Sapthami Gowda: ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ: ಕೊನೆಗೂ ಸಪ್ತಮಿ ಗೌಡ ಗುಡ್‌ನ್ಯೂಸ್‌

ಕಾಂತಾರ ಬೆಡಗಿ ಸಪ್ತಮಿಗೌಡ ಅವರು ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊದಲಿಗೆ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಸಿನಿಮಾದಲ್ಲಿ ನಟಿಸಿದರೂ ಅಷ್ಟೊಂದು ಹೈಪ್‌ ಆಗಲಿಲ್ಲ. ಆದರೆ ಕಾಂತಾರ ಸಿನಿಮಾದ ಲೀಲಾ ಪಾತ್ರದಿಂದ ಸಪ್ತಮಿ ಅವರ ಲಕ್‌ ಚೇಂಚ್‌ ಆಗಿದೆ. ಇದು ಅವರನ್ನು ಬಾಲಿವುಡ್‌ವರೆಗೂ ಕರೆದೊಯ್ದಿದೆ. ಯುವ ಸಿನಿಮಾ ನಂತರ ಅವರ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಅವರ ಅಭಿಮಾನಿಗಳು ಸಪ್ತಮಿ ಇನ್ನೂ ಸಿಂಗಲ್‌ ಯಾಕೆ ಎಂದು ಯೋಚಿಸುತ್ತಿದ್ದರು. ಇದೇ ಹೊತ್ತಿನಲ್ಲಿ ಅವರು ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಹೌದು ಕಾಂತಾರ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ಸಪ್ತಮಿ ಅವರು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಬೇಡಿಕೆಯ ನಟಿ. ಇನ್ನು ಸಪ್ತಮಿ ಅವರ ಅಭಿಮಾನಿಗಳಿಗೆ ಇವರ ಮದುವೆಯದ್ದೇ ದೊಡ್ಡ ಚಿಂತೆಯಾಗಿತ್ತು. ಸಪ್ತಮಿ ಅವರನ್ನು ಅವರ ಫ್ಯಾನ್ಸ್‌ ಲೀಲಾ ಎಂದೇ ಕರೆಯುವ ಟ್ರೆಂಡ್‌ ಸೃಷ್ಟಿಸಿದ್ದಾರೆ. ಇನ್ನು ಈ ಹೊತ್ತಿನಲ್ಲೇ ಸಪ್ತಮಿ ಗೌಡ ಅವರು "ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ, ಒಂದು ನಿಂದಾದರೆ, ಮತ್ತೊಂದು ನಂದು" ಎಂದು ಪೋಸ್ಟ್‌ ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದಾರೆ.

Kannada Actress Sapthami Gowda Role Revealed In The Rise of Ashoka Movie

ಸಪ್ತಮಿ ಅವರ ಪೋಸ್ಟ್‌ ನೋಡಿದವರು ನಟಿ ಸದ್ದಿಲ್ಲದೆ ಲವ್‌ ಅಲ್ಲಿ ಬಿದ್ರಾ? ಈ ಸಾಲುಗಳು ಯಾರಿಗೋ ಹಾರ್ಟ್‌ ಟಚ್‌ ಮಾಡುವಂತಿದೆಯಲ್ಲ? ಎಂದು ಡೌಟ್‌ ಕೂಡ ಪಟ್ಟಿದ್ದಾರೆ. ಆದರೆ ಅಸಲಿಗೆ ಸಪ್ತಮಿ ಈ ರೀತಿ ಹೇಳಿರುವುದು ತಮ್ಮ ಹೊಸ ಸಿನಿಮಾದ ಬಗ್ಗೆ. ಹೌದು ನಟ ಸತೀಶ್‌ ನೀನಾಸಂ ಅವರ ದಿ ರೈಸ್‌ ಆಫ್‌ ಅಶೋಕ ಸಿನಿಮಾದಲ್ಲಿ ಸಪ್ತಮಿ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಇಂದು ರಿಲೀಸ್‌ ಆಗಿದೆ.

ಈ ಸಿನಿಮಾದಲ್ಲಿ ಸಪ್ತಮಿ ಗೌಡ ಅವರ ಪಾತ್ರದ ಹೆಸರು ಅಂಬಿಕಾ ಎಂದು ಅವರೇ ರಿವೀಲ್‌ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಸಪ್ತಮಿ ಅವರು ಅಂಬಿಕಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂಬಿಕಾ ಎನ್ನುವುದು ಒಂದು ಹಳ್ಳಿ ಹುಡುಗಿಯ ಪಾತ್ರ ಎನ್ನುವುದನ್ನು ಪೋಸ್ಟರ್‌ ಹೇಳುತ್ತಿದೆ. ಇದರಲ್ಲಿ ಸಪ್ತಮಿ ಅವರ ಹಳ್ಳಿ ಹುಡುಗಿಯಂತೆ ಸೈಕಲ್‌ ಏರಿ, ಹಿಂಬದಿ ಚೆಂಡು ಹೂವಿನ ಬುಟ್ಟಿ ಇಟ್ಕೊಂಡು ಮುಂದೆ ಕುಡುಗೋಲು ಹಿಡಿದು ಸವಾರಿ ಮಾಡುತ್ತಿದ್ದಾರೆ. ಹಾಗಾಗಿ ಇದು ಸಪ್ತಮಿ ಪಕ್ಕಾ ಈ ಸಿನಿಮಾದಲ್ಲಿ ಹಳ್ಳಿ ಹುಡುಗಿ ಎಂದು ಕನ್ಫರ್ಮ್‌ ಆಗಿದೆ.

Kannada Actress Sapthami Gowda Role Revealed In The Rise of Ashoka Movie

ರೈಸ್‌ ಆಫ್‌ ಅಶೋಕ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಎನ್ನಲಾಗಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಈ ಸಿನಿಮಾಗೆ ಈಗ ಸಪ್ತಮಿ ಗೌಡ ಕೂಡ ಎಂಟ್ರಿ ಕೊಟ್ಟಿದ್ದಾರೆ. ಐತಿಹಾಸಿಕ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಒಂದು ಜನಾಂಗದ ನಾಯಕನಾಗಿ ಹಾಗೂ ಅವರ ಒಳಿತಿಗಾಗಿ ಹೋರಾಡುವ ನಾಯಕನಾಗಿ ಸತೀಶ್ ನೀನಾಸಂ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ನೈಜ ಘಟನೆಯಾಧಾರಿತ ಸಿನಿಮಾ ಎನ್ನಲಾಗಿದ್ದು, 80ರ ದಶಕದ ಕುರಿತಾದ ಸಿನಿಮಾ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+