‘ಡಿ-ಬಾಸ್’ ದರ್ಶನ್ ಅವರ ಆಪ್ತ ಗೆಳೆಯ & ಕನ್ನಡದ ನಿರ್ಮಾಪಕ ಆತ್ಮಹತ್ಯೆಗೆ ಶರಣು?

ನಟ 'ಡಿ-ಬಾಸ್' ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ, ಕನ್ನಡದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಇಂದು ಮೃತಪಟ್ಟಿದ್ದಾರೆ. ಸೌಂದರ್ಯ ಜಗದೀಶ್ ಅವರ ಸಾವು ಹಲವು ಚರ್ಚೆಗಳನ್ನು ಹುಟ್ಟುಹಾಕಿರುವ ನಡುವೆ, ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಸಾವು ಆತ್ಮಹತ್ಯೆ ಎನ್ನಲಾಗುತ್ತಿದೆ. ಹಾಗಾದ್ರೆ ಅವರ ಸಾವಿಗೆ ಕಾರಣ ಏನು? ಅದರ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಅಂದಹಾಗೆ ಕನ್ನಡದಲ್ಲಿ ಅಪ್ಪು-ಪಪ್ಪು, ರಾಮಲೀಲಾ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿದ್ದರು ಸೌಂದರ್ಯ ಜಗದೀಶ್ ಅವರು. ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕರೂ ಆಗಿದ್ದ ಸೌಂದರ್ಯ ಜಗದೀಶ್, ಇತ್ತೀಚೆಗೆ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ವಿಚಾರದಲ್ಲಿ ದೊಡ್ಡ ಸದ್ದು ಮಾಡಿದ್ದರು. ಹಾಗೇ ಇಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮನೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಹಾಗಾದರೆ, ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಕಾರಣ ಏನು? ಮುಂದೆ ಓದಿ.

Kannada Producer Soundarya Jagadish Death Case Explained

ಬ್ಯಾಂಕ್ ಸಾಲವೇ ಮುಳುವಾಯ್ತ?

ಅಂದಹಾಗೆ ಇದೀಗ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಬ್ಯಾಂಕ್ ಸಾಲವೇ, ಸಾವಿಗೆ ಪ್ರಮುಖ ಕಾರಣ ಎಂಬ ಆರೋಪ ಕೇಳಿಬಂದಿದೆ. ಸಾಲ ಮರುಪಾವತಿ ಮಾಡದೇ, ಬ್ಯಾಂಕ್ ಸಿಬ್ಬಂದಿ ಕ್ರಮ ತೆಗೆದುಕೊಂಡಿದ್ದರು ಎನ್ನಲಾಗಿದೆ. ಬ್ಯಾಂಕ್ ಸಿಬ್ಬಂದಿ ಅವರು ಮನೆಯ ಸೀಜ್ ಮಾಡಿದ್ದರು. ಹೀಗೆ ಮನೆ ಸೀಜ್ ಆಗಿದ್ದ ಹಿನ್ನೆಲೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಖಿನ್ನತೆಗೆ ಒಳಗಾಗಿದ್ದರು. ಈ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮತ್ತೊಂದು ಕಡೆ ಸೌಂದರ್ಯ ಜಗದೀಶ್ ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರಲಿಲ್ಲ ಎನ್ನಲಾಗಿದೆ.

ಒತ್ತಡಕ್ಕೆ ಸಿಲುಕಿದ್ದ ಕನ್ನಡದ ನಿರ್ಮಾಪಕ?

ಬ್ಯಾಂಕ್ ಸಾಲವೂ ಸೇರಿದಂತೆ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಪರದಾಡಿದ್ದರು ಎನ್ನಲಾಗಿದೆ. ಅದರಲ್ಲೂ ಮನೆಯೇ ಸೀಜ್ ಆದ ಬಳಿಕ ಈ ಒತ್ತಡ ಇನ್ನೂ ಹೆಚ್ಚಾಗಿತ್ತು. ಹೀಗೆ ಆರ್ಥಿಕವಾಗಿ ಸಂಕಷ್ಟಗಳು ಎದುರಾಗಿದ್ದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದ ಅವರು ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿಯೇ ಈ ಸುದ್ದಿ ಸಿನಿಮಾ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+