ಕತ್ತೆ ಫೇಮಸ್‌ ಆದ್ರೂ ಜನ ಸೆಲ್ಫೀ ತಗೋತಾರೆ: ನಟ ರಾಕೇಶ್‌ ಅಡಿಗ ಹೇಳಿದ್ದು ಯಾರಿಗೆ?

"ಜೋಶ್‌" ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದ ರಾಕೇಶ್‌ ಅಡಿಗ ಬಿಗ್‌ಬಾಸ್‌ ಕಾರ್ಯಕ್ರಮದ ಮೂಲಕ ಮತ್ತಷ್ಟು ಜನಪ್ರಿಯರಾದರು. ಇದೀಗ ಇದೇ ಜನಪ್ರಿಯತೆ ಬಗ್ಗೆ ರಾಕೇಶ್‌ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ರಾಕೇಶ್‌, ಒಂದು ಕತ್ತೆ ಫೇಮಸ್‌ ಆದ್ರೂ ಜನ ಬಂದು ಅದರ ಜೊತೆ ಸೆಲ್ಫೀ ತಗೋತಾರೆ ಎಂದಿದ್ದಾರೆ. ಯಾರನ್ನು ಕುರಿತು ರಾಕೇಶ್‌ ಈ ರೀತಿ ಹೇಳಿದ್ದಾರೆ ಗೊತ್ತಾ?

ಜನ ಈಗ ಒಂದು ಕತ್ತೆ ಫೇಮಸ್‌ ಆದ್ರೂ ಅದರ ಜೊತೆಗೆ ಸೆಲ್ಫೀ ತಗೋತಾರೆ. ಆ ಕತ್ತೆ ಬಂತು ನೋಡು ಎಂದು ಓಡೋಡಿ ಬಂದು ಸೆಲ್ಫಿ ತಗೋತಾರೆ. ನಾನು ಅವರೊಂದಿಗೆ ಇದ್ದೀನಿ ಅನ್ನೋದನ್ನ ಬೇರೆಯವರಿಗೆ ತೋರಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಹಾಗೆ ಮಾಡ್ತಾರೆ. ಅದನ್ನು ಕಂಡು ನಾವು ವಾವ್‌ ನನ್ನ ನೋಡೋಕೆ ಇಷ್ಟು ಜನ ಬಂದ್ರಾ? ಜನ ಇಷ್ಟು ಪ್ರೀತಿ ತೋರಿಸ್ತಾರಾ? ನನಗೆ ಇಷ್ಟು ಕ್ರೇಜ್‌ ಇದ್ಯಾ ಎಂಬ ಭ್ರಮೆಗೆ ಬೀಳಬಾರದು ಎಂದು ರಾಕೇಶ್‌ ಹೇಳಿದ್ದಾರೆ.

Kannada Bigg Boss Fame Actor Rakesh Adiga Slams Fame Obsession In Viral Statement

ಈಗ ಕಾಲ ಹೇಗಿದೆ ಅಂದ್ರೆ ಏನೇ ಫೇಮಸ್‌ ಆಗ್ಲಿ, ರೀಲ್ಸ್‌ ಮಾಡೋರು, ಆಂಕರ್ಸ್‌ ಯಾರೇ ಫೇಮಸ್‌ ಆದ್ರೂ ಜನ ಗುರುತಿಸುತ್ತಾರೆ, ಮಾತನಾಡಿಸುತ್ತಾರೆ. ಎಲ್ಲೇ ಹೋದರೂ ಜನ ನೋಡ್ತಾರೆ, ಹೋಟೆಲ್‌ಗೆ ಹೋದ್ರೆ ಬನ್ನಿ ಸರ್‌ ಅಂತ ಕರೀತಾರೆ, ಹಣ ನೆಕ್ಸ್ಟ್‌ ಟೈಮ್‌ ಕೊಡಿ ಅಂತಾರೆ. ಫೇಮ್‌ ಅಂದ್ರೆನೇ ಜಾಸ್ತಿ ಜನ ಗುರುತಿಸೋದು. ಈಗ ಮರ್ಡರ್‌ ಮಾಡೋರನ್ನೇ ರೀಲ್ಸ್‌ ಮಾಡಿ ಫೇಮಸ್‌ ಮಾಡ್ತಾರೆ. ದೊಡ್ಡ ದೊಡ್ಡ ಹೀರೋಗಳ ಸಾಂಗ್‌ ಹಾಕಿ ರೀಲ್ಸ್‌ ಮಾಡ್ತಾರೆ. ಹಾಗಾಗಿ ಫೇಮ್‌ ಅನ್ನೋದೇ ದೊಡ್ಡ ಭ್ರಮೆ ಎಂದು ರಾಕೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಮದುವೆ ಆಗದೆಯೂ ನೆಮ್ದಿಯಾಗಿ ಇರ್ಬೋದು

