Dr Bro: ನಾನು 2024ರಲ್ಲಿ ಒಂದನ್ನ ಕೊಂದಿದ್ದೇನೆ ಎಂದ ಡಾಕ್ಟರ್‌ ಬ್ರೋ, ಏನದು?

ಕನ್ನಡ ಫೇಮಸ್‌ ಯೂಟ್ಯೂಬರ್‌ ಡಾಕ್ಟರ್‌ ಬ್ರೋ ಖ್ಯಾತಿಯ ಗಗನ್‌ ಶ್ರೀನಿವಾಸ್‌ ತಮ್ಮ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಸದ್ಯ ಹೊಸ ವರ್ಷಕ್ಕೆ ಕಾಲಿಟ್ಟಿರುವ ಅವರು ಕಳೆದ ವರ್ಷದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ 2024ರಲ್ಲಿ ನಾನು ಒಂದನ್ನ ಕೊಂದುಬಿಟ್ಟೆ ಎನ್ನುವ ಮೂಲಕ ಡಾಕ್ಟರ್‌ ಬ್ರೋ ಶಾಕ್‌ ಕೂಡ ನೀಡಿದ್ದಾರೆ.

ಇತ್ತೀಚೆಗೆ ಡಾಕ್ಟರ್‌ ಬ್ರೋ ನೇಪಾಳಕ್ಕೆ ಭೇಟಿ ನೀಡಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇಂದು ನೇಪಾಳದಲ್ಲಿ ಕ್ಲಿಕ್ಕಿಸಿಕೊಂಡ ಕೆಲವು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಡಾಕ್ಟರ್‌ ಬ್ರೋ ಕಳೆದ ವರ್ಷ ಒಂದನ್ನು ಕೊಂದಿಬಿಟ್ಟೆ ಎಂಬ ವಿಚಾರವನ್ನು ರಿವೀಲ್‌ ಮಾಡಿದ್ದಾರೆ. "ನಾನು 2024ರಲ್ಲಿ ನನ್ನ ಸೋಮಾರಿತನವನ್ನು ಕೊಂದಿದ್ದೇನೆ ಮತ್ತು 2025 ಅನ್ನು ಬ್ಲಾಸ್ಟ್ ಮಾಡುವುದಾಗಿ ಭರವಸೆ ನೀಡಿದ್ದೇನೆ" ಎಂದು ಡಾಕ್ಟರ್‌ ಬ್ರೋ ಹೇಳಿಕೊಂಡಿದ್ದಾರೆ.

Kannada YouTuber Dr Bro Gagan Srinivas Says I Killed My Laziness In 2024

ಈ ರೀತಿ ಹೇಳುವ ಮೂಲಕ ಗಗನ್‌ ಒಂದು ಕ್ಷಣ ಎಲ್ಲರಿಗೂ ಶಾಕ್‌ ಹುಟ್ಟಿಸಿದ್ದಾರೆ. ಸದ್ಯ ಅವರು ನೇಪಾಳವನ್ನು ಎಕ್ಸ್‌ಪ್ಲೋರ್‌ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಶೇಷ ವಿಡಿಯೋಗಳನ್ನು ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ತೋರಿಸುತ್ತಿದ್ದಾರೆ. ಇತ್ತೀಚೆಗೆ ಅವರು ನೇಪಾಳದಲ್ಲಿ ತಮ್ಮ ನೆಚ್ಚಿನ ಗೆಳೆಯ ಡ್ರೋನ್‌ ಕಳೆದುಕೊಂಡ ಬಗ್ಗೆಯೂ ಫನ್ನಿ ವಿಡಿಯೋ ಮಾಡಿ ಶೇರ್‌ ಮಾಡಿದ್ದರು.

ತನ್ನ ಜೀವನದಲ್ಲಿ ಮಹತ್ವದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿರುವುದಾಗಿ ಗಗನ್‌ ಬೇಸರದ ವಿಚಾರವನ್ನು ಹಂಚಿಕೊಂಡಿದ್ದರು. ಇನ್‌ಸ್ಟ್ರಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದ ಡಾಕ್ಟರ್‌ ಬ್ರೋ ತನ್ನ ಬಹುದಿನಗಳ ಗೆಳೆಯನಿಗೆ ಶ್ರದ್ಧಾಂಜಲಿ ಅರ್ಪಿಸಿ ನೋವಿನ ವಿಚಾರವೊಂದನ್ನು ಬಹಿರಂಗಪಡಿಸಿದ್ದರು. ಅಷ್ಟಕ್ಕೂ ಡಾಕ್ಟರ್‌ ಬ್ರೋ ಬದುಕಲ್ಲಿ ಆವರಿಸಿಕೊಂಡಿರುವ ಶೋಕಕ್ಕೆ ಕಾರಣ ಅವರ ಜೊತೆಯಲ್ಲಿದ್ದ ಡ್ರೋನ್.‌

Kannada YouTuber Dr Bro Gagan Srinivas Says I Killed My Laziness In 2024

ಇತ್ತೀಚೆಗೆ ನೇಪಾಳಕ್ಕೆ ತೆರಳಿರುವ ಗಗನ್‌, ತನ್ನ ಗೆಳೆಯನ ಅಗಲಿಕೆ ವಿಚಾರವನ್ನು ಹೇಳಿಕೊಂಡಿದ್ದರು. ತನ್ನ ಬಹುಕಾಲದ ಗೆಳೆಯನ ಅಗಲಿಕೆ ವಿಚಾರದಿಂದ ಅವರು ಮನನೊಂದಿದ್ದರು. ಈ ರೀತಿ ಡಾಕ್ಟರ್‌ ಬ್ರೋ ವಿಡಿಯೋ ಹಂಚಿಕೊಂಡಿದ್ದರು. ಅಸಲಿಗೆ ಡಾಕ್ಟರ್‌ ಬ್ರೋ ಕಳೆದುಕೊಂಡಿದ್ದು ತನ್ನ ಬಹುಕಾಲದ ಗೆಳೆಯ ಎಂದು ಕರೆದಿರುವುದು ತನ್ನ ಡ್ರೋನ್‌. ನೇಪಾಳದಲ್ಲಿ ಶೂಟಿಂಗ್ ಮಾಡುವ ವೇಳೆ ಡ್ರೋನ್‌ ಬಿದ್ದು, ಒಡೆದು ಹೋಗಿತ್ತು.

ಡ್ರೋನ್‌ ಬಿದ್ದು ಸಂಪೂರ್ಣ ಡ್ಯಾಮೇಜ್‌ ಆಗಿತ್ತು. ನನ್ನ ಜೊತೆ ಸುಮಾರು ಒಂದು ವರ್ಷಗಳಿಂದ ಜೊತೆಗಿದ್ದ ನನ್ನ ಗೆಳೆಯ ದೂರವಾಗಿದ್ದಾನೆ ಎಂದು ಬ್ರೋ ಹೇಳಿಕೊಂಡಿದ್ದರು. ಹೋದ ಹೋದ ಹೊರಟು ಹೋದ ಎಂದು ಡಾಕ್ಟರ್‌ ಬ್ರೋ ಕಾಮಿಡಿಯಾಗಿ ವಿಡಿಯೋದಲ್ಲಿ ಹೇಳಿದ್ದರು.

Kannada YouTuber Dr Bro Gagan Srinivas Says I Killed My Laziness In 2024

ಹಳೆ ಸ್ನೇಹಿತನ ಕಾಲು ಮುರಿದಿತ್ತು, ದೇಹ ಒಡೆದಿತ್ತು, ಸಪ್ಪೆಮೊರೆ ಹಾಕಿ ಸ್ಮಶಾನದಿಂದ ಹೊರಟು ಹೋದೆ. ರವಿ ಮನೆಗೆ ಹೋಗುವ ಸಮಯಕ್ಕೆ ಒಂದು ವರ್ಷದ ಸ್ನೇಹಿತನ ಜೊತೆ ರವಿ ಕೂಡ ಹೊರಟು ಹೋದ' ಎಂದು ಡಾಕ್ಟರ್‌ ಬ್ರೋ ಹಾಸ್ಯವಾಗಿ ಡ್ರೋನ್‌ಗೆ ವಿದಾಯ ಹೇಳಿದ್ದರು. ವಿಡಿಯೋದಲ್ಲಿ ಕೊನೆಗೆ ಡ್ರೋನ್‌ಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಕೂಡ ಸಲ್ಲಿಸಿ ವಿಶೇಷವಾಗಿ ಎಡಿಟ್‌ ಮಾಡಿದ್ದರು. ಸದ್ಯ ಅವರು ನೇಪಾಳವನ್ನು ಎಕ್ಸ್‌ಪ್ಲೋರ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+