ನು ಎದುರಿಸಲಿದೆ.

ಮ್ಯಾಕ್ಸ್ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಬಿಗ್‌ ಬಾಸ್ ಕಾರ್ಯಕ್ರಮ ಕೂಡ ಯಶಸ್ಸು ಕಂಡಿದ್ದು, ಇದೀಗ ಸುದೀಪ್ ಕ್ರಿಕೆಟ್‌ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕ ಬುಲ್ಡೋಜರ್ಸ್ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಸೋಲು ಕಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

2013 ಮತ್ತು 2014 ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಚಾಂಪಿಯನ್ ಆಗಿದ್ದು ಬಿಟ್ಟರೆ ಈವರೆಗೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು, ಈ ಬಾರಿಯಾದರೂ ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+