Darshan Thoogudeepa: ಮಂಡ್ಯ ಜಿಲ್ಲೆಯವರು ಅಂದಿದ್ದಕ್ಕೆ ಕೆಟ್ಟದಾಗಿ ಬೈದಿದ್ದರಾ ದರ್ಶನ್ ತೂಗುದೀಪ್? ವಿಡಿಯೋ ನೋಡಿ!

ದರ್ಶನ್ ತೂಗುದೀಪ್ ಮಂಡ್ಯ ಹೆಸರಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಅಲ್ಲದೆ ದರ್ಶನ್ ಅವರಿಗೆ ರಾಜಕೀಯವಾಗಿ ಕೂಡ ಬೆಂಬಲ ನೀಡಿದ ಜಿಲ್ಲೆ ಮಂಡ್ಯ ಜಿಲ್ಲೆ. ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಯದಿಂದ ಕೂಡ ಇದೇ ರೀತಿ ಮಂಡ್ಯ ಜನರು ನಟ ದರ್ಶನ್ ತೂಗುದೀಪ್ ಬೆಂಬಲಕ್ಕೆ ನಿಂತಿದ್ದಾರೆ. ಮಂಡ್ಯ ಜಿಲ್ಲೆ ಒಂದರಲ್ಲೇ ಲಕ್ಷಾಂತರ ಅಭಿಮಾನಿಗಳ ಬಳಗ ಹೊಂದಿರುವ ನಟ ದರ್ಶನ್, ಮಂಡ್ಯ ಜಿಲ್ಲೆಯವರು ಅಂತಾ ಹೇಳಿದ್ದಕ್ಕೆ ಕೆಟ್ಟದಾಗಿ ಬೈದಿದ್ದರಾ? ವಿಡಿಯೋ ನೋಡಿ!

ಹೌದು, ನಟ ದರ್ಶನ್ ತೂಗುದೀಪ್ ಅಂದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಸಖತ್ ಇಷ್ಟ. ಕರ್ನಾಟಕ ಮಾತ್ರವಲ್ಲ, ಅಕ್ಕಪಕ್ಕದ ರಾಜ್ಯದಲ್ಲೂ ಅಪಾರ ಪ್ರಮಾಣದ ಅಭಿಮಾನಿ ಬಳಗ ಹೊಂದಿದ್ದಾರೆ ನಟ ದರ್ಶನ್ ತೂಗುದೀಪ್. ಹೀಗಾಗಿ ನಟ ದರ್ಶನ್ ತೂಗುದೀಪ್ ಮಾತು ಅಂದ್ರೆ ಸಾಕಷ್ಟು ಪ್ರಭಾವ ಕೂಡ ಹೊಂದಿರುತ್ತದೆ. ಆದರೆ ಇದೀಗ ದರ್ಶನ್ ಅವರು ಮಂಡ್ಯ ಜಿಲ್ಲೆ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ವಿಡಿಯೋ ಎಂದು ಗಂಭೀರ ಆರೋಪ ಮಾಡಲಾಗಿರುವ, ಆ ಒಂದು ತುಣುಕು ವಿಡಿಯೋ ಈಗ ಫುಲ್ ವೈರಲ್ ಆಗಿದೆ. ದರ್ಶನ್ ಅವರದ್ದು ಅಂತಾ ಆರೋಪ ಮಾಡಿರುವ ವಿಡಿಯೋ ನೋಡಲು ಮುಂದೆ ಓದಿ.

Kannada Actor Darshan Thoogudeepa Once Said This About Mandya

ಮಂಡ್ಯದವರು ಅಂದಿದ್ದಕ್ಕೆ ಕೆಟ್ಟ ಮಾತು?

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುವ ಸ್ಥಿತಿ ಬಂದಿದೆ. ರೇಣುಕಾಸ್ವಾಮಿ ಎಂಬ ವ್ಯಕ್ತಿ ಕೊಲೆ ಕೇಸ್‌ನಲ್ಲಿ ಇಬ್ಬರು ಸೆಂಟ್ರಲ್ ಜೈಲು ಸೇರಿದ್ದಾರೆ ಪರಿಸ್ಥಿತಿ ಹೀಗಿದ್ದಾಗಲೇ ದರ್ಶನ್ ಅವರು ಮಂಡ್ಯ ಜಿಲ್ಲೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು, ಎಂದು ಗಂಭೀರ ಆರೋಪ ಮಾಡಲಾಗಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದೇ ವಿಡಿಯೋ ಇಲ್ಲಿದೆ ನೋಡಿ.

ದರ್ಶನ್ ಬಗ್ಗೆ ಸುಳ್ಳು ವಿಡಿಯೋ?

