Bigg Boss Kannada: ಬಿಗ್ ಬಾಸ್ ಮನೆಗೆ ಬಂದು ನಟ ಶರಣ್,ಅದಿತಿ: ಟಿಕೆಟ್ ಟು ಫಿನಾಲೆ ನೀಡಿದ್ದು ಯಾರಿಗೆ?
ಬಿಗ್ ಬಾಸ್ ಮನೆಗೆ ಹಾಸ್ಯ ನಾಯಕ ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಎಂಟ್ರಿ ಆಗಿದ್ದಾರೆ. ಈ ಇಬ್ಬರು ಬಿಗ್ ಬಾಸ್ ಮನೆಗೆ ಯಾಕೆ ಹೋಗಿದ್ದಾರೆ ಎನ್ನುವ ಕುತೂಹಲ ಎಲ್ಲಾರಿಗೂ ಇದೆ. ಇವರ ಛೂಮಂತರ್ ಚಿತ್ರ ರಿಲೀಸ್ ಆಗುತ್ತಿದೆ. ಅದರ ಪ್ರಮೋಷನ್‌ಗೆ ಬಂದಿದ್ದಾರೆ ಅಂತಲೇ ಗೆಸ್ ಮಾಡಬಹುದು. ಆದರೆ, ಪ್ರಮೋಷನ್ ಮಾತ್ರವಲ್ಲದೇ ಬಿಗ್ ಬಾಸ್ ಈ ಜೋಡಿಗೆ ಒಂದು ಕೆಲಸವನ್ನ ನೀಡಿದ್ದಾರೆ.
ಕಳೆದ ವಾರ ಕಿಚ್ಚ ಸುದೀಪ್ ಅವರು ಟಕೆಟ್ ಟು ಫಿನಾಲೆ ವಿಚಾರವನ್ನ ಪ್ರಸ್ತಾಪ ಮಾಡಿದ್ರು. ಈ ವಾರ ಟಿಕೆಟ್ ಟು ಫಿನಾಲೆಗಾಗಿ ಬಿಗ್ ಬಾಸ್ ಸ್ಪರ್ಧಿಗಳು ಹಲವು ಪ್ರಯತ್ನವನ್ನ ನಡೆಸಿದ್ದಾರೆ. ಟಿಕೆಟ್ ಟು ಫಿನಾಲೆ ಆಟಕ್ಕೆ ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಸಾಕ್ಷಿ ಆಗಲಿದ್ದಾರೆ.

ಬಿಗ್ಬಾಸ್ ಮನೆಯಲ್ಲಿ ಫಿನಾಲೆ ಟಿಕೆಟ್ ಗಾಗಿ ಎಲ್ಲ ಸ್ಪರ್ಧಿಗಳು ಸಾಕಷ್ಟು ಕಷ್ಟಪಟ್ಟು ಟಾಸ್ಕ್ಗಳನ್ನು ಪೂರ್ಣಗೊಳಿಸಿದ್ದರು. ಸದ್ಯ ಮನೆಯಲ್ಲಿರುವ 9 ಸ್ಪರ್ಧಿಗಳಲ್ಲಿ ಯಾರು ಬಿಗ್ಬಾಸ್ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಇದಕ್ಕೆ ಉತ್ತರ ಕೂಡ ಈಗಾಗಲೇ ಸಿಕ್ಕಾಗಿದೆ. ಗ್ರ್ಯಾಂಡ್ ಫಿನಾಲೆ ಟಿಕೆಟ್ ಅನ್ನು ಒಟ್ಟು ನಾಲ್ವರು ಸ್ಪರ್ಧಿಗಳು ಪಡೆದುಕೊಂಡಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ನಾನು, ನೀನು ಎನ್ನುವಂತೆ ಟಾಸ್ಕ್ಗಳನ್ನು ಪೂರ್ಣಗೊಳಿಸಿದ್ದಾರೆ
ಟಿಕೆಟ್ ಟು ಫಿನಾಲೆಗೆ ಗೌತಮಿ ಹಾಗೂ ಉಗ್ರಂ ಮಂಜು ಆಯ್ಕೆ ಆಗಿಲ್ಲ. ಧನರಾಜ್, ಚೈತ್ರಾ ಈ ಮೊದಲೇ ಟಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ಈ ಬಾರಿ ಬಿಗ್ಬಾಸ್ ಟಿಕೆಟ್ ಟು ಫಿನಾಲೆ ಟಾಸ್ಕ್ಗೆ ಕ್ಯಾಪ್ಟನ್ ರಜತ್, ಭವ್ಯ, ಹನುಮಂತ ಹಾಗೂ ತ್ರಿವಿಕ್ರಮ್ ಆಯ್ಕೆಯಾಗಿದ್ದಾರೆ. ಮೋಕ್ಷಿತಾ ಕೂಡ ಟಿಕೆಟ್ ಟು ಫಿನಾಲೆ ಟಾಸ್ಕ್ ಅನ್ನು ಕೊನೆ ಕ್ಷಣದಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ರಜತ್, ಹನುಮಂತ, ಭವ್ಯ ಹಾಗೂ ತ್ರಿವಿಕ್ರಮ್ ಇವರಲ್ಲಿ ಒಬ್ಬರಿಗೆ ಇಂದು ಗ್ರ್ಯಾಂಡ್ ಫಿನಾಲೆ ಟಿಕೆಟ್ ಸಿಗಲಿದೆ. ಇದಕ್ಕಾಗಿಯೇ ಛೂಮಂತರ್ ಚಿತ್ರ ಶರಣ್ ಹಾಗೂ ಅದಿತಿ ಪ್ರಭುದೇವ ಎಂಟ್ರಿ ಕೊಟ್ಟಿದ್ದಾರೆ.
ಇಂದು ರಜತ್, ಹನುಮಂತ, ಭವ್ಯ ಹಾಗೂ ತ್ರಿವಿಕ್ರಮ್ ಇವರಲ್ಲಿ ಒಬ್ಬರಿಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್ ಸಿಗಲಿದೆ. ಗ್ರ್ಯಾಂಡ್ ಫಿನಾಲೆ ಟಿಕೆಟ್ ಅನ್ನು ಸೆಲೆಬ್ರಿಟಿಗಳಿಂದ ಕೊಡಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಕನ್ನಡ ಸಿನಿ ರಂಗದ ಖ್ಯಾತ ನಟ, ನಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಕೊಡುವ ಟಾಸ್ಕ್ಗಳನ್ನು ಈ ನಾಲ್ವರು ಸ್ಪರ್ಧಿಗಳು ಎಷ್ಟು ವೇಗವಾಗಿ, ಎಷ್ಟು ಚೆನ್ನಾಗಿ, ಯಾವುದೇ ರೂಲ್ ಬ್ರೇಕ್ ಮಾಡದಂತೆ ಕಡಿಮೆ ಅವಧಿಯಲ್ಲಿ ಮುಗಿಸುತ್ತಾರೋ ಅವರಿಗೆ ಫಿನಾಲೆ ಬಾಗಿಲು ಓಪನ್ ಆಗಿರುತ್ತದೆ. ಇನ್ನೂ ಕೆಲ ಮಾಹಿತಿ ಪ್ರಕಾರ ರಜತ್ ಹಾಗೂ ತ್ರಿವಿಕ್ರಮ್ ಅವರು ಈ ಟಾಸ್ಕ ಆಡಿ ಗೆದ್ದಿದ್ದಾರೆ ಎನ್ನುವ ಮಾಹಿತಿ ಇದೆ. ಇವರಿಬ್ಬರಲ್ಲಿ ರಜತ್ ಜಯ ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications