Darshan Thoogudeepa: ಬಳ್ಳಾರಿ ಜೈಲಲ್ಲಿ ಇದೊಂದು ವಸ್ತು ಬೇಕೆ ಬೇಕು ಅಂತಾ ಬೇಡಿಕೊಂಡ ದರ್ಶನ್ ತೂಗುದೀಪ್?
ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಈಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸೆಂಟ್ರಲ್ ಜೈಲು ಸೇರಿದ್ದಾರೆ. ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಕೂತು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲೇ ಸಿಗರೇಟ್ ಸೇದಿ, ಟೀ ಕುಡಿದ ನಟ ದರ್ಶನ್ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಹೀಗಿದ್ದಾಗ ಬಳ್ಳಾರಿ ಜೈಲಿನಲ್ಲಿ ವಿಲವಿಲ ಒದ್ದಾಡುತ್ತಿರುವ ನಟ ದರ್ಶನ್ ಅವರು, ಜೈಲಿನ ಅಧಿಕಾರಿಗಳ ಬಳಿ ಅದೊಂದು ವಸ್ತು ಬೇಕು ಸಾರ್ ಅಂತಾ ಬೇಡಿಕೊಳ್ಳುತ್ತಿದ್ದಾರಂತೆ!
ಕೋಟಿ ಕೋಟಿ ಬೆಲೆ ಬಾಳುವ ಮನೆ.. ಲ್ಯಾಂಬೋರ್ಗಿನಿ ಕಾರು.. ಮಲಗಕ್ಕೆ ಲಕ್ಷ ಲಕ್ಷ ಬೆಲೆ ಬಾಳುವ ಬೆಡ್ & ಐಷಾರಾಮಿ ಮಂಚದ ಮೇಲೆ ಮಲಗಿ ಎಂಜಾಯ್ ಮಾಡ್ತಿದ್ದ ಅಭಿಮಾನಿಗಳ ಪಾಲಿನ 'ಡಿ-ಬಾಸ್' ಇದೀಗ ಬಳ್ಳಾರಿ ಜೈಲಿನಲ್ಲಿ ಟಾಯ್ಲೆಟ್‌ನ ಗಬ್ಬು ವಾಸನೆ ಬರುವ ರೂಂ ಒಳಗೆ ಸೊಳ್ಳೆಗಳ ಕೈಯಲ್ಲಿ ಕಚ್ಚಿಸಿಕೊಂಡು ನರಳುತ್ತಿದ್ದಾರೆ. ಹೀಗಿದ್ದಾಗ, ಬೆಳಗ್ಗೆ ಎದ್ದು ತಮ್ಮ ನಿತ್ಯ ಕರ್ಮ ಮುಗಿಸಲು ಕೂಡ ದರ್ಶನ್ ಪರದಾಡುವ ಪರಿಸ್ಥಿತಿ ಇದೆ. ಇದೇ ಕಾರಣಕ್ಕಾಗಿ, ಜೈಲಿನ ಅಧಿಕಾರಿಗಳ ಎದುರು ಈಗ ದರ್ಶನ್ ತೂಗುದೀಪ್ ಅದೊಂದು ವಸ್ತು ಬೇಕೆ ಬೇಕು ಸಾರ್ ಅಂತಾ ಬೇಡಿದ್ದಾರೆ! ಹಾಗಾದ್ರೆ ದರ್ಶನ್ ತೂಗುದೀಪ್ ಬೇಡಿಕೊಂಡ ವಸ್ತು ಯಾವ್ದು? ಮುಂದೆ ಓದಿ.

ಸರ್ ಪ್ಲೀಸ್ ಅಂತಿದ್ದಾರೆ ದರ್ಶನ್!
ಡಿ-ಬಾಸ್ ದರ್ಶನ್ ತೂಗುದೀಪ್ ಹಣೆಬರಹ ಸರಿ ಇಲ್ಲ ಅಂತಾ ಅಭಿಮಾನಿಗಳು ಅಳುತ್ತಿದ್ದಾರೆ. ಹೌದು, ಕನ್ನಡದ ನಟ ದರ್ಶನ್ ತೂಗುದೀಪ್‌ಗೆ ಇಂಡಿಯನ್ ಟಾಯ್ಲೆಟ್ ಬಳಸಿ ಅಭ್ಯಾಸವೇ ಇಲ್ಲವಂತೆ. ಯಾಕಂದ್ರೆ ಶ್ರೀಮಂತ ಜೀವನ ನಡೆಸುತ್ತಿದ್ದ ನಟ ದರ್ಶನ್ ತೂಗುದೀಪ್ ವೆಸ್ಟರ್ನ್ ಟಾಯ್ಲೆಟ್ ಮೇಲೆ ಕೂತು, ಪ್ರತಿದಿನ ಬೆಳಗ್ಗೆ ತಮ್ಮ ನಿತ್ಯ ಕರ್ಮ ಮುಗಿಸುತ್ತಿದ್ದರು. ಆದರೆ ಏನು ಮಾಡೋದು ಈಗಿನ ಪರಿಸ್ಥಿತಿಗೆ ಸಿಲುಕಿ, ಕೊಲೆಯ ಆರೋಪಿ ಆಗಿ ಪರದಾಡುತ್ತಿದ್ದಾರೆ.
ಹೀಗಿದ್ದಾಗ ಬಳ್ಳಾರಿ ಜೈಲಲ್ಲಿ ದರ್ಶನ್ ತೂಗುದೀಪ್‌ಗೆ ಇಂಡಿಯನ್ ಸ್ಟೈಲ್ ಟಾಯ್ಲೆಟ್ ಇದೆ, ಅಂದ್ರೆ ಬಡವರು & ಮಧ್ಯಮ ವರ್ಗದವರ ಮನೆಯಲ್ಲಿ ಇರುವ ಟಾಯ್ಲೆಟ್ ಜೈಲಿನಲ್ಲಿ ಈಗ ದರ್ಶನ್‌ಗೆ ನೀಡಲಾಗಿದೆ. ಆದರೆ ಇದನ್ನ ಬಳಸಲು ಆಗದ ದಾಸ ದರ್ಶನ್ ತೂಗುದೀಪ್, ಈ ವಿಚಾರದಲ್ಲಿ ಜೈಲಿನ ಅಧಿಕಾರಿಗಳ ಎದುರಿಗೆ ಬೇಡಿಕೊಂಡು, ವೆಸ್ಟರ್ನ್ ಟಾಯ್ಲೆಟ್ ಮಾದರಿ ಕಮೋಡ್ ಅಂದ್ರೆ ಸರ್ಜಿಕಲ್ ಚೇರ್ ತರಿಸಿಕೊಂಡಿದ್ದಾರಂತೆ! ಇದು ಮತ್ತೊಮ್ಮೆ ಸದ್ದು ಮಾಡಿ ಸುದ್ದಿಯಾಗುತ್ತಿದೆ.
ದರ್ಶನ್ ಹೊರಗೆ ಬರಲು ಪ್ರಾರ್ಥನೆ!
ಒಟ್ನಲ್ಲಿ ದರ್ಶನ್ ತೂಗುದೀಪ್ ಬದುಕಿನಲ್ಲಿ ಇದೀಗ ಬಿರುಗಾಳಿ ಎದ್ದಿದ್ದು, ಎಲ್ಲಾ ರೀತಿಯ ಸಮಸ್ಯೆಗಳು ಒಂದೇ ಬಾರಿಗೆ ಎದುರಾಗುತ್ತಿವೆ. ಒಂದು ಕಡೆ ಬಳ್ಳಾರಿ ಜೈಲಲ್ಲಿ ಬಿಸಿ ತಡೆಯಲು ಆಗದೆ, ಇನ್ನೊಂದು ಕಡೆ ಬಳ್ಳಾರಿ ಜೈಲಿನ ಊಟ ಮೈಗೆ ಒಗ್ಗದೆ, ಮತ್ತೊಂದು ಕಡೆ ತನಗೆ ನೀಡಿದ ಬಳ್ಳಾರಿ ಜೈಲಿನ ಕೋಣೆಯಲ್ಲಿ ಟಾಯ್ಲೆಟ್ ವಾಸನೆ ತಡೆಯಲು ಆಗದೆ ದಾಸ ದರ್ಶನ್ ನರಳುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರ ಬಂದು ಮತ್ತೆ ಐಷಾರಾಮಿ ಜೀವನ ನಡೆಸಲಿ ಎಂಬುದೇ ಅಭಿಮಾನಿಗಳ ಆಶಯ.
ದರ್ಶನ್ ಬೆನ್ನಿಗೆ ಹೊಸ ಕಂಟಕ?
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.












Click it and Unblock the Notifications