Darshan Thoogudeepa: ಕೊನೆಗೂ ಇಂದು ನಟ ದರ್ಶನ್-ಪವಿತ್ರಾ ಗೌಡ ಮುಖಾಮುಖಿ ಭೇಟಿ, ಎಲ್ಲಿ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳಾದ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಅವರು ಇಂದು ಮುಖಾಮುಖಿ ಭೇಟಿಯಾಗಲಿದ್ದಾರೆ. ಈ ಕೇಸ್‌ನಲ್ಲಿ ಜೈಲು ಸೇರಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜಾಮೀನು ಸಿಕ್ಕ ನಂತರ ಇಬ್ಬರೂ ಎಲ್ಲಿಯೂ ಭೇಟಿಯಾಗಿರಲಿಲ್ಲ. ಬರೋಬ್ಬರಿ ಎರಡು ತಿಂಗಳ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಇಂದು ಭೇಟಿಯಾಗಲಿದ್ದಾರೆ. ಅದು ಎಲ್ಲಿ? ಎಂಬ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
ಪವಿತ್ರಾ ಗೌಡ ಅವರು ನಟ ದರ್ಶನ್ ಅವರ ಆಪ್ತೆ ಹಾಗೂ ಸ್ನೇಹಿತೆ. ಪವಿತ್ರಾ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ ಕಾರಣಕ್ಕೇ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕಿಡ್ನ್ಯಾಪ್ ಮಾಡಿ ಬೆಂಗಳೂರಿಗೆ ಕರೆತಂದು, ಕೊಲೆ ಮಾಡಿದ್ದರು ಎನ್ನುವ ಆರೋಪ ಇವರಿಬ್ಬರ ಮೇಲಿದೆ. ಪವಿತ್ರಾ ಅವರಿಗಾಗಿಯೇ ದರ್ಶನ್ ಅವರು ರೇಣುಕಾಸ್ವಾಮಿ ಮೇಲೆ ಕೋಪದಿಂದ ಹಲ್ಲೆ ನಡೆಸಿದ್ದರು. ಈ ವೇಳೆ ರೇಣುಕಾಸ್ವಾಮಿ ಮೃತಪಟ್ಟಿದ್ದ ಎನ್ನುವ ಆರೋಪದ ಮೇರೆಗೆ ಕಳೆದ ವರ್ಷ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು.

ಈ ಕೇಸ್‌ನಲ್ಲಿ ದರ್ಶನ್ ಹಾಗೂ ಪವಿತ್ರಾ ಇಬ್ಬರೂ ಜೈಲು ಸೇರಿ ಹಲವು ತಿಂಗಳ ಸೆರೆವಾಸದಲ್ಲಿದ್ದರು. ಕೊನೆಗೆ ಜಾಮೀನು ಸಿಕ್ಕಿದ ಮೇಲೂ ಇವರಿಬ್ಬರು ಎಲ್ಲಿಯೂ ಪರಸ್ಪರ ಭೇಟಿಯಾಗಿರಲಿಲ್ಲ. ಒಂದು ಬಾರಿ ಕೋರ್ಟ್‌ಗೆ ಮಾತ್ರ ಹಾಜರಾಗಿದ್ದು ಬಿಟ್ಟರೆ ತನ್ನ ಗೆಳತಿಯನ್ನು ದರ್ಶನ್ ಮೀಟ್ ಮಾಡಿರಲಿಲ್ಲ. ಸುಮಾರು ಎರಡು ತಿಂಗಳ ಬಳಿಕ ಇವರ ಭೇಟಿಗೆ ಸಮಯ ನಿಗದಿಯಾಗಿದೆ. ರೇಣುಕಾಸ್ವಾಮಿ ಪ್ರಕರಣವೇ ಇಂದು ಇಬ್ಬರನ್ನೂ ಭೇಟಿ ಮಾಡಿಸಲಿದೆ.
ಹೌದು ಕೊಲೆ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳು ಇಂದು ಕೋರ್ಟ್ಗೆ ಹಾಜರಾಗಲಿದ್ದಾರೆ. ಈ ಕೇಸ್‌ನ ಎಲ್ಲ 17 ಆರೋಪಿಗಳೂ ಇಂದು ಕೋರ್ಟ್‌ಗೆ ಹಾಜರಾಗಲಿದ್ದು, ಈ ವೇಳೆ ದರ್ಶನ್ ಹಾಗೂ ಪವಿತ್ರಾ ಮುಖಾಮುಖಿಯಾಗಲಿದ್ದಾರೆ. ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಈ ಕೇಸ್ ವಿಚಾರಣೆ ನಡೆಯಲಿದ್ದು, ಎಲ್ಲ ಆರೋಪಿಗಳು ಪ್ರತಿ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ. ಬೆಳಿಗ್ಗೆ 11 ಗಂಟೆಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

ದರ್ಶನ್ ಅವರು ಜಾಮೀನು ಸಿಕ್ಕ ಮೇಲೆ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆದಿದ್ದರು. ಇತ್ತ ಪವಿತ್ರಾ ಗೌಡ ಕೂಡ ಹೊರ ರಾಜ್ಯಗಳಿಗೆ ಭೇಟಿ ನೀಡಿ ದೇವಸ್ಥಾನಗಳನ್ನು ಸುತ್ತಿ ಬಂದಿದ್ದರು. ಇತ್ತೀಚೆಗೆ ಪವಿತ್ರಾ ಗೌಡ ಅವರು ತಮ್ಮ ಮೇಕಪ್ ಸ್ಟುಡಿಯೋ ರೀಲಾಂಚ್ ಮಾಡಿ ಬಿಸಿನೆಸ್‌ನಲ್ಲಿಯೂ ಬ್ಯುಸಿಯಾಗಿದ್ದಾರೆ. ದರ್ಶನ್ ಅವರು ಕೂಡ ಸಿನಿಮಾಗಳತ್ತ ಮುಖ ಮಾಡಿದ್ದಾರೆ.
ಆದರೆ, ಸ್ನೇಹಿತರಾಗಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ ಈ ಪ್ರಕರಣದ ನಂತರ ಒಮ್ಮೆಯೂ ಭೇಟಿಯಾಗದೆ ಅಚ್ಚರಿ ಮೂಡಿಸಿದ್ದರು. ಈಗ ಕೊನೆಗೆ ಇವರ ಭೇಟಿಗೆ ಕಾಲ ಕೂಡಿ ಬಂದಿದೆ. ಬರೋಬ್ಬರಿ ಎರಡು ತಿಂಗಳ ಬಳಿಕ ದರ್ಶನ್ ಹಾಗೂ ಪವಿತ್ರಗೌಡ ಮುಖಾಮುಖಿಯಾಗಿ ಭೇಟಿಯಾಗಲಿದ್ದಾರೆ. ಕೋರ್ಟ್‌ನಲ್ಲಿ ಇವರು ಭೇಟಿಯಾದಾಗ ಏನೆಲ್ಲ ಬೆಳವಣಿಗೆಗಳು ನಡೆಯಲಿವೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.












Click it and Unblock the Notifications