ಈ ವಿಡಿಯೋದಲ್ಲಿ ನಟ ದರ್ಶನ್ ಅವರು ಯಾರದ್ದೋ ಜೊತೆ ಮಾತನಾಡುತ್ತಾ ಕೂತಿರುತ್ತಾರೆ. ಅದೇ ಸಮಯದಲ್ಲಿ, 'ಮೊನ್ನೆ ಯಾವನೋ ಒಬ್ಬ ಸಿಕ್ಕಿದ್ದನಪ್ಪ ಇಲ್ಲಿ, ಸಿಂಗಪುರದಲ್ಲಿ. ಅಣ್ಣಾ ಮಂಡ್ಯ ಅಣ್ಣಾ.. ಅಂಬರೀಶ್ ಅಣ್ಣಾನೆ ಅಣ್ಣಾ, ನಿಮ್ಮ..' ಅಂತಾ ದರ್ಶನ್ ತೂಗುದೀಪ್ ಕೆಟ್ಟದಾಗಿ ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋದ ಪೂರ್ತಿ ಸಂಭಾಷಣೆ ಲಭ್ಯವಾಗಿಲ್ಲ. ಹೀಗಾಗಿ, ಇದೀಗ ಭಾರಿ ದೊಡ್ಡ ಚರ್ಚೆ ಶುರುವಾಗಿದೆ. ಅಲ್ಲದೆ ಇದು ದರ್ಶನ್ ತೂಗುದೀಪ್ ಅವರದ್ದೇ ವಿಡಿಯೋನಾ? ಎಂಬ ಬಗ್ಗೆ ಕೂಡ ಅನುಮಾನವೂ ಅಭಿಮಾನಿಗಳಲ್ಲಿ ಮೂಡಿದೆ. ಇನ್ನೂ ಕೆಲವರು ಇದು ಫೇಕ್ & ಎಡಿಟ್ ಮಾಡಿರುವ ವಿಡಿಯೋ ಅಂತಾ ಕೂಡ ಆರೋಪ ಮಾಡುತ್ತಿದ್ದಾರೆ.

ದರ್ಶನ್ ರಿಲೀಸ್ ಆಗುವುದು ಯಾವಾಗ?

ಅಂದಹಾಗೆ ದರ್ಶನ್ ತೂಗುದೀಪ್ ಅವರು ಇನ್ನೂ ಪರಪ್ಪನ ಅಗ್ರಹಾರ ಜೈಲಲ್ಲಿ ಪರದಾಡುತ್ತಾ ಇದ್ದಾರೆ. ಯಾಕಂದ್ರೆ ದರ್ಶನ್ ಅವರಿಗೆ ಜಾಮೀನು ನೀಡಲು ಇನ್ನು ಪೊಲೀಸರು ಚಾರ್ಜ್ ಶೀಟ್‌ ಸಲ್ಲಿಕೆ ಮಾಡಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರು. ಆ ಚಾರ್ಜ್ ಶೀಟ್‌ ಹಾಕುವ ತನಕ ಕೂಡ ಬೇಲ್ ಪಡೆಯಲು ಆಗಲ್ಲ. ದರ್ಶನ್ ಅವರ ಪರ ವಕೀಲರು ಜಾಮಿನು ಪಡೆಯೋದಕ್ಕಾಗಿ ಅರ್ಜಿ ಸಲ್ಲಿಸಲು ಆಗಲ್ಲ. ಹೀಗಾಗಿ ದರ್ಶನ್ ಅವರು ಜೈಲಿಂದ ಹೊರಬರುವುದು ಭಾರಿ ತಡವಾಗ್ತಿದ್ದು, ಆದರೆ ಶೀಘ್ರದಲ್ಲೇ ಅವರು ಹೊರಗೆ ಬರ್ತಾರೆ ಅನ್ನೋದು ಅಭಿಮಾನಿಗಳ ನಂಬಿಕೆಯಾಗಿದೆ.

ದರ್ಶನ್ & ಜೈಲು ಸಿಬ್ಬಂದಿ ಕಿತ್ತಾಟ?

ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರು ಇದ್ದಾರೆ. ಈ ರೀತಿ ವಿಐಪಿ ಸೆಲ್ ಅಂದ್ರೆ ಪ್ರಮುಖ ವ್ಯಕ್ತಿಗಳ ಜೈಲಿನ ಕೋಣೆಗಳ ಬಳಿ ಯಾವುದೇ ಖೈದಿ & ವ್ಯಕ್ತಿಗಳನ್ನ ಸುಳಿಯಲು ಕೂಡ ಬಿಡುವುದಿಲ್ಲ. ಆದರೆ ನಟ ದರ್ಶನ್ ಅವರು ಮಾತ್ರ ಇಲ್ಲಿ ಕೊಲೆ ಆರೋಪಿ ಆಗಿ ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ಇದ್ದರೂ, ಜೈಲಿನ ಕೋಣೆ ಬಿಟ್ಟು ಹೊರಬಂದು ಓಡಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ಪರಪ್ಪನ ಅಗ್ರಹಾರದಲ್ಲು ಕಿರಿಕ್ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇದೆಲ್ಲಾ ಸುಳ್ಳು ಅಂತಿದ್ದಾರೆ, ಅವರ ಸೆಲೆಬ್ರಿಟಿಗಳು ಅಂದ್ರೆ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+