ಕನ್ನಡದ ಮತ್ತೊಬ್ಬ ನಟನ ಬಂಧನಕ್ಕೆ ಮುಂದಾದ ಪೊಲೀಸರು!

ಕನ್ನಡ ಚಿತ್ರರಂಗದಲ್ಲಿ ಈ ಬಾರಿ ಸಿನಿಮಾ ನಟರು, ಕಿರುತರೆ ನಟರ ಬಂಧನ ಹಾಗೂ ಅವರ ಮೇಲೆ ದೂರುಗಳು ದಾಖಲಾಗಿದ್ದೇ ಹೆಚ್ಚು. ಇದೀಗ ವರ್ಷಾಂತ್ಯದಲ್ಲಿ ಮತ್ತೊಬ್ಬ ಕನ್ನಡ ಸಿನಿಮಾ ನಟನ ಬಂಧನಕ್ಕೆ ಕರ್ನಾಟಕ ಪೊಲೀಸರು ಬಲೆಬೀಸಿದ್ದಾರೆ. ವರಾಹಿ ಜ್ಯುವೆಲ್ಲರ್ಸ್ ಮಾಲೀಕರಿಗೆ ವಂಚನೆ ಮಾಡಲಾಗಿದೆ ಎನ್ನಲಾಗಿರುವ ಪ್ರಕರಣದಲ್ಲಿ ಕನ್ನಡದ ನಟ ಧರ್ಮೇಂದ್ರ ಅವರನ್ನು ಬಂಧಿಸುವುದಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಇವರ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕನ್ನಡಿಗರು ಈ ವರ್ಷವೆಲ್ಲ ಸಿನಿಮಾ ನಟರ ಬಂಧನ ಹಾಗೂ ಕಿರುತರೆ ನಟರ ಮೇಲೆ ಬಂಧನವಾಗಿರುವ ಸುದ್ದಿಯನ್ನೇ ಕೇಳಿದ್ದಾರೆ. ಇದೀಗ ವರ್ಷಾಂತ್ಯದಲ್ಲೂ ಮತ್ತೊಬ್ಬ ನಟನ ಬಂಧನಕ್ಕೆ ಸಿದ್ಧತೆ ನಡೆದಿದೆ.

ಡಿ.ಕೆ ಸುರೇಶ್‌ ಅವರ ತಂಗಿ ಎಂದು ಹೇಳಿಕೊಂಡು ಚಿನ್ನದ ಅಂಗಡಿಯ ಮಾಲೀಕರಿಗೆ ಮೋಸ ಮಾಡಿರುವ ಆರೋಪದ ಮೇಲೆ ಐಶ್ವರ್ಯ ಗೌಡ, ಹರೀಶ್‌ ಕೆ.ಎನ್‌ ಹಾಗೂ ನಟ ಧರ್ಮೇಂದ್ರ ಗೌಡ ವಿರುದ್ಧ ಬೆಂಗಳೂರಿನ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಮಾಜಿ ಸಂಸದ ಡಿ.ಕೆ ಸುರೇಶ್‌ ಅವರು ತಂಗಿ ಎಂದು ಹೇಳಿಕೊಂಡು 9 ಕೋಟಿ ಮೌಲ್ಯದ 14 ಕೆಜಿಗೂ ಹೆಚ್ಚು ಚಿನ್ನವನ್ನು ವಂಚಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾದ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಹರೀಶ್‌ ಕೆ.ಎನ್‌ ಎನ್ನುವವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

Kannada actor Dharmendra Gowda may be arrested by police at any moment

ನೋಟಿಸ್ ಕೊಡುತ್ತಿದ್ದಂತೆಯೇ ನಾಪತ್ತೆ

ಇನ್ನು ಚಿನ್ನದ ಅಂಗಡಿಯ ಮಾಲೀಕರಿಗೆ ಕೋಟ್ಯಾಂತರ ರೂಪಾಯಿ ಹಣ ಮೋಸ ಮಾಡಿದ ಆರೋಪದ ಮೇಲೆ ನಟ ಧರ್ಮೇಂದ್ರನಿಗೂ ಪೊಲೀಸರು ನೋಟಿಸ್‌ ಕೊಟ್ಟಿದ್ದಾರೆ. ಆದರೆ, ನೋಟಿಸ್ ಕೊಡುತ್ತಿದ್ದಂತೆಯೇ ಧರ್ಮೇಂದ್ರ ಅವರ ಫೋನ್‌ ಸ್ವೀಚ್‌ ಆಫ್‌ ಆಗಿದೆ ಎನ್ನಲಾಗಿದೆ. ಚಾರ ಬೆಂಗಳೂರಿನ ಅವರ ಮನೆಯಲ್ಲಿಯೂ ಪೊಲೀಸರು ಹುಡುಕಾಟ ನಡೆಸಿದ್ದು, ಅಲ್ಲಿಯೂ ಧರ್ಮೇಂದ್ರ ಅವರು ಇಲ್ಲ ಎನ್ನಲಾಗಿದೆ. ಅವರ ಮೇಲೆ ಪೊಲೀಸರು ಎಫ್‌ಐಆರ್‌‌ ದಾಖಲಿಸಿಕೊಂಡಿದ್ದರು. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ಕೊಟ್ಟಿದ್ದರು. ನೋಟಿಸ್‌ ಕೊಡುತ್ತಿದ್ದಂತೆಯೇ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪತ್ತೆಯಿಲ್ಲ. ಎಫ್‌ಐಆರ್ ದಾಖಲಾಗ್ತಿದ್ದಂತೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದರು. ಇದರ ಬೆನ್ನಲ್ಲೇ ನಟ ನಾಪತ್ತೆಯಾಗಿದ್ದಾರೆ.

ಪ್ರತ್ಯೇಕ ತಂಡ ರಚನೆ: ನಟ ಧರ್ಮೇಂದ್ರ ನಾಪತ್ತೆಯಾಗಿದ್ದು. ಪೊಲೀಸರು ಎಲ್ಲ ಕಡೆ ಬಲೆ ಬೀಸಿದ್ದಾರೆ. ಅವರ ಬಂಧನಕ್ಕಾಗಿ ಇದೀಗ ಬೆಂಗಳೂರಿನ ಚಂದ್ರಲೇಔಟ್ ಪೊಲೀಸರು ಬಲೆ ಬೀಸಿದ್ದು, ಬಂಧನಕ್ಕಾಗಿ ಪ್ರತ್ಯೇಕ ತಂಡ ರಚಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಯಾವುದೇ ಕ್ಷಣದಲ್ಲಾದರೂ ಅವರ ಬಂಧ ಆಗಬಹುದು ಎಂದು ಎನ್ನಲಾಗಿದೆ.

ಕೋಟ್ಯಾಂತರ ರೂಪಾಯಿ ವಂಚನೆ ?

ಐಶ್ವರ್ಯ ಗೌಡ / ನವ್ಯಶ್ರೀ ಎನ್ನುವವರು ಡಿ.ಕೆ ಸುರೇಶ್‌ ಅವರ ತಂಗಿ ಎಂದು ಹೇಳಿಕೊಂಡು ಹಲವರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವನಿತಾ ಐತಾಳ ಎನ್ನುವವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಇನ್ನಷ್ಟು ಜನ ದೂರು ಕೊಡುವುದಕ್ಕೆ ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಬಗೆದಷ್ಟು ಈ ಪ್ರಕರಣದಲ್ಲಿ ಹಲವು ರಹಸ್ಯಗಳು ಬಯಲಾಗುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+