ಕಾಂತಾರ ರಿಷಬ್ ಶೆಟ್ಟಿ & ಕೆಜಿಎಫ್ ಪ್ರಶಾಂತ್ ನೀಲ್ ಸಿನಿಮಾ ಫಿಕ್ಸ್? ತೆಲುಗು ಲೆಜೆಂಡ್ ಜೂ.ಎನ್‌ಟಿಆರ್ ಕೂಡ ಎಂಟ್ರಿ?
ಕೆಜಿಎಫ್ & ಕಾಂತಾರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಕೊಟ್ಟು, ಪ್ರಪಂಚವೇ ಕರ್ನಾಟಕದ ಕಡೆಗೆ ತಿರುಗಿ ನೋಡುವಂತೆ ಮಾಡಿವೆ. ಹೀಗಿದ್ದಾಗ ಇಂದು ಎರಡೂ ಚಿತ್ರಗಳ ಲೆಜೆಂಡ್ ನಟ & ನಿರ್ದೇಶಕರು ಭೇಟಿ ಮಾಡಿದ್ದಾರೆ. ಅಂದಹಾಗೆ ಕಾಂತಾರ ರಿಷಬ್ ಶೆಟ್ಟಿ & ಕೆಜಿಎಫ್ ಪ್ರಶಾಂತ್ ನೀಲ್ ಭೇಟಿಯಾಗಿ ಚರ್ಚೆ ನಡೆಸಿದ್ದು, ರಿಷಬ್ ಶೆಟ್ಟಿ & ಪ್ರಶಾಂತ್ ನೀಲ್ ಸಿನಿಮಾ ಫಿಕ್ಸ್ ಆಯ್ತಾ? ಅಂತಾ ಅಭಿಮಾನಿಗಳು ಚರ್ಚೆ ಶುರು ಮಾಡಿದ್ದಾರೆ.
ಅಷ್ಟಕ್ಕೂ ತಮ್ಮ 'ದೇವರ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವ ಟಾಲಿವುಡ್‌ನ ಸ್ಟಾರ್, ಜೂ.ಎನ್‌ಟಿಆರ್ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ದಿಢೀರ್ ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ & ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಅವರನ್ನು ಮೀಟ್ ಮಾಡಿ ಚರ್ಚೆ ನಡೆಸಿದ್ದಾರಂತೆ. ಈ ಮೂಲಕ ಮೂವರು ದಕ್ಷಿಣ ಭಾರತದ ಸ್ಟಾರ್‌ಗಳ ಭೇಟಿಯು, ಇದೀಗ ದೇಶಾದ್ಯಂತ ವೈರಲ್ ಆಗುತ್ತಿದೆ. ಅಲ್ಲದೆ ಮತ್ತೊಂದು ಕಡೆ ಈ ಭೇಟಿ ಪರಿಣಾಮ, ಜೂ.ಎನ್‌ಟಿಆರ್, ಪ್ರಶಾಂತ್ ನೀಲ್ & ರಿಷಬ್ ಶೆಟ್ಟಿ ಒಟ್ಟಾಗಿ ಸಿನಿಮಾ ಮಾಡ್ತಾರಾ? ಈ ಕಾರಣಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಾ? ಅಂತಾ ಚರ್ಚೆಯೂ ನಡೆಯುತ್ತಿದೆ.

ರಿಷಬ್ ಜೊತೆ ಕಿರಗಂದೂರು ಹಾಜರ್!
ಜೂ.ಎನ್‌ಟಿಆರ್ ಅವರನ್ನ ಭೇಟಿ ಮಾಡಲು ಬೆಂಗಳೂರಿನಲ್ಲಿ ಇರುವ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮನೆಗೆ ಬಂದಿದ್ದರು ರಿಷಬ್ ಶೆಟ್ಟಿ. ರಿಷಬ್ ಅವರು ಪ್ರಶಾಂತ್ ನೀಲ್ ಅವರ ಮನೆಗೆ ದಂಪತಿ ಸಮೇತ ಆಗಮಿಸಿದ್ರು. ಹಾಗೂ ಒಂದಷ್ಟು ಸಮಯ, ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ರಿಷಬ್ ಶೆಟ್ಟಿ ಮತ್ತವರ ಪತ್ನಿ ಪ್ರಗತಿ ಶೆಟ್