Aishwarya Rangarajan: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್; ಹುಡುಗ ಯಾರು ಗೊತ್ತಾ?
Aishwarya Rangarajan: ಇತ್ತೀಚಿನ ದಿನಗಳಲ್ಲಿ ಹಲವು ಚಲನಚಿತ್ರ ನಟ, ನಟಿಯರು ಸದ್ದಿಲ್ಲದೆ ಎಂಗೆಜ್‌ಮೆಂಟ್, ವಿವಾಹ ಆಗಿರುವ ಉದಾಹರಣೆಗಳಿವೆ. ಹಾಗೆಯೇ ಇದೀಗ ನಟ ದರ್ಶನ್ ಅಭಿನಯಿಸಿರುವ ಕ್ರಾಂತಿ ಸಿನಿಮಾಗೆ ಸಖತ್ ಹಿಟ್ ಸಾಂಗ್ ಹಾಡಿದ ಖ್ಯಾತ ಗಾಯಕಿಯೊಬ್ಬರು ಸದ್ದಿಲ್ಲದೆ ನಿಶಿತಾರ್ಥ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಈ ಫೋಟೋಗಳು ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
ಸಿನಿಮಾನ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಖ್ಯಾತ ನಟ, ನಟಿಯರು, ಗಾಯಕಿ, ಗಾಯಕರು ಸರಳ ವಿವಾಹದ ಕಡೆ ಗಮನಹರಿಸಿದ್ದಾರೆ. ಇದೀಗ ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾಗೆ ಹಿಟ್ ಸಾಂಗ್ 'ಶೇಕ್ ಇಟ್ ಪುಷ್ಪವತಿ' ಹಾಡು ಹಾಡಿ ಗಮನ ಸೆಳದಿದ್ದ ಖ್ಯಾತ ಗಾಯಕಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡು ಗಮನ ಸೆಳೆದಿದ್ದಾರೆ.

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕನ್ನಡದ ಮೂಲಕ ಉತ್ತಮವಾಗಿ ಹಾಡುಗಳನ್ನು ಹಾಡುತ್ತಾ ಚಾಪು ಮೂಡಿಸಿದ್ದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ಕಡಲ ನಗರಿ ಮಂಗಳೂರು ಹುಡುಗನ ಜೊತೆ ಸರಳವಾಗಿ ನಿಶಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಐಶ್ವರ್ಯಾ ರಂಗರಾಜನ್ ಅವರು, ಬರೀ ಕ್ರಾಂತಿ, ಯುಐ, ಕಬ್ಜ, ಏಕ್ ಲವ್ ಯಾ ಸಾಂಗ್ ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಹಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಐಶ್ವರ್ಯಾ ರಂಗರಾಜನ್ ಅವರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಮತ್ತೊಂದೆಡೆ ಇದೀಗ ಐಶ್ವರ್ಯಾ ರಂಗರಾಜನ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳಲ್ಲಿ ಅವರು ಮಂಗಳೂರು ಹುಡುಗನ ಜೊತೆ ಮಿನುಗು ತಾರೆಯಂತೆ ಮಿಂಚುತ್ತಿದ್ದಾರೆ.
ಐಶ್ವರ್ಯಾ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ಆಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ಅಲ್ಲದೆ, ಫೋಟೋ ಕೆಳಗಡೆ ಅವರು ಬೆಂಗಳೂರು ಟು ಮಂಗಳೂರು, ಪರ್ಫೆಕ್ಟ್ ಪಿಚ್ ಎಂದು ಬರೆದುಕೊಂಡಿದ್ದಾರೆ. ಇರ ಅರ್ಥ ಐಶ್ವರ್ಯ ಬೆಂಗಳೂರು, ಮದುವೆಯಾಗುವ ಹುಡುಗ ಮಂಗಳೂರು ಎಂದರ್ಥ.
