UI Movie: ಕೈಗೆ ರಿಯಲ್‌ ಪವರ್‌ ಕೊಟ್ರೆ ಉಪ್ಪಿ ಏನ್‌ ಮಾಡ್ತಾರಂತೆ ಗೊತ್ತಾ?

ಸ್ಯಾಂಡಲ್‌ವುಡ್‌ ನಟ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ UI ಸಿನಿಮಾ ತೆರೆಗೆ ಬರಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಸದ್ಯ ಯುಐ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಎಲ್ಲೆಡೆ ಡೈರೆಕ್ಟರ್‌ ಉಪ್ಪಿ ಅಖಾಡಕ್ಕೆ ಬಂದಿದ್ದಾರೆ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.

ಬಳಿಕ UI ಚಿತ್ರತಂಡ ಪ್ರೆಸ್‌ಮೀಟ್‌ ಮಾಡಿದ್ದು, ನಟ ಉಪೇಂದ್ರ ಕೆಲವು ಶಾಕಿಂಗ್‌ ವಿಚಾರಗಳನ್ನು ರಿವೀಲ್‌ ಮಾಡಿದ್ದಾರೆ. ಉಪೇಂದ್ರ ಅವರಿಗೆ ನಿಜವಾಗಿ ಪವರ್‌ ಸಿಕ್ಕರೆ ಏನು ಮಾಡುತ್ತಾರೆ? ಎನ್ನುವ ಪ್ರಶ್ನೆಗೆ ತಮ್ಮದೇ ಸ್ಟೈಲಲ್ಲಿ ಅವರು ಉತ್ತರಿಸಿರುವುದು ಗಮನ ಸೆಳೆದಿದೆ.

Kannada Actor Upendra Says What He Will Do If He Gets Real Power In UI Movie Pressmeet

ಇನ್ನು ಮಾಧ್ಯಮದವರು ಉಪ್ಪಿ ಅವರಿಗೆ ರಿಯಲ್‌ ಪವರ್‌ ಸಿಕ್ಕರೆ ಏನು ಮಾಡುತ್ತಾರೆ? ಎಂದು ಪ್ರಶ್ನೆ ಮುಂದಿಟ್ಟರು. ಇದಕ್ಕೆ ಉತ್ತರಿಸಿದ ಉಪೇಂದ್ರ ನನಗೆ ಅಧಿಕಾರ ಸಿಕ್ಕರೆ ಏನು ಮಾಡುತ್ತೇನೆ ಎಂದು ಟ್ರೇಲರ್‌ನಲ್ಲೇ ತೋರಿಸಿದ್ದೇನಲ್ಲ? ಎಂದು ಮರುಪ್ರಶ್ನೆ ಕೇಳಿದ್ದಾರೆ. ಅಧಿಕಾರ ಸಿಕ್ಕರೆ ಅಷ್ಟೇ ಎಂದು ಗನ್‌ ಹಿಡಿದುಕೊಂಡ ರೀತಿ ಪೋಸ್‌ ನೀಡಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ.

ಇಷ್ಟಕ್ಕೂ ಟ್ರೈಲರ್‌ನಲ್ಲಿ ಉಪೇಂದ್ರ ಹೇಳಿದ್ದು ಯಾವುದರ ಬಗ್ಗೆ ಎಂದು ನೋಡುವುದಾದರೆ, ಉಪೇಂದ್ರ ಡೈರೆಕ್ಟರ್‌ ಕ್ಯಾಪ್‌ ತೊಟ್ಟರೆ, ಸದಾ ಭವಿಷ್ಯ ನುಡಿಯೋದು ಗ್ಯಾರಂಟಿ. ಈ ಟ್ರೇಲರ್‌ನಲ್ಲೂ ಉಪ್ಪಿ ಅದೇ ಶೈಲಿಯನ್ನ ಮುಂದುವರಿಸಿದ್ದಾರೆ. ಮುಂದೆ ಜಗತ್ತು ಹೇಗಿರಲಿದೆ? ಎಂಬುದನ್ನು ಉಪ್ಪಿ ಕಥೆ ಕಟ್ಟಿಕೊಟ್ಟಿದ್ದಾರೆ.

