ಕನ್ನಡ ಚಿತ್ರೋದ್ಯಮದ ಅಪರೂಪದ 'ಡಿವೈನ್ ಬ್ಲಾಕ್ ಬಾಸ್ಟರ್' ಕಾಂತಾರಗೆ ಒಂದು ವರ್ಷ

ಬೆಂಗಳೂರು, ಸೆಪ್ಟೆಂಬರ್‌ 30: ಕನ್ನಡ ಚಿತ್ರೋದ್ಯಮದ 'ಡಿವೈನ್ ಬ್ಲಾಕ್ ಬಾಸ್ಟರ್' ಎಂದೇ ಖ್ಯಾತಿ ಪಡೆದಿರುವ ಕಾಂತಾರ ಚಿತ್ರವು ಒಂದು ವರ್ಷ ಪೂರೈಸಿದೆ.

ಹೊಂಬಾಳೆ ಫಿಲಂಸ್‌ ನಿರ್ಮಾಣದ, ರಿಷಬ್‌ ಶೆಟ್ಟಿ ನಟನೆಯ ಬ್ಲಾಕ್‌ ಬಾಸ್ಟರ್ ಚಿತ್ರವು ಭಾರತದಾದ್ಯಂತ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದೆ.

Kannada Cinemas Divine Blockbuster Kantara Celebrates One-Year Anniversary on 30th September

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿದ್ದು, ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿದೆ.

ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ವರ್ಷವನ್ನು ಪೂರೈಸುತ್ತಿದೆ. ಈ ಚಿತ್ರವನ್ನು ಬ್ಲಾಕ್‌ ಬಾಸ್ಟರ್ ಆಗಿ ಮಾಡಿದ ಸಿನಿ ರಸಿಕರಿಗೆ ಹೊಂಬಾಳೆ ಫಿಲ್ಮ್ಸ್‌ ಕೃತಜ್ಞತೆಯನ್ನು ಸಲ್ಲಿಸಿದೆ.

ಈ ಕುರಿತು 'X' ( ಟ್ವಿಟರ್‌ ) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಹೊಂಬಾಳೆ ಸಂಸ್ಥೆ, ರಿಷಬ್‌ ಶೆಟ್ಟಿ ಅವರನ್ನು ಒಳಗೊಂಡಿರುವ ಆಕರ್ಷಕ ಪೋಸ್ಟರ್ ಅನ್ನು ಹಂಚಿಕೊಂಡಿದೆ.

ಈ ಮೂಲಕ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿರುವ ಸಂಸ್ಥೆ, ' ಇಂದು ಡಿವೈನ್ ಬ್ಲಾಕ್‌ ಬಾಸ್ಟರ್‌ ಕಾಂತಾರ ಚಿತ್ರವು ಬಿಡುಗೆಯಾಗಿ ಒಂದು ವರ್ಷವಾಗಿದೆ. ಇದು ನಮ್ಮ ಸಂಭ್ರಮಾಚರಣೆ ಕಾರಣವಾಗಿದೆ' ಎಂದು ತಿಳಿಸಿದೆ.

'ಇದು ನಾವು ಯಾವಾಗಲೂ ಗೌರವಿಸುವ ಅತ್ಯಂತ ವಿಶೇಷವಾದ ಚಿತ್ರ. ಇದನ್ನು ಮಹಾಕಾವ್ಯವಾಗಿ ಪರಿವರ್ತಿಸಿದ ಪ್ರೇಕ್ಷಕರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು' ಎಂದು ಹೊಂಬಾಳೆ ತಿಳಿಸಿದೆ.

'ಧನ್ಯವಾದಗಳು, ನೀವು ( ಪ್ರೇಕ್ಷಕರು ) ಮರೆಯಲಾಗದ ವರ್ಷವೊಂದನ್ನು ನಮಗೆ ನೀಡಿದ್ದೀರಿ. ಈ ಚಿತ್ರಕ್ಕೆ ದೇಶದಾದ್ಯಂತ ಹರ್ಷೋದ್ಗಾರಗಳು ಕೇಳಿಬಂದಿವೆ. ಈ ಮಹಾಕಾವ್ಯದ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸಲು ನಾವು ಪುಳಕಿತರಾಗಿದ್ದೇವೆ' ಎಂದು ಹೇಳಿದೆ.

ಕಾಂತಾರ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ ಅವರು ನಾಯಕಿಯಾಗಿ ನಟಿಸಿದ್ದಾರೆ. ಖ್ಯಾತ ನಟರಾದ ಕಿಶೋರ್ ಮತ್ತು ಅಚ್ಯುತ್ ಕುಮಾರ್ ಸಹ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಕನ್ನಡ ಚಲನಚಿತ್ರವಾಗಿ ಹೊರಹೊಮ್ಮಿದೆ. ಇದು 2022 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಚಲನಚಿತ್ರವಾಗಿದೆ.

ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಕಾಂತಾರ ಚಿತ್ರದ ಪ್ರಿಕ್ವೆಲ್‌ ( ಎರಡನೇ ಅಧ್ಯಾಯ ) ಅನ್ನು ನಿರ್ಮಿಸಲು ರಿಷಬ್‌ ಶೆಟ್ಟಿ ಮುಂದಾಗಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ.

ಈ ಚಿತ್ರದ ಮೂಲಕ ರಿಷಬ್‌ ಶೆಟ್ಟಿ ಅವರು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಹೊರಹೊಮ್ಮಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+