Darshan Thoogudeepa: ‘ದರ್ಶನ್ ತೂಗುದೀಪ್‌ಗೆ ದುರಹಂಕಾರ, ಧಿಮಾಕು..’ ಕನ್ನಡದ ಸ್ಟಾರ್ ನಟನ ಸ್ಫೋಟಕ ಹೇಳಿಕೆ!
ದರ್ಶನ್ ತೂಗುದೀಪ್ ಅವರಿಗೆ ದುರಹಂಕಾರ ಇತ್ತಾ? ಧಿಮಾಕು ಹೆಚ್ಚಾಗಿ, ಕಾಮನ್ ಸೆನ್ಸ್ ಕೂಡ ದರ್ಶನ್ ತೂಗುದೀಪ್ ಅವರಿಗೆ ಇರಲಿಲ್ಲವಾ? ಅಂದಹಾಗೆ ಈ ಮಾತನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ಕನ್ನಡದ ಸ್ಟಾರ್ ನಟ ಈ ರೀತಿಯಾಗಿ ದರ್ಶನ್ ತೂಗುದೀಪ್ ಅವರ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಹಾಗಾದ್ರೆ ದರ್ಶನ್ ತೂಗುದೀಪ್ ಬಗ್ಗೆ ಹೀಗೆಲ್ಲಾ ಮಾತು ಆಡಿದ್ದು ಯಾರು? ದರ್ಶನ್ ತೂಗುದೀಪ್ ಅವರಿಗೆ ದುರಹಂಕಾರ ಅಂತಾ ಹೇಳಿದ್ದಕ್ಕೆ ಇದೀಗ ಅಭಿಮಾನಿಗಳು ಏನು ಹೇಳುತ್ತಿದ್ದಾರೆ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ದರ್ಶನ್ ತೂಗುದೀಪ್ ಈಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಸೇರಿರುವುದು ಇಡೀ ಜಗತ್ತಿಗೆ ಗೊತ್ತಿರುವ ಸುದ್ದಿ. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ನಿಂತು ಜೈಲಿನಿಂದ ದರ್ಶನ್ ತೂಗುದೀಪ್ ಅವರನ್ನ ರಿಲೀಸ್ ಮಾಡಿಸಿಕೊಂಡು ಬರೋದಕ್ಕೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿದ್ದರೂ, ದರ್ಶನ್ ತೂಗುದೀಪ್ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಗ್ಗೆ ಆಕ್ರೋಶದಿಂದ ಇಲ್ಲೊಬ್ಬ ಹಿರಿಯ ನಟ ಪ್ರತಿಕ್ರಿಯೆ ನೀಡಿದ್ದಾರೆ. ಅರೆ ಹಾಗಾದ್ರೆ ಈ ರೀತಿ ಮಾತನಾಡಿದ್ದು ಯಾರು? ದರ್ಶನ್ ತೂಗುದೀಪ್ ಅವರಿಗೆ ದುರಹಂಕಾರ ಅನ್ನೋ ಪದ ಬಳಕೆ ಮಾಡಿದ್ದು ಯಾರು? ಮುಂದೆ ಓದಿ.

ದರ್ಶನ್ ತೂಗುದೀಪ್ ಅವರಿಗೆ ದುರಹಂಕಾರ?
ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ತೂಗುದೀಪ್ ಅವರಿಗೆ ಇದ್ದಷ್ಟು ಅಭಿಮಾನಿಗಳು ಹಿಂದೆ ಯಾವುದೇ ನಟನಿಗೂ ಇರಲಿಲ್ಲ, ಮುಂದೆ ಯಾವುದೇ ನಟನಿಗೂ ಸಿಗುವುದಿಲ್ಲ ಅಂತಿದ್ದಾರೆ ಡಿ-ಬಾಸ್ ದರ್ಶನ್ ಅವರ ಫ್ಯಾನ್ಸ್. ಹೀಗಿದ್ದಾಗಲೇ ನಟ ದರ್ಶನ್ ಅವರ ಬಗ್ಗೆ ಹಿರಿಯ ನಟ ಮತ್ತು ಪ್ರತಿಷ್ಠಿತ ರಾಜಕೀಯ ಪಕ್ಷದ ನಾಯಕ ಮುಖ್ಯಮಂತ್ರಿ ಚಂದ್ರು ಅವರು ಆಕ್ರೋಶವನ್ನ ಹೊರ ಹಾಕಿದ್ದಾರೆ. ಖಾಸಗಿ ಸಂದರ್ಶನದಲ್ಲಿ 'ದರ್ಶನ್ ತೂಗುದೀಪ್‌ಗೆ ದುರಹಂಕಾರ' ಎಂಬ ಪದ ಬಳಕೆ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ದರ್ಶನ್ ಅವರ ಫ್ಯಾನ್ಸ್ ವಿಡಿಯೋ ಶೇರ್ ಮಾಡಿ ಏನು ಹೇಳುತ್ತಿದ್ದಾರೆ ಗೊತ್ತಾ?
ರೊಚ್ಚಿಗೆದ್ದ ದರ್ಶನ್ ಅವರ ಅಭಿಮಾನಿಗಳು!
ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿದ ಕನ್ನಡ ಸಿನಿಮಾ ರಂಗದ ಹಿರಿಯ ನಟ, ಪ್ರತಿಷ್ಠಿತ ರಾಜಕೀಯ ಪಕ್ಷದ ನಾಯಕ ಮುಖ್ಯಮಂತ್ರಿ ಚಂದ್ರು ಅವ್ರು, 'ದರ್ಶನ್‌ಗೆ ಕಾಮನ್ ಸೆನ್ಸ್ ಇದ್ದಿದ್ರೆ ಹೀಗೆಲ್ಲಾ ಆಗ್ತಾ ಇರಲಿಲ್ಲ. ದುಡ್ಡು ಇದೆ ಅವನ ಹತ್ತಿರ, ಬೌದ್ಧಿಕ ಪ್ರಜ್ಞೆಯೂ ಇಲ್ಲ & ಕಾಮನ್ ಸೆನ್ಸ್ ಕೂಡ ಇಲ್ಲ. ದರ್ಶನ್ ಈ ರೀತಿಯ ಕೃತ್ಯವನ್ನು ಎಸಗಿದ್ದಾರೆ ಅಂದ್ರೆ ಅವರಿಗೆ ಧಿಮಾಕು & ದುರಹಂಕಾರ' ಅಂತಾ ಹೇಳಿದ್ದಾರೆ ಮುಖ್ಯಮಂತ್ರಿ ಚಂದ್ರು ಅವರು ಎಂಬ ಆರೋಪ ಇದೀಗ, ಎಲ್ಲೆಲ್ಲೂ ಹರಿದಾಡುತ್ತಿದೆ. ಅಲ್ಲದೆ ವಿಡಿಯೋಗು ವೆರೈಟಿ ವೆರೈಟಿ ಕಮೆಂಟ್ಸ್ ಇದೀಗ ಬರುತ್ತಿವೆ. ಹಾಗೇ ಮತ್ತೊಂದ್ಕಡೆ ಈ ವಿಡಿಯೋ ಬಗ್ಗೆ ಅಭಿಮಾನಿಗಳು ಆಕ್ರೋಶ ಕೂಡ ಹೊರ ಹಾಕುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.












Click it and Unblock the Notifications