Kannada Actor Upendra Says What He Will Do If He Gets Real Power In UI Movie Pressmeet

ಭವಿಷ್ಯದಲ್ಲಿ ಜನರ ಅಗತ್ಯಗಳು ಏನೇನು ಇರಲಿವೆ ಎಂಬುದನ್ನು ವಿಡಂಬನಾತ್ಮಕವಾಗಿ ಅವರು ಬೆಳಕು ಚೆಲ್ಲಿದ್ದಾರೆ. ಜಾತಿ ವ್ಯವಸ್ಥೆ, ತಂತ್ರಜ್ಞಾನ ಹಾಗು ರಾಜಕೀಯದ ಬಗ್ಗೆಯೂ ಅವರು ವಿಡಂಬನೆ ಮಾಡಿದ್ದಾರೆ. ಇನ್ನು ವಾರ್ನರ್‌ ಟ್ರೇಲರ್‌ನಲ್ಲಿ ಉಪೇಂದ್ರ ಬರುವಾಗ ಕೆಲ ಸಾರ್ವಜನಿಕರು ಪುಟಗೋಸಿಯಲ್ಲಿ ಬಂದು ಧಿಕ್ಕಾರ ಧಿಕ್ಕಾರ ಕೂಗುತ್ತಾರೆ. ಈ ವೇಳೆ ಉಪೇಂದ್ರ, ಥೂ...ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂಬ ಡೈಲಾಗ್‌ ಹೇಳಿದ್ದಾರೆ.

ಬಳಿಕ ಧಿಕ್ಕಾರ ಕೂಗಿದವರ ಮೇಲೆ ಗುಂಡಿನ ಸುರಿಮಳೆ ಹರಿಸಿದ್ದಾರೆ. ಇದೇ ವಿಚಾರವನ್ನೇ ಉಪ್ಪಿ ಪ್ರೆಸ್‌ಮೀಟ್‌ನಲ್ಲಿ ಉಲ್ಲೇಖಿಸಿ, ನನಗೆ ರಿಯಲ್‌ ಆಗಿ ಅಧಿಕಾರ ಸಿಕ್ಕರೆ, ಮಾಡೋದು ಅಷ್ಟೇ ಎಂದು ನಗುತ್ತಾ ಉತ್ತರಿಸಿದ್ದಾರೆ. ಅಲ್ಲದೆ ಚಿತ್ರಕಥೆ ಏನು ಸರ್‌? ಎಂದು ಕೇಳಿದವರಿಗೂ ಹಾಸ್ಯವಾಗಿ ನಿಮ್ಮ ನಂಬರ್‌ ಕೊಡಿ..ಮೊದಲ ಸೀನ್‌ನಿಂದ ಕೊನೆ ಸೀನ್‌ವರೆಗೂ ಎಲ್ಲವನ್ನೂ ಹೇಳ್ತೀನಿ ಎಂದು ಉಪ್ಪಿ ಡೈಲಾಗ್‌ ಹೊಡೆದಿದ್ದಾರೆ.

Kannada Actor Upendra Says What He Will Do If He Gets Real Power In UI Movie Pressmeet

ಅಲ್ಲದೆ ತಮ್ಮ ಹಿಂದಿನ ಹಿಟ್‌ ಸಿನಿಮಾಗಳು ಹಾಗೂ ಮುಂದೆ ಮಾಡಲಿರುವ ಸಿನಿಮಾ ಬಗ್ಗೆಯೂ ನಟ ಉಪೇಂದ್ರ ಮಾತನಾಡಿದ್ದಾರೆ. ನಾನೊಬ್ಬ ಡೈರೆಕ್ಟರ್‌ ಆಗಿ ಹೇಳುವುದಾದರೆ, ಸಿನಿಮಾದ ಯಾವುದೇ ಒಂದು ಸೀನ್‌ ಅನ್ನೂ ರಿವೀಲ್‌ ಮಾಡದೆ, ಸಿನಿಮಾ ರಿಲೀಸ್‌ ಮಾಡಿ ಹಿಟ್‌ ಮಾಡಬೇಕು ಎನ್ನುವ ಆಸೆ ಮೊದಲಿನಿಂದಲೂ ಇದೆ. ಈ ಪ್ರಯೋಗವನ್ನು ನನ್ನ ಮುಂದಿನ ಸಿನಿಮಾದಲ್ಲಿ ಮಾಡುತ್ತೇನೆ ಎಂದು ಉಪ್ಪಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಡಿಸೆಂಬರ್‌ 20ಕ್ಕೆ ಯುಐ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+