ಹೀಗೆ ಸಿನಿರಂಗದಲ್ಲಿ ಬರಿ ನಟ, ನಟಿಯರು ಅಷ್ಟೇ ಅಲ್ಲದೆ, ಗಾಯಕ, ಗಾಯಕಿಯರು ಕೂಡ ಹಳೇ ಸಂಪ್ರದಾಯದ ಮೊರೆ ಹೋಗುತ್ತಿದ್ದಾರೆ. ಅಂದರೆ ಸರಳ ಮದುವೆ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಯಾವುದೇ ಆಡಂಬರವಿಲ್ಲದೆ, ಸರಳವಾಗಿ ವಿವಾಹವಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹೊಸ ಯುಗದಲ್ಲಿ ಹಳೆ ಕಾಲ ಪರಿಚಯವಾದಂತಾಗುತ್ತಿದೆ.
ಈಗ ಒಂದು ಸರಳ ಮದುವೆ ಮಾಡಬೇಕೆಂದರೂ ಹಳ್ಳೆ ಕಡೆಯೇ ಏನಿಲ್ಲ ಅಂದರೂ 3 ರಿಮದ 4 ಲಕ್ಷ ರೂಪಾಯಿ ಹಣ ಬೇಕೇ ಬೇಕಾಗುತ್ತದೆ. ಇನ್ನೂ ನಗರ ಪ್ರದೇಶಗಳಲ್ಲಿ ಅಂದರೆ, 5 ಲಕ್ಷದ ಮೇಲೆಯೇ ಖರ್ಚಾಗುತ್ತದೆ. ಅದರಲ್ಲೂ ವಿಜೃಂಬಣೆಯಿಂದ ವಿವಾಹ ಮಾಡಿಕೊಡಬೇಕೆಂದರೆ, 10 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಆದೇ ಆಗುತ್ತದೆ ಈಗಿನ ದರ ಏರಿಕೆ ನೋಡೋದಾದ್ರೆ. ಅದರಲ್ಲೂ ಹಣದ ವಿವಾರದಲ್ಲಿ ಹೆಚ್ಚು ಪಟ್ಟು ಬೀಳುವುದೇ ಹೆಣ್ಣಿನ ಕಡೆಯವರಿಗೆ.
ಸೆಲೆಬ್ರೆಟಿಗಳ ವಿಚಾರ ಹೊರತುಪಡಿಸಿದ್ರೆ, ಸಾಮಾನ್ಯವಾಗಿ ಹಳ್ಳಿಗಳ ಕಡೆ ಒಂದು ಮದುವೆ ಮಾಡಿಕೊಡಬೇಕೆಂದ್ರೆ ಹೆಣ್ಣಿನ ಕಡೆಯವ್ರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಆದ್ರೆ ಇದೀಗ ಈ ನಿಯಮ ಬದಲಾಗಿಬಿಟ್ಟಿದೆ. ಎರಡು ಕಡೆಯವ್ರು ಕಡೆ ಅಷ್ಟೇ ಪ್ರಮಾಣದಲ್ಲಿ ಖರ್ಚು ಮಾಡಬೇಕಾಗಿದೆ. ಇನ್ನು ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ತಮ್ಮ ಸ್ನೇಹಿತೆ ಡಾ.ಧನ್ಯತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಡಾಲಿ ಧನಂಜಯ್ ಅವರು ಚಿತ್ರದುರ್ಗದ ವೈದ್ಯೆ ಧನ್ಯತಾಗೆ ಮಾಂಗಲ್ಯ ಧಾರಣೆ ಮಾಡಿ ಸಪ್ತಪದಿ ತುಳಿದಿದ್ದಾರೆ. ಅವರ ವಿವಾಹಕ್ಕೆ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದ್ದು, ಕಲಾವಿದ ಅರುಣ್ ಸಾಗರ್ ಅವರು ಸೆಟ್‌ಗಳನ್ನು ನಿರ್ಮಿಸಿದ್ದರು. ಇದನ್ನು ದೇವಸ್ಥಾನದ ಥೀಮ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ಕೂಡ ಹಳೆ ಸಂಪ್ರಾದಾಯವನ್ನು ನೆನಪಿಸುವಂತಿತ್ತು.












Click it and Unblock the Notifications