Kantara Chapter -1 Trailer: ವಿವಿಧ ಸ್ಟಾರ್ಸ್‌ಗಳಿಂದ ಇಂದು ಟ್ರೈಲರ್ ರಿಲೀಸ್, ಕನ್ನಡಿಗರಿಗೆ ಡಿಜಿಟಲ್ ಕಾರ್ಡ್..
Trailer of Kantara Chapter -1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ "ಕಾಂತಾರ ಚಾಪ್ಟರ್ 1' ವಿವಿಧ ಭಾಷೆಗಳಲ್ಲಿನ ಟ್ರೈಲರ್ ಇಂದು ನವರಾತ್ರಿಯ ಮೊದಲ ದಿನ ಸೋಮವಾರ (ಸೆಪ್ಟಂಬರ್ 22) ಬಿಡುಗಡೆ ಆಗುತ್ತಿದೆ. ಈ ಮೂಲಕ ಟೀಂ ಭರ್ಜರಿ ಪ್ರಚಾರ ಆರಂಭಿಸುತ್ತಿದೆ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲು ಬಿಡುಗಡೆ ಆಗುತ್ತಿದ್ದು, ಅದಕ್ಕೆ 09ದಿನಗಳು ಮಾತ್ರವೇ ಬಾಕಿ ಇದೆ. ಇಂದು ಮಧ್ಯಾಹ್ನ 12.45 ವಿವಿಧ ಭಾಷೆಯ ಸ್ಟಾರ್ ಹಿರೋಗಳು ಆಯಾ ಭಾಷೆಯ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.
ವಿಶೇಷವೆಂದರೆ ಈ ಹಿಂದೆಯೇ ಹೇಳಿದಂತೆ ಕನ್ನಡ ಟ್ರೈಲರ್ ಅನ್ನು ಪ್ರೇಕ್ಷಕರಿಂದಲೇ ರಿಲೀಸ್ ಮಾಡಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇಂದು ಟ್ರೈಲರ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಲಿದೆ. ದಸರಾ ಹಬ್ಬದ ಆರಂಭದ ಮೊದಲ ದಿನವೇ ಕಾಂತಾರ ಚಿತ್ರತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಅಕ್ಟೋಬರ್ 02ರಂದು "ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಕನ್ನಡ ನಾಡಿನ ನೆಲದ ಕಥೆಯು ಅಂದು ವಿಶ್ವಕ್ಕೆ ಪರಿಚಯವಾಗಲಿದೆ. ಈ ಸಿನಿಮಾದ ಹಿಂದಿ ಟ್ರೇಲರ್ ಅನ್ನು ಹೃತಿಕ್ ರೋಷನ್, ತೆಲುಗು ಟ್ರೇಲರ್ ಅನ್ನು ನಟ ಪ್ರಭಾಸ್, ತಮಿಳು ಟ್ರೇಲರ್‌ಗೆ ಶಿವ ಕಾರ್ತಿಕೇಯನ್ ಬಿಡುಗಡೆಗೊಳಿಸಲಿದ್ದಾರೆ. ಇನ್ನು ಮಲಯಾಳಂ ಟ್ರೇಲರ್ ಅನ್ನು ಅಲ್ಲಿ ಸಿನಿಮಾ ವಿತರಣೆಯ ಹಕ್ಕು ಪಡೆದಿರುವ ಪೃಥ್ವಿರಾಜ್ ಸುಕುಮಾರನ್ ಅವರೇ ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.
"ಕಾಂತಾರ ಚಾಪ್ಟರ್ 1' ರಿಷಬ್ ಶೆಟ್ಟಿ ಚಿತ್ರತಂಡದಿಂದ ಮೊದಲ ಸುದ್ದಿಗೋಷ್ಠಿ ಇವತ್ತೇ ನಡೆಯಲಿದೆ. ಚಿತ್ರತಂಡ ಪ್ರಚಾರ, ಮುಂದಿನ 09 ದಿನ ಏನೆಲ್ಲ ಪ್ಲಾನ್ ಮಾಡಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಲಿದೆ. ವಿಶೇಷ ಅಂದರೆ 'ದಿ ಲಯನ್ ಕಿಂಗ್', 'ಮಿಷನ್ ಇಂಪಾಸಿಬಲ್'ನಂಥಹ ದೊಡ್ಡ ಸಿನಿಮಾಗಳಿಗೆ ವಿಎಫ್‌ಎಕ್ಸ್ ಮಾಡಿದ ಎಂಪಿಸಿ ಈ ಕನ್ನಡ ಕಥೆಯ ಸಿನಿಮಾಗೆ ವಿಎಫ್‌ಎಕ್ಸ್ ಹಾಗೂ ಸಿಜಿಐ ಮಾಡಿದೆ. ಒಟ್ಟಾರೆ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಸೇರಿದಂತೆ ಭಾರತೀಯರು ಸಜ್ಜಾಗಿದ್ದಾರೆ.
ಕನ್ನಡ ಜನತೆಗೆ ನಮಸ್ಕಾರ,
— Hombale Films (@hombalefilms) September 21, 2025
'ಕಾಂತಾರ: ಒಂದು ದಂತಕಥೆ - ಅಧ್ಯಾಯ 1' ಚಲನಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಇದೊಂದು ಅಪ್ಪಟ ಸುವರ್ಣಾವಕಾಶ.
ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ:
1. ಮೊದಲಿಗೆ, https://t.co/lkleCLtjZD ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಅಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸಿ.
3. ನಂತರ, ನೀವು ನಿಮ್ಮ ಹೆಸರಿನಲ್ಲಿರುವ… pic.twitter.com/LAT3zxKS1b
ಕನ್ನಡ ಟ್ರೈಲರ್ ಬಿಡುಗಡೆ ಹೇಗೆ?
"ಕಾಂತಾರ ಚಾಪ್ಟರ್ 1' ಟ್ರೇಲರ್ ಬಿಡುಗಡೆಯನ್ನು ಕನ್ನಡಿಗರಿಂದಲೇ ಮಾಡಿಸುವುದಾಗಿ ಚಿತ್ರತಂಡ ಹೇಳಿತ್ತು. ಈ ಸಂಬಂಧ ಡಿಜಿಟಲ್ ಕಾರ್ಡ್ ಪರಿಚಯಿಸಿರುವ ಚಿತ್ರತಂಡವು https://kantara.world ವೆಬ್‌ಸೈಟಿಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ವಿವರ ಹಾಕಿದರೆ ಟ್ರೇಲರ್ ಬಿಡುಗಡೆಯ ಡಿಜಿಟಲ್ ಕಾರ್ಡ್ ಡೌನ್‌ಲೋಡ್ ಆಗುತ್ತದೆ. ಇದನ್ನು ಸಾಮಾಜಿಕ ಮಾಧ್ಯದಲ್ಲಿ ಪೋಸ್ಟ್ ಮಾಡಬಹುದು. ಇಂದು ಮಧ್ಯಾಹ್ನ 12.35ಕ್ಕೆ ವೆಬ್‌ಸೈಟ್‌ಗೆ ವಿಸಿಟ್ ಮಾಡಿ 'ಕಾಂತಾರ ಚಾಪ್ಟರ್ 1' ಟ್ರೇಲರ್ ಬಿಡುಗಡೆ ಮಾಡಬಹುದು ಎಂದು ಚಿತ್ರತಂಡ ತಿಳಿಸಿದೆ. ಈ ಮೂಲಕ ಪ್ರತಿಯೊಬ್ಬ ಕನ್ನಡಿಗರನ್ನು ತಲುಪಲು ಪ್ಲಾನ್ ಮಾಡಿದೆ.












Click it and Unblock the Notifications