Darshan Thoogudeepa: ಬಳ್ಳಾರಿ ಜೈಲಲ್ಲಿ ದರ್ಶನ್ ತೂಗುದೀಪ್‌ಗೆ ಎಸಿ ವ್ಯವಸ್ಥೆ?

ದರ್ಶನ್ ತೂಗುದೀಪ್ ಈಗ ಬಳ್ಳಾರಿ ಜೈಲಿನಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಈಗ ದರ್ಶನ್ ತೂಗುದೀಪ್ ಅವರಿಗೆ ಸಹಾಯ ಆಗಲಿ ಅಂತ ದರ್ಶನ್‌ರ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರು ಬಳ್ಳಾರಿಯಲ್ಲೇ ಮನೆ ಮಾಡಲು ಚಿಂತಿಸಿದ್ದಾರೆ. ಅದರಲ್ಲೂ ಬಳ್ಳಾರಿ ಜಿಲ್ಲೆ ಬಿಸಿಲಿಗೆ ಫೇಮಸ್ ಆಗಿದ್ದು, ಮೈಸೂರಲ್ಲಿ ಹುಟ್ಟಿ ಬೆಳೆದು & ಬೆಂಗಳೂರಲ್ಲಿ ವಾಸ ಮಾಡುತ್ತಿದ್ದ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಈಗ ಬಳ್ಳಾರಿ ಜೈಲಿನಲ್ಲಿ ಬಿಸಿಯ ಕಾಟ ಹೆಚ್ಚಾಗಿದೆ. ಇದೇ ಕಾರಣಕ್ಕೆ ಇದೀಗ ದರ್ಶನ್ ತೂಗುದೀಪ್ ಇರುವ ಕೋಣೆಗೆ ಬಳ್ಳಾರಿ ಜೈಲಿನಲ್ಲಿ ಎಸಿ ವ್ಯವಸ್ಥೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ!

ಡಿ-ಬಾಸ್ ದರ್ಶನ್ ತೂಗುದೀಪ್ ಹಣೆಬರಹ ಸರಿ ಇಲ್ಲ ಅಂತಾ ಅಭಿಮಾನಿಗಳು ಅಳುತ್ತಿದ್ದಾರೆ. ಹೌದು, ಕನ್ನಡದ ನಟ ದರ್ಶನ್ ತೂಗುದೀಪ್‌ಗೆ ಇಂಡಿಯನ್ ಟಾಯ್ಲೆಟ್ ಬಳಸಿ ಅಭ್ಯಾಸವೇ ಇಲ್ಲವಂತೆ. ಯಾಕಂದ್ರೆ ಶ್ರೀಮಂತ ಜೀವನ ನಡೆಸುತ್ತಿದ್ದ ನಟ ದರ್ಶನ್ ತೂಗುದೀಪ್ ವೆಸ್ಟರ್ನ್ ಟಾಯ್ಲೆಟ್ ಮೇಲೆ ಕೂತು, ಪ್ರತಿದಿನ ಬೆಳಗ್ಗೆ ತಮ್ಮ ನಿತ್ಯ ಕರ್ಮ ಮುಗಿಸುತ್ತಿದ್ದರು. ಆದರೆ ಏನು ಮಾಡೋದು ಈಗಿನ ಪರಿಸ್ಥಿತಿಗೆ ಸಿಲುಕಿ, ಕೊಲೆಯ ಆರೋಪಿ ಆಗಿ ಪರದಾಡುತ್ತಿದ್ದಾರೆ. ಇದರ ಜೊತೆಗೆ ಬಳ್ಳಾರಿ ಜೈಲಿನ ಊಟ ಕೂಡ ಹಿಡಿಸುತ್ತಿಲ್ಲ, ದರ್ಶನ್ ತೂಗುದೀಪ್ ಎಲ್ಲ ವಿಚಾರದಲ್ಲೂ ನರಳುತ್ತಿದ್ದಾರೆ. ಮತ್ತೊಂದು ಕಡೆ ಬಳ್ಳಾರಿ ಜೈಲಿನಲ್ಲಿ ಬಿಸಿಲಿನ ಧಗೆ ಭಾರಿ ಹೆಚ್ಚು ಅಂತಾ ಒದ್ದಾಡುತ್ತಿದ್ದ ದರ್ಶನ್ ಅವರಿಗೆ ಎಸಿ ವ್ಯವಸ್ಥೆ ಮಾಡಲಾಗಿದೆ ಎಂಬ ಭಾರಿ ಗಂಭೀರ ಆರೋಪ ಮಾಡಲಾಗಿದೆ!

Kannada Actor Darshan Thoogudeepa Is In Ballari Now

ಬಳ್ಳಾರಿ ಜೈಲಿನಲ್ಲಿ ಎಸಿ ವ್ಯವಸ್ಥೆ?

ದರ್ಶನ್ ತೂಗುದೀಪ್‌ಗೆ ಪರಪ್ಪನ ಅಗ್ರಹಾರ ಜೈಲಿನ ರೀತಿಯಲ್ಲೇ ಐಷಾರಾಮಿ ವ್ಯವಸ್ಥೆಯ ಸೃಷ್ಟಿ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಏನು ಬೇಕೋ ಅದೆಲ್ಲ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಗಣಿನಾಡು & ಬಿಸಿಲಿನ ಬೀಡು ಅಂತಾ ಕರೆಸಿಕೊಳ್ಳುವ ನಮ್ಮ ಕನ್ನಡ ನಾಡಿನ ಬಳ್ಳಾರಿಯಲ್ಲಿ ಈಗ ದರ್ಶನ್ ತೂಗುದೀಪ್ ಜೈಲು ಅತಿಥಿ ಆಗಿದ್ದಾರೆ.

ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಬಿಸಿಲಿನ ಧಗೆಯಿಂದ ರಕ್ಷಣೆ ಪಡೆಯಲು ಸಹಾಯ ಆಗಲಿ ಅಂತಾ ಕೆಲವು ಭ್ರಷ್ಟರು ಗುಟ್ಟಾಗಿ ಎಸಿ ವ್ಯವಸ್ಥೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿಯೇ ಜೈಲಿನ ಸಿಸಿ ಕ್ಯಾಮೆರಾ ಪರಿಶೀಲನೆ ಆಗಬೇಕೆಂಬ ಬೇಡಿಕೆಯನ್ನ & ಆಗ್ರಹವನ್ನ ಈಗ ಸೋಷಿಯಲ್ ಮೀಡಿಯಾದಲ್ಲಿ ಜನರು ಮಾಡುತ್ತಿದ್ದಾರೆ. ದರ್ಶನ್ ಅವರಿಗೆ ಬಳ್ಳಾರಿಯ ಜೈಲಿನ ಒಳಗೆ ಎಸಿ ವ್ಯವಸ್ಥೆ ಮಾಡಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆರೋಪ ಕೇಳಿಬಂದಿದೆ.

ದರ್ಶನ್ ಹೊರಗೆ ಬರಲು ಪ್ರಾರ್ಥನೆ!

ಒಟ್ನಲ್ಲಿ ದರ್ಶನ್ ತೂಗುದೀಪ್ ಬದುಕಿನಲ್ಲಿ ಇದೀಗ ಬಿರುಗಾಳಿ ಎದ್ದಿದ್ದು, ಎಲ್ಲಾ ರೀತಿಯ ಸಮಸ್ಯೆಗಳು ಒಂದೇ ಬಾರಿಗೆ ಎದುರಾಗುತ್ತಿವೆ. ಒಂದು ಕಡೆ ಬಳ್ಳಾರಿ ಜೈಲಲ್ಲಿ ಬಿಸಿ ತಡೆಯಲು ಆಗದೆ, ಇನ್ನೊಂದು ಕಡೆ ಬಳ್ಳಾರಿ ಜೈಲಿನ ಊಟ ಮೈಗೆ ಒಗ್ಗದೆ, ಮತ್ತೊಂದು ಕಡೆ ತನಗೆ ನೀಡಿದ ಬಳ್ಳಾರಿ ಜೈಲಿನ ಕೋಣೆಯಲ್ಲಿ ಟಾಯ್ಲೆಟ್ ವಾಸನೆ ತಡೆಯಲು ಆಗದೆ ದಾಸ ದರ್ಶನ್ ನರಳುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರ ಬಂದು ಮತ್ತೆ ಐಷಾರಾಮಿ ಜೀವನ ನಡೆಸಲಿ ಎಂಬುದೇ ಅಭಿಮಾನಿಗಳ ಆಶಯ.

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+