ಎರಡನೇ ಸಲ ಮದುವೆಯಾಗುತ್ತಿದ್ದಂತೆ ಗುಡ್‌ನ್ಯೂಸ್ ಕೊಟ್ಟ ಗೌತಮ್-ಭೂಮಿಕಾ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪ್ರೇಕ್ಷಕರು ಇದೆಂಥಾ ಧಾರಾವಾಹಿ ಎಂದು ಅಸಮಾಧಾನಗೊಳ್ಳುತ್ತಿದ್ದಂತೆ ಕಥೆಗೆ ರೋಚಕ ತಿರುವು ಕೊಟ್ಟು ಮತ್ತಷ್ಟು ಇಂಟ್ರಸ್ಟಿಂಗ್ ಎನ್ನುವಂತೆ ಕಥೆಯನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
ಅಮೃತಧಾರೆ ಧಾರಾವಾಹಿಯ ಗೌತಮ್ ದಿವಾನ್ ಹಾಗೂ ಭೂಮಿಕಾ ಪ್ರೇಕ್ಷಕರ ಮೆಚ್ಚಿನ ಜೋಡಿ. ಈ ಜೋಡಿಯನ್ನೇ ಬೇರೆ ಬೇರೆ ಮಾಡುವ ಕಥೆ ಧಾರಾವಾಹಿಯಲ್ಲಿ ಆರಂಭವಾಗಿತ್ತು. ತನಗೆ ಮಗುವಾಗುವುದಿಲ್ಲ ಎನ್ನುವ ಸುಳ್ಳು ಮಾಹಿತಿಯನ್ನೇ ನಂಬಿದ್ದ ಭೂಮಿ, ಗೌತಮ್ ದಿವಾನ್‌ಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದಳು.

ಮಧುರಾ ಎನ್ನುವ ಮಹಿಳೆ ಜೊತೆ ಗೌತಮ್ ದಿವಾನ್‌ಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದು, ಗೌತಮ್ ದಿವಾನ್ ಹಾಗೂ ಮಧುರಾ ಮದುವೆ ಮಂಟಪದಲ್ಲಿ ಕುಳಿತಿರುವ ಪ್ರೋಮೋ ಕೂಡ ವೈರಲ್ ಆಗಿತ್ತು. ಇದರಿಂದ ಪ್ರೇಕ್ಷಕರು ಅಸಮಧಾನಗೊಂಡಿದ್ದು, ಈಗಿನ ಎಲ್ಲಾ ಡೈರೆಕ್ಟರ್‌ಗಳಿಗೆ ಹೀರೋಗೆ ಎರಡು ಮದುವೆ ಮಾಡಿಸೋದು ಬಿಟ್ಟರೆ ಬೇರೆ ಆಲೋಚನೆಗಳೇ ಇಲ್ಲ ಎಂದು ಕಮೆಂಟ್ ಮೂಲಕ ಆಕ್ರೋಶ ಹೊರಹಾಕಿದ್ದರು.
ಈ ಹಂತದಲ್ಲೇ ಸಖತ್ ಟ್ವಿಸ್ಟ್ ಪಡೆದುಕೊಂಡ ಅಮೃತಧಾರೆ ಧಾರಾವಾಹಿ, ಈಗ ನೋಡುಗರಿಗೆ ಫುಲ್ ಖುಷಿಕೊಟ್ಟಿದೆ. ಮದುವೆ ಮಂಟಪದಲ್ಲಿ ಕುಳಿತಿದ್ದ ಗೌತಮ್ ದಿವಾನ್ ನೇರವಾಗಿ ಬಂದು ಮತ್ತೆ ಭೂಮಿಕಾಗೆ ತಾಳಿ ಕಟ್ಟಿದ್ದಾನೆ. ಏಳೇಳು ಜನ್ಮಕ್ಕೂ ಇವರೇ ನನ್ನ ಹೆಂಡತಿ. ಈ ಸ್ಥಾನಕ್ಕೆ ಬೇರೆ ಯಾರೂ ಬರಲು ಸಾಧ್ಯವೇ ಇಲ್ಲ ಎಂದು ಗೌತಮ್ ದಿವಾನ್ ಹೇಳಿದ್ದು, ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾದ ಶಕುಂತಲಾ ಹಾಗೂ ಗ್ಯಾಂಗ್ ಫುಲ್ ಶಾಕ್ ಆಗಿದ್ದಾರೆ.

ಇನ್ನೂ ಕಥೆಯಲ್ಲಿ ಟ್ವಿಸ್ಟ್ ಎನ್ನುವಂತೆ ಗೌತಮ್ ದಿವಾನ್ ಜೊತೆ ಎರಡನೇ ಸಾರಿ ಮದುವೆಯಾಗುತ್ತಿದ್ದಂತೆ ಭೂಮಿಕಾ ತಲೆ ಸುತ್ತಿ ಬಿದ್ದಿದ್ದು, ವೈದ್ಯರು ಪರೀಕ್ಷಿಸಿ ತಾಯಾಗುತ್ತಿದ್ದೀರಾ ಎನ್ನುವ ಸಿಹಿ ಸುದ್ದಿಯನ್ನು ಹೇಳಿದ್ದಾರೆ. ಇದರಿಂದ ಗೌತಮ್ ದಿವಾನ್ ಹಾಗೂ ಭೂಮಿಕಾ ಭಾವುಕರಾಗಿದ್ದಾರೆ. ಸದ್ಯ ಇಂದಿನ ಸಂಚಿಕೆಯ ಈ ಪ್ರೋಮೋ ವೈರಲ್ ಆಗಿದ್ದು, ಕಥೆ ಮುಂದೆ ಹೇಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದರ ಬಗ್ಗೆ ಪ್ರೇಕ್ಷಕರು ಕಾತುರರಾಗಿದ್ದಾರೆ.












Click it and Unblock the Notifications