ಸದ್ಯಕ್ಕೆ ನನಗೆ ಯಾವುದೇ ಲವ್‌ ಇಲ್ಲ, ರಿಲೇಷನ್‌ಶಿಪ್‌ ಕೂಡ ಇಲ್ಲ. ಸದ್ಯಕ್ಕೆ ಅದರ ಮೇಲೆ ಆಸಕ್ತಿ ಇಲ್ಲ. ನನ್ನ ಪ್ರಕಾರ ಮದುವೆ ಮಾಡಿಕೊಳ್ಳದೇನೂ ಖುಷಿಯಾಗಿ, ಸಕ್ಸಸ್‌ ಆಗಿ, ನೆಮ್ಮದಿಯಾಗಿ ಇರಬಹುದು ಎಂದು ರಾಕೇಶ್‌ ಹೇಳಿದ್ದಾರೆ. ಮನೆಯಿಂದಲೂ ಮದುವೆಗೆ ಯಾವುದೇ ಒತ್ತಡ ಇಲ್ಲ. ಮೊದಲು ಫೋರ್ಸ್‌ ಮಾಡ್ತಿದ್ರು. ಈಗ ಅವರೂ ಕೂಡ ನಿನ್ನಿಷ್ಟ ಎಂದು ಹೇಳಿಬಿಟ್ಟಿದ್ದಾರೆ. ಒತ್ತೀಚೆಗೆ ಡೇಟಿಂಗ್‌ ಆಪ್‌ಗಳಲ್ಲೂ ನಾನಿದ್ದೆ. ಕೆಲ ದಿನಗಳ ಹಿಂದಷ್ಟೇ ಅದಕ್ಕೂ ಫುಲ್‌ಸ್ಟಾಪ್‌ ಇಟ್ಟಿದ್ದೀನಿ ಎಂದು ರಾಕೇಶ್‌ ಅಡಿಗ ತಮ್ಮ ವೈಯಕ್ತಿಕ ವಿಚಾರಗಳನ್ನು ರಿವೀಲ್‌ ಮಾಡಿದ್ದಾರೆ.

ಬಿಗ್‌ಬಾಸ್‌ ಬಳಿಕ ರಾಕೇಶ್‌ ಅಡಿಗ ನಟನೆಯ "ಮರ್ಯಾದೆ ಪ್ರಶ್ನೆ" ಸಿನಿಮಾ ರಿಲೀಸ್‌ ಆಗಿತ್ತು. ಬಳಿಕ ರಾಕೇಶ್‌ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ರಾಕೇಶ್‌ ನಟಿಸಿರುವ "ನಾನು ಮತ್ತು ಗುಂಡ 2" ಸಿನಿಮಾದ ಟೀಸರ್‌ ಬಿಡುಗಡೆಯಾಗಿತ್ತು. ರಾಕೇಶ್‌ಗೆ ನಾಯಕಿಯಾಗಿ ‌ಲವ್ ಮಾಕ್ಟೈಲ್‌ ಖ್ಯಾತಿ ರಚನಾ ಇಂದರ್ ನಟಿಸುತ್ತಿದ್ದು, ಈ ಚಿತ್ರವನ್ನು ರಘು ಹಾಸನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್‌ ಆಗಲಿದ್ದು, ಸದ್ಯದಲ್ಲೇ ರಿಲೀಸ್‌ ಬಗ್ಗೆ ಚಿತ್ರತಂಡ ಅನೌನ್ಸ್‌ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+