ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮತ್ತೆ ಶುರು... Kannada Kotyadhipathi
ಬಡವರ ಮನೆ ಮಕ್ಕಳು, ಮಧ್ಯಮ ವರ್ಗದ ಮನೆಯ ಮಕ್ಕಳು ಕೂಡ ಕೋಟಿ ಕೋಟಿ ರೂಪಾಯಿ ನ್ಯಾಯವಾಗಿ ದುಡಿದು ಶ್ರೀಮಂತರಾಗಬಹುದು ಅನ್ನೋದನ್ನ ಕನ್ನಡಿಗರಿಗೆ ತೋರಿಸಿದ್ದೇ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ. ಕರ್ನಾಟಕ ರತ್ನ ಅಪ್ಪು ಪುನೀತ್ ರಾಜ್‌ಕುಮಾರ್ ಅವರು ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ & ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಾ ಸಂಕಷ್ಟದಲ್ಲಿ ಇದ್ದ ಬಡವರಿಗೆ ಸಹಾಯ ಮಾಡಿ ನೆರವಾಗಿದ್ದರು.
ಪುನೀತ್ ರಾಜ್‌ಕುಮಾರ್ ಅವರು ತೀರಿಹೋದ ನಂತರ ಕನ್ನಡಿಗರಲ್ಲಿ ಅನಾಥ ಭಾವ ಕಾಡುತ್ತಿದೆ, ಇಂತಹ ಒಬ್ಬ ಮನುಷ್ಯ ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋದರಲ್ಲ ಅನ್ನೋ ನೋವು ಕೋಟಿ ಕೋಟಿ ಕನ್ನಡಿಗರ ಮನಸ್ಸನ್ನು ಕಾಡುತ್ತಲೇ ಇದೆ. ಇಷ್ಟೆಲ್ಲದರ ನಡುವೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಬಗ್ಗೆ ಕೂಡ ಭಯ ಶುರುವಾಗಿತ್ತು. ಆದರೆ ಈಗ ದಿಢೀರ್, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮತ್ತೆ ಶುರು...

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮತ್ತೆ....
'ಕನ್ನಡದ ಕೋಟ್ಯಾಧಿಪತಿ' ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, ಕನ್ನಡ ಟಿವಿ ಲೋಕದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಮೀರಿಸುವ ಮತ್ತೊಂದು ಪ್ರೋಗ್ರಾಂ ಬಂದಿಲ್ಲ ಎನ್ನಬಹುದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು. ಇಂತಹ ಸಮಯದಲ್ಲೇ ಪುನೀತ್ ರಾಜ್‌ಕುಮಾರ್ ಅವರು ನಿಧನರಾದರು. ಹೀಗಾಗಿ 'ಕನ್ನಡದ ಕೋಟ್ಯಾಧಿಪತಿ' ನಿಂತು ಹೋಗಿದ್ದು, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮತ್ತೆ ಶುರು...
ಮೊದಲೇ ಹೇಳಿದಂತೆ 'ಕನ್ನಡದ ಕೋಟ್ಯಾಧಿಪತಿ' ಕನ್ನಡಿಗರ ಪ್ರತಿಯೊಂದು ಮನೆಗಳಲ್ಲೂ ಮನಸ್ಸು ಗೆಲ್ಲುವ ಜೊತೆಗೆ ಬಡವರಿಗೆ ವರ ಎನ್ನುವಂತೆ ರೂಪುಗೊಂಡಿತ್ತು. ಅದ್ರಲ್ಲೂ ಪುನೀತ್ ರಾಜ್‌ಕುಮಾರ್ ಅವರ ನಿರೂಪಣೆಯ ಕಾರ್ಯಕ್ರಮ ನೋಡಲು ಕೋಟಿ, ಕೋಟಿ ಕನ್ನಡಿಗರು ಕಾದು ಕೂತಿರುತ್ತಿದ್ದರು. ಆದರೆ, ಅಪ್ಪು ಪುನೀತ್ ರಾಜ್‌ಕುಮಾರ್ ಅವರು ಅಗಲಿದ ನಂತರ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರ ಹೆಸರು ಕೇಳಿ ಬರುತ್ತಿದ್ದು, ಕೆಲವೇ ದಿನಗಳಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮತ್ತೆ ಶುರುವಾಗಲಿದೆ ಎನ್ನಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಡಿಮ್ಯಾಂಡ್!
ಹಾಗೇ ಮತ್ತೊಂದು ಕಡೆ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮತ್ತೆ ಶುರು ಮಾಡಿ ಅಂತಾ ಇದೀಗ ಕನ್ನಡಿಗರು ಭಾರಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಬಡವರ ಮನೆಯ ಮಕ್ಕಳಿಗೆ ಅದರಲ್ಲೂ ವಿದ್ಯಾವಂತ ಯುವಕರಿಗೆ ಈ ಕಾರ್ಯಕ್ರಮದಿಂದ ಭಾರಿ ಉಪಯೋಗ ಆಗಲಿದೆ. ಹೀಗಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಆದಷ್ಟು ಬೇಗ ಶುರುವಾಗಬೇಕು ಎನ್ನುವ ಡಿಮ್ಯಾಂಡ್ ಇಡಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮತ್ತೆ ಶುರುವಾಗುವ ಬಗ್ಗೆ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಇದೆ.












Click it and Unblock the Notifications