ಚಂದನ್ ಶೆಟ್ಟಿ ವಿಚ್ಚೇದನದ ಬಳಿಕ ಮನಸ್ಸಿನಲ್ಲಿ ಇರುವ ಹುಡುಗಿ ಇವಳು..
ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವೆ ಕ್ಷುಲ್ಲಕ ಕಾರಣಗಳಿಗೆ ವಿಚ್ಚೇದನ ಪಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಅಡುಗೆ ಚೆನ್ನಾಗಿ ಮಾಡಲು ಬರಲ್ಲ, ಖರ್ಚು ಜಾಸ್ತಿ, ಜಗಳ ಮಾಡುವುದೇ ಹೆಚ್ಚು ಎಂದು ಗಂಡ ಹೆಂಡತಿ ಮೇಲೆ ಆರೋಪ ಮಾಡುವುದು, ಮತ್ತೊಂದೆಡೆ ಪತ್ನಿ ನನಗೆ ಸಮಯ ಕೊಡುವುದಿಲ್ಲ, ಹೊರಗಡೆ ಕರೆದುಕೊಂಡು ಹೋಗುವುದಿಲ್ಲ, ಹಣ ಕೊಡುವುದಿಲ್ಲ ಎಂದು ಗಂಡನ ಮೇಲೆ ಆರೋಪ ಮಾಡುವುದು ಕಂಡುಬರುತ್ತದೆ. ಆದರೆ ವಿಚ್ಚೇದನ ಪಡೆದರೂ ಮತ್ತೊಬ್ಬರಿಗೆ ಮಾದರಿಯಾಗುವಂತೆ ಇದ್ದದ್ದು ಗಾಯಕ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ. ಹೀಗಿದ್ದ ಜೋಡಿ ಎರಡನೇ ಮದುವೆ ಆಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ.
ಹೌದು ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರನ್ನು ಮೊದಲ ಬಾರಿಗೆ ನೋಡಿದ್ದು ಬಿಗ್‌ಬಾಸ್ ಮನೆಯಲ್ಲಿ. ಬಿಗ್‌ಬಾಸ್ ಮನೆಯಲ್ಲಿ ಚಂದದ ಗೊಂಬೆ ನಿವೇದಿತಾಗೆ ಚಂದನ್ ಮನಸೋತಿದ್ದರು. ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಚಂದನ್ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು. ಪೋಷಕರ ಒಪ್ಪಿಗೆ ಮೇರೆಗೆ ಈ ಜೋರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಆದರೆ ಅದ್ಯಾಕೋ ಈ ಜೋಡಿ ತುಂಬಾ ಬೇಗ ವಿಚ್ಚೇದನ ಪಡೆದುಕೊಂಡಿದೆ. ಇದೀಗ 'ಸೀತಾ ವಲ್ಲಭ' ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು ಭಾರೀ ವೈರಲ್ ಆಗಿದೆ.

ಕಾಕತಾಳೀಯ ಅಂದರೆ 'ಸೀತಾ ವಲ್ಲಭ' ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಮದುವೆಯಾಗಲು ಹೊರಟ ಹುಡುಗನ ಹೆಸರು ಚಂದನ್ ಶೆಟ್ಟಿ. ಹೀಗಾಗಿ ಜನ ಈ ಹೆಸರನ್ನು ಕನ್ಪೂಸ್ ಮಾಡಿಕೊಂಡಿದ್ದಾರೆ. ಆದರೆ ನಟಿ ಸುಪ್ರೀತಾ ಆ ಹುಡುಗನ ಜೊತೆಗೆ ತಾವಿರುವ ಫೋಟೋವನ್ನು ಶೇರ್ ಮಾಡಿದ್ದು, ಈ ಫೋಟೋದಲ್ಲಿ ಇರುವ ವ್ಯಕ್ತಿ ಬೇರೆಯೇ ಆಗಿದ್ದಾರೆ. ನಟಿ ಸುಪ್ರೀತಾ ಅವರನ್ನು ಮದುವೆಯಾಗುವ ಹುಡುಗನ ಹೆಸರು ಮಾತ್ರ ಚಂದನ್ ಶೆಟ್ಟಿ ಆದರೆ ಅವರು ಗಾಯಕ ಚಂದನ್ ಶೆಟ್ಟಿ ಅಲ್ಲ ಅನ್ನೋದು ಫೋಟೋದಿಂದ ಸ್ಪಷ್ಟವಾಗಿದೆ.
ಅಲ್ಲದೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚಂದನ್ ಶೆಟ್ಟಿ ನನಗೇ ಗೊತ್ತಿಲ್ಲ ನನ್ನ ಮದುವೆ ಅನ್ನೋದು. ಆದರೆ ಬೇರೆಯವರು ಬಂದು ನನ್ನ ಮದುವೆ ಬಗ್ಗೆ ಕೇಳುತ್ತಿದ್ದಾರೆ ಎಂದು ವೇದಿಕೆಯೊಂದರ ಮೇಲೆ ಹೇಳಿ ನಕ್ಕಿದ್ದರು. ಇದೀಗ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಹಂಚಿಕೊಂಡ ಪೋಸ್ಟ್‌ನಿಂದಾಗಿ ಅವರನ್ನು ಒರಿಸುವ ಹುಡುಗ ಬೇರೆ ಎನ್ನುವುದು ಸ್ಪಷ್ಟವಾಗಿದೆ.
ಅಲ್ಲದೇ ಇತ್ತೀಚೆಗೆ ಚಂದನ್ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ಮಾತನಾಡುವಾಗ ತಾವು ನಿವೇದಿತಾ ಅವರೊಂದಿಗೆ ಸ್ಪಷ್ಟವಾಗಿ ಮಾತನಾಡಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ದ್ವೇಷ ಮಾಡದೆ, ಆರೋಪ ಮಾಡದೆ ವಿಚ್ಚೇದನ ಪಡೆದುಕೊಂಡಿದ್ದೇವೆ. ಅವರು ಅವರ ವೃತ್ತಿಯಲ್ಲಿ ಬ್ಯೂಸಿಯಾಗಿದ್ದಾರೆ. ನಾನು ನನ್ನ ವೃತ್ತಿಯಲ್ಲಿ ಬ್ಯೂಸಿ ಆಗಿದ್ದೇನೆ. ವಿಚ್ಚೇದನ ಪಡೆಯಲು ಆರೋಪಗಳೇ ಇರಬೇಕು ಅಂತಿಲ್ಲ. ಸೂಕ್ತ ಕಾರಣ ಇದ್ದರೆ ಸಾಕು.

ನಮ್ಮಿಬ್ಬರಿಗೆ ನಮ್ಮ ವೃತ್ತಿ ಮೇಲೆ ಆಸಕ್ತಿ ಹೆಚ್ಚಾಗಿತ್ತು. ವಿಶೇಷವಾಗಿ ನಿವೇದಿತಾಗೆ. ಹೀಗಾಗಿ ನಾವಿಬ್ಬರು ಕುಳಿತು ಮಾತನಾಡಿ ನಮ್ಮ ನಮ್ಮ ವೃತ್ತಿಗೆ ನಾವು ಸಮಯ ನೀಡುವುದು ಮುಖ್ಯವಾಗಿದ್ದರಿಂದ ವಿಚ್ಚೇದನ ತುಂಬಾ ಗೌರವಯುತವಾಗಿ ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಹೀಗಾಗಿ ವಿಚ್ಚೇದನ ಪಡೆದ ಬಳಿಕ ಕೋಪ ಮಾಡಿಕೊಳ್ಳುವುದು, ಬೈದಾಡುವುದು ಅದನ್ನೆಲ್ಲಾ ಮಾಡಿಲ್ಲ. ಇಬ್ಬರು ಸಹಜವಾಗಿ ಕೈಕೈ ಹಿಡಿದುಕೊಂಡು ಹೊರಬಂದ್ವಿ ಅಂದಿದ್ದರು. ಅಲ್ಲದೆ ನಿವೇದಿತಾ ಎಲ್ಲೇ ಇರಲಿ ಖುಷಿ ಆಗಿರ ಇರಲಿ ಎನ್ನುವಾಗ ನಿವೇದಿತಾ ಅವರ ಮನಸ್ಸಿನಲ್ಲಿ ಇನ್ನೂ ಇದ್ದಾರೆ ಅನ್ನೋದು ಎದ್ದು ಕಾಣುತ್ತಿತ್ತು.
ಒಟ್ಟಿನಲ್ಲಿ ಯಾವುದೋ ಒಂದು ಕಾರಣಕ್ಕೆ ಈ ಜೋಡಿ ದೂರವಾಗಿದೆ. ಮತ್ತೆ ಒಂದಾಗುತ್ತಾ ದೂರವಾಗಿಯೇ ಇರ್ತಾರಾ ಅಥವಾ ಬೇರೆ ಮದುವೆ ಬಗ್ಗೆ ಯೋಚನೆ ಮಾಡ್ತಾರಾ ಕಾದು ನೋಡಬೇಕಿದೆ.












Click it and Unblock the Notifications