Kannada Bigg Boss: ಬಿಗ್‌ಬಾಸ್‌ ಮೇಲೆ ಗಂಭೀರ ಆರೋಪ ಮಾಡಿದ ವಿನ್ನರ್‌ ಹನುಮಂತ

ಕನ್ನಡ ಬಿಗ್‌ಬಾಸ್‌ ಸೀಸನ್‌-11ರ ವಿನ್ನರ್‌ ಆಗಿ ಹಳ್ಳಿಹೈದ ಹನುಮಂತ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರಿಂದ ಹನುಮಂತ ಜೀವನ ಸರಿ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹನುಮಂತ ವೇದಿಕೆಯಲ್ಲೇ ಬಿಗ್‌ಬಾಸ್‌ ಕುರಿತು ಆರೋಪವೊಂದನ್ನು ಮಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ.

ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹನುಮಂತ ಮಾತನಾಡುವಾಗ ಈ ಶಾಕಿಂಗ್‌ ವಿಚಾರ ಹೇಳಿದ್ದಾರೆ. ಅಭಿಮಾನಿಯೊಬ್ಬ ಬಿಗ್‌ಬಾಸ್‌ನಿಂದ ಗೆದ್ದ ಹಣದಲ್ಲಿ ಏನೆಲ್ಲ ಮಾಡಿದ್ರಿ? ಎಂದು ಕೇಳಿದರು. ಇದಕ್ಕೆ ಅಚ್ಚರಿ ಉತ್ತರ ನೀಡಿರುವ ಹನುಮಂತು ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

Kannada Bigg Boss Winner Hanumantha Yet To Receive 50 Lakh Prize Money

ಬಿಗ್‌ಬಾಸ್‌ ವಿಜೇತರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಘೋಷಣೆಯಾಗಿತ್ತು. ಅದರಂತೆ ಹನುಮಂತ ಈ ಸೀಸನ್‌ನ ಕಿರೀಟ ಗೆದ್ದುಬೀಗಿದ್ದಾರೆ. ಹೀಗಾಗಿ ಹನುಮಂತನಿಗೆ ಬಿಗ್‌ಬಾಸ್‌ನಿಂದ 50 ಲಕ್ಷ ರೂಪಾಯಿ ಬರುತ್ತೆ. ಆದರೆ ಅಸಲಿ ವಿಚಾರ ಅಂದ್ರೆ ಹನುಮಂತನಿಗೆ ಇಲ್ಲಿವರೆಗೆ ಹಣ ಕೈಸೇರಲೇ ಇಲ್ವಂತೆ. ಈ ವಿಚಾರವನ್ನು ಕಾರ್ಯಕ್ರಮದ ವೇದಿಕೆಯಲ್ಲೇ ಹನುಮಂತ ಹೇಳಿದ್ದಾರೆ.

ಬಿಗ್‌ಬಾಸ್‌ನಿಂದ ಇನ್ನೂ 50 ಲಕ್ಷ ರೂಪಾಯಿ ಬಂದಿಲ್ಲ. ಆ ಹಣ ಬರಲು ಸ್ವಲ್ಪ ತಡವಾಗುತ್ತೆ. ಬಂದ ಮೇಲೆ ಹೇಳ್ತೀನಿ ಅಣ್ಣ, ಆಗ ಬೇಕಾದ್ರೆ ಮನೆ ಕಡೆ ಬನ್ನಿ ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಹೇಳಿದ್ದಾರೆ. ನನಗೆ ಅತಿ ಹೆಚ್ಚು ವೋಟ್‌ ಬಂದಿದೆ ಎಂದು ಗೊತ್ತೇ ಇರಲಿಲ್ಲ. ಸುದೀಪ್‌ ಅವರು ನನ್ನ ಕೈ ಎತ್ತಿದಾಗಲೇ ಈ ವಿಚಾರ ನನಗೂ ಗೊತ್ತಾಯ್ತು. ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹ ಹೀಗೆ ಇರಲಿ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಬಿಗ್ ಬಾಸ್ 11ನೇ ಸೀಸನ್‌ ರಿಯಾಲಿಟಿ ಶೋನಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ನಿ ಗ್ರಾಮದ ನಿವಾಸಿ ಹನುಮಂತ ಲಮಾಣಿ ಅವರು ಜಯಶೀಲರಾಗಿದ್ರು. ಆನ್‌ಲೈನ್ ವೋಟಿಂಗ್‌ ಮೂಲಕ ಬರೋಬ್ಬರಿ 5.23 ಕೋಟಿ ಮತಗಳು ಹನುಮಂತ ಅವರಿಗೆ ಸಿಕ್ಕಿತ್ತು. ಈ ಮೂಲಕ ಹನುಮಂತ ಬಿಗ್‌ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲೇ ಅತಿ ಹೆಚ್ಚು ವೋಟ್‌ ಪಡೆದ ಸ್ಪರ್ಧಿ ಎಂಬ ದಾಖಲೆ ನಿರ್ಮಿಸಿದ್ದಾರೆ.

Kannada Bigg Boss Winner Hanumantha Yet To Receive 50 Lakh Prize Money

ಸವಣೂರಿನಿಂದ ಸುಮಾರು ಆರು ಕಿಲೋಮೀಟರ್‌ ದೂರದಲ್ಲಿರುವ ಚಿಲ್ಲೂರು ಬಡ್ನಿ ಗ್ರಾಮದ ತಾಂಡಾದ ಮನೆಯಲ್ಲಿ ಹನುಮಂತ ಅವರ ಕುಟುಂಬ ವಾಸವಿದೆ. ಮೇಘಪ್ಪ ಹಾಗೂ ಶೀಲವ್ವ ದಂಪತಿ ಪುತ್ರ ಹನುಮಂತ. ಕುರಿ ಕಾಯುವುದು ಇವರ ವೃತ್ತಿಯಾಗಿದ್ದು, ಹನುಮಂತನಿಗೆ ಒಬ್ಬರು ಸಹೋದರ ಹಾಗೂ ಮೂವರು ಸಹೋದರಿಯರಿದ್ದಾರೆ. ಬಿಗ್‌ಬಾಸ್‌ನಿಂದ ಬರುವ ಹಣದಲ್ಲಿ ಮನೆ ಕಟ್ಟಿಸುವುದು ಹಾಗೂ ಮದುವೆಯಾಗುವ ಕನಸನ್ನು ಹನುಮಂತ ಕಟ್ಟಿಕೊಂಡಿದ್ದಾರೆ.

ಬಿಗ್‌ಬಾಸ್ ಶುರುವಾದ ಆರಂಭದಲ್ಲೇ ಇಬ್ಬರು ಸ್ಪರ್ಧಿಗಳು ಜೋರು ಹೊಡೆದಾಟ ಮಾಡಿಕೊಂಡ ಕಾರಣ ಅವರನ್ನು ಮನೆಯಿಂದ ಹೊರಗೆ ಕಳಿಸಲಾಯಿತು. ಬಳಿಕ ಹನುಮಂತ ವೈಲ್ಡ್‌ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದರು. ಕೊನೆಯವರೆಗೆ ಸೈಲೆಂಟ್‌ ಆಗಿದ್ದ ಹನುಮಂತ ಉತ್ತಮ ಆಟವಾಡುವ ಮೂಲಕ ಕಪ್‌ ಗೆದ್ದೇಬಿಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+