ದರ್ಶನ್ ಅಭಿಮಾನಿಗಳಿಗೆ ದಚ್ಚು ಪತ್ನಿ ವಿಜಯಲಕ್ಷ್ಮೀ ಭಾವುಕ ಸಂದೇಶ...

ದರ್ಶನ್ ಈಗ ಕೊಲೆ ಆರೋಪದಲ್ಲಿ 'ಪರಪ್ಪನ ಅಗ್ರಹಾರ' ಜೈಲು ಸೇರಿದ್ದಾರೆ. ಹೀಗೆ ತಮ್ಮ ನೆಚ್ಚಿನ ನಟ ಜೈಲು ಸೇರಿದ ನಂತರ ದರ್ಶನ್ ಅವರ ಅಭಿಮಾನಿಗಳು ಸಾಕಷ್ಟು ಭಾವುಕರಾಗಿದ್ದಾರೆ. ಹೀಗಿದ್ದಾಗಲೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಈಗ ದರ್ಶನ್ ಅವರ ಅಭಿಮಾನಿಗಳಿಗೆ ಭಾವುಕ ಸಂದೇಶ ನೀಡಿದ್ದಾರೆ. ಹಾಗಾದ್ರೆ ದರ್ಶನ್‌ರ ಅಭಿಮಾನಿಗಳಿಗೆ ದಚ್ಚು ಪತ್ನಿ ಹೇಳಿದ್ದು ಏನು? ಮುಂದೆ ಓದಿ.

ದರ್ಶನ್ ಕನ್ನಡದ ಟಾಪ್ ನಟನಾಗಿ, ನೂರಾರು ಕೋಟಿ ರೂಪಾಯಿ ಸಂಪಾದಿಸಿದ್ದರು. ಅದರಲ್ಲೂ ನಟ ದರ್ಶನ್ ಸಿನಿಮಾ ಬರುತ್ತೆ ಅಂದ್ರೆ ವರ್ಷಗಟ್ಟಲೇ ಅಭಿಮಾನಿ ಬಳಗ ಕಾಯುತ್ತಾ ಕೂರುತಿತ್ತು. ಆದರೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟವರಂತೆ ಏನೋ ಎಡವಟ್ಟು ಮಾಡಿಕೊಂಡು ಈಗ ದರ್ಶನ್ ಜೈಲಿಗೆ ಹೋಗಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಕೊರಗು. ಆದರೆ ಇದೇ ಅಭಿಮಾನ ಈಗ ಅತಿರೇಕಕ್ಕೆ ಹೋಗಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

Kannada Actor Darshan Thoogudeepa Wife Gave A Message To The Fans

ಹೀಗಾಗಿ ದರ್ಶನ್ ಫ್ಯಾನ್ಸ್ ಸಿಕ್ಕಾಪಟ್ಟೆ ಆಕ್ರೋಶ ಹೊರ ಹಾಕುತ್ತಿದ್ದು, ಇದೇ ವೇಳೆ ದರ್ಶನ್ ಅವರ ಬಗ್ಗೆ ಮಾತನಾಡುವವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಈ ವರ್ತನೆ ಅವರಿಗೆ ಮುಳುವಾಗುತ್ತಿದ್ದು, ಈಗಾಗಲೇ ಒಬ್ಬ ದರ್ಶನ್ ಅಭಿಮಾನಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹೀಗಾಗಿಯೇ ನಟ ದರ್ಶನ್ ಅವರ ಪತ್ನಿ ಮಹತ್ವದ ಸಂದೇಶ ನೀಡಿ, ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದಾರೆ. ಹಾಗಾದ್ರೆ ವಿಜಯಲಕ್ಷ್ಮೀ ಅವರು ಹೇಳಿದ್ದು ಏನು? ಮುಂದೆ ಓದಿ.

'ನನ್ನ ಪ್ರೀತಿಯ ಸಹೋದರರೇ...'

ಈಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಹೇಳಿರುವ ಪ್ರಕಾರ, 'ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ "ಸೆಲೆಬ್ರಿಟಿಗಳನ್ನು" ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ,ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ.' ಎಂದಿದ್ದಾರೆ.

'ನಮಗೆ ನ್ಯಾಯ ಸಿಗುವ ಭರವಸೆ!'

ಹಾಗೇ, 'ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ. ಸತ್ಯಮೇವ ಜಯತೆ!' ಎಂದು ಪೋಸ್ಟ್ ಹಾಕಿದ್ದಾರೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+