ದರ್ಶನ್ ತೂಗುದೀಪ್ ಸೇವೆಗೆ ಚಿಕನ್ ಬಿರಿಯಾನಿ? ಎಣ್ಣೆ ಕೂಡ ಸಿಗ್ತಿದೆಯಾ?
ಕನ್ನಡ ನಟ ದರ್ಶನ್ ತೂಗುದೀಪ್ ಕೊಲೆ ಆರೋಪದಲ್ಲಿ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾರೆ. ಜೈಲಿನಲ್ಲಿ ನರಳುತ್ತಿರುವ ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭರ್ಜರಿ ಸೇವೆಯೇ ಸಿಗುತ್ತಿದ್ದು, ಬಿರಿಯಾನಿ & ಎಣ್ಣೆ ಸಪ್ಲೈ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ಜೈಲಿನಲ್ಲಿ ಕೊಲೆ ಆರೋಪಿಗಳಿಗೆ ಬಿರಿಯಾನಿ ಸಿಗುತ್ತಿರುವುದು ಹೇಗೆ? ಅಸಲಿ ಕಥೆ ಏನು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ದರ್ಶನ್ ವಿರುದ್ಧ ರೇಣುಕಾಸ್ವಾಮಿ ಎಂಬ ವ್ಯಕ್ತಿ ಕೊಲೆ ಕೇಸ್ ಅಂಟಿಕೊಂಡಿದ್ದು, ಈ ಕಾರಣಕ್ಕೆ ಪೊಲೀಸರ ಅತಿಥಿ ಆಗಿದ್ದ ದರ್ಶನ್ ಈಗ ಸೆಂಟ್ರಲ್ ಜೈಲಲ್ಲಿ ಮುದ್ದೆ ಮುರಿದು ನುಂಗುತ್ತಿದ್ದಾರೆ. ಹಾಗೇ ಕಂಬಿ ಎಣಿಸಿಕೊಂಡು ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬೇರೆಯದ್ದೇ ಆರೋಪ ಕೇಳಿಬರುತ್ತಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿ ನರಳಾಡುತ್ತಿರುವ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ಅವರಿಗೆ ಜೈಲಿನಲ್ಲಿ ಬಿರಿಯಾನಿ & ಎಣ್ಣೆಯನ್ನ ಕೂಡ ಸಪ್ಲೈ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆ ಬಗ್ಗೆ ತಿಳಿಯಲು ಮುಂದೆ ಓದಿ.

ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ?
ನಟ ದರ್ಶನ್ ತೂಗುದೀಪ್ ಸಾಕಷ್ಟು ಪ್ರಭಾವಿ ವ್ಯಕ್ತಿ, ದರ್ಶನ್ ಜೈಲಿನಿಂದ ಹೊರಗಡೆ ಇದ್ದಾಗ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳಿಗೆ ಕೆಲಸ ಮಾಡಿಕೊಡುತ್ತಿದ್ದರು. ಚುನಾವಣೆಯ ವೇಳೆ ಪ್ರಚಾರ ನಡೆಸಿ, ಮತದಾರರ ಗಮನ ಸೆಳೆಯಲು ಸಾಹಯ ಮಾಡುತ್ತಿದ್ದರು ಎಂಬ ಮಾತು ಇದೆ. ಈಗ ಅದೇ ರಾಜಕಾರಣಿಗಳು ನಟ ದರ್ಶನ್ ನೆರವಿಗೆ ಬಂದಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಏನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಭಾರಿ ಗಂಭೀರ ಆರೋಪ ಮಾಡಲಾಗುತ್ತಿದೆ. ಬಿರಿಯಾನಿ ಊಟದ ಜೊತೆಗೆ, ಎಣ್ಣೆ ಕೂಡ ಸಪ್ಲೈ ಆಗುತ್ತಿದೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ.
ಎಣ್ಣೆ & ಬಿರಿಯಾನಿ ಕೊಡ್ತಿರುವುದು ಯಾರು?
ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆ ಬಗ್ಗೆ ಬಿಡಿಸಿ ಹೇಳಬೇಕಿಲ್ಲ, ಯಾಕಂದ್ರೆ ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಳಿ ನಡೆದಾಗ ಗಾಂಜಾ, ಸಿಗರೇಟ್, ಲಿಕ್ಕರ್ ಹೀಗೆ ಏನೇನು ವಸ್ತುಗಳು ಸಿಗಬಾರದೋ ಅದೆಲ್ಲಾ ಸಿಕ್ಕಿತ್ತು. ಈಗಲೂ ಅಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ಜೈಲಿನ ಅಧಿಕಾರಿಗಳೇ ಸಹಾಯ ಮಾಡುತ್ತಾರೆ, ಅದರಲ್ಲೂ ಜೈಲಿನ ಒಳಗಡೆ ದುಡ್ಡು ಕೊಟ್ಟರೆ ಏನೇನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಜೈಲಿನ ಒಳಗೆ ಮಾಡ್ತಾರೆ ಎಂಬ ಆರೋಪದ ನಡುವೆ ಇದೀಗ ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ ಸಪ್ಲೈ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ.












Click it and Unblock the Notifications