ಧರ್ಮಸ್ಥಳ ಫೈಲ್ಸ್... 1,00,00,00,000 ರೂಪಾಯಿ ಹಣ ಸುರಿದು ಸಿನಿಮಾ ಮಾಡಲು ಸಿದ್ಧತೆ ಅಂತಾ... Kannada Movie

ಕನ್ನಡ ನಾಡು & 7 ಕೋಟಿ ಕನ್ನಡಿಗರು ಮಾತ್ರವಲ್ಲ, ಇಡೀ ಪ್ರಪಂಚ ಧರ್ಮಸ್ಥಳ ಬಗ್ಗೆ ಇದೀಗ ಚರ್ಚೆ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರ ಈ ಕುರಿತು ವಿಶೇಷ ತನಿಖಾ ತಂಡ ಅಂದ್ರೆ ಎಸ್‌ಐಟಿ ಕೂಡ ರಚನೆ ಮಾಡಿದ್ದು, ಹೆಣಗಳನ್ನ ಹೂತು ಹಾಕಿದೆ ಎಂದು ಭಾರಿ ಗಂಭೀರ ಆರೋಪ ಮಾಡಿರುವ ಜಾಗಗಳಲ್ಲಿ ಇದೀಗ ಮಣ್ಣು ಬಗೆದು & ಅಗೆದು ತನಿಖೆ ನಡೆಸಲಾಗುತ್ತಿದೆ. ಹೀಗಿದ್ದಾಗಲೇ, ದಿಢೀರ್ ಕನ್ನಡ ಸಿನಿಮಾ ರಂಗದ ಒಳಗೆ ಸ್ಫೋಟಕ ಘಟನೆ ನಡೆದಿದ್ದು, ಧರ್ಮಸ್ಥಳ ಫೈಲ್ಸ್... 1,00,00,00,000 ರೂಪಾಯಿ ಹಣ ಸುರಿದು ಸಿನಿಮಾ ಮಾಡಲು ಸಿದ್ಧತೆ ಅಂತಾ...

ಧರ್ಮಸ್ಥಳ ಎಂಬ ಪುಣ್ಯಕ್ಷೇತ್ರದಲ್ಲಿ ನಡೆದಿದೆ ಎಂದು ಆರೋಪ ಮಾಡಿರುವ ಘೋರ ಘಟನೆ ಬಗ್ಗೆ ಕೂಡ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ತನಿಖೆ ನೋಡಿ ಕೋಟ್ಯಂತರ ಜನರಿಗೆ ಆಘಾತವೇ ಆಗಿದೆ. ಇನ್ನು ಹೀಗೆಲ್ಲಾ ತನಿಖೆ ನಡೆಯುತ್ತಿರುವ ವೇಳೆ ಈಗ ದಿಢೀರ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಘಟನೆ ಒಂದು ನಡೆದಿದ್ದು, ಇದೇ ಧರ್ಮಸ್ಥಳ ಕ್ಷೇತ್ರದ ಬಗ್ಗೆ & ಅಲ್ಲಿ ನಡೆದಿದೆ ಎಂದು ಆರೋಪ ಮಾಡಲಾಗುತ್ತಿರುವ ಘಟನೆಗಳ ಬಗ್ಗೆ ಕನ್ನಡದಲ್ಲಿ ಸಿನಿಮಾ ಮಾಡೋಕೆ ಒಂದು ತಂಡ ದಿಢೀರ್ ಮುಂದೆ ಬಂದಿದೆ!

Kannada New Movie Is Attracting The Complete World And Social Media For This Reason

ಕನ್ನಡ ಭಾಷೆಯಲ್ಲಿ ಧರ್ಮಸ್ಥಳ ಬಗ್ಗೆ ಸಿನಿಮಾ?

ಹೌದು, ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಸುತ್ತ ಇದೀಗ ಹೊಸ ಸಿನಿಮಾ ಮಾಡಿ ಕನ್ನಡ ಬೆಳ್ಳಿ ತೆರೆಗೆ ತರಲು ಒಂದು ತಂಡ ಮುಂದೆ ಬಂದಿದೆ. ಈ ಸಿನಿಮಾಗೆ ಧರ್ಮಸ್ಥಳ ಫೈಲ್ಸ್ ಎಂಬ ಹೆಸರು ಇಡಲಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಈ ಸಿನಿಮಾ ಇದೀಗ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ ಧರ್ಮಸ್ಥಳ ಫೈಲ್ಸ್ ಜೊತೆಯಲ್ಲೇ ವೆಬ್ ಸೀರಿಸ್ ಮಾಡೋದಕ್ಕೆ ಕೂಡ ಸಿದ್ಧತೆ ಸಾಗಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಇಷ್ಟೆಲ್ಲದರ ನಡುವೆ ಸಿನಿಮಾ ಮಾಡಲು ಇದೀಗ ಅನುಮತಿ & ಅಗತ್ಯ ಕಾನೂನು ಪಾಲನೆ ಮಾಡಲು ಸಿನಿಮಾ ತಂಡವೊಂದು ಮುಂದಾಗಿದೆ.

ಧರ್ಮಸ್ಥಳ ಫೈಲ್ಸ್ ಸಿನಿಮಾ ಮಾಡಲು ಈಗ ಫಿಲಂ ಚೇಂಬರ್ ಟೈಟಲ್ ಕಮಿಟಿಯಿಂದ ಪರ್ಮಿಷನ್ ಕೂಡ ಪಡೆದು ಒಂದು ಹೆಜ್ಜೆ ಮುಂದಿಡಲಾಗಿದೆ. ಆದರೆ ಕಾನೂನು ತೊಡಕು ಉಂಟಾದ್ರೆ ಅದರ ಪ್ರಕ್ರಿಯೆ ಪಾಲಿಸಿ ಸಿನಿಮಾ ಮಾಡುವ ಸಾಧ್ಯತೆ ಇದ್ದು, ಈಗಾಗಲೇ ಎಕ್ಸ್‌ಪೀರಿಯನ್ಸ್ ಇರುವ ಡೈರೆಕ್ಟರ್ ಮೂಲಕವೇ ಹೊಸ ಸಿನಿಮಾಗೆ ಕಥೆ ಕೂಡ ರೆಡಿ ಮಾಡಲಾಗುತ್ತಿದೆ. ಹೀಗೆ ಮಲಯಾಳಂ ನಿರ್ದೇಶಕರಿಂದ ಈ ಸಿನಿಮಾ ಮಾಡುವ ಪ್ಲಾನ್ ನಡೀತಿದ್ದು, ಹಲವು ದೊಡ್ಡ ದೊಡ್ಡ ಕಲಾವಿದರು ಇದೇ ಸಿನಿಮಾ ತಂಡಕ್ಕೆ ಕೈಜೋಡಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ ಇದೀಗ ಕನ್ನಡ ಸಿನಿಮಾ ರಂಗ ಮತ್ತೊಮ್ಮೆ ದೊಡ್ಡ ಮಟ್ಟಿಗೆ ಗಮನ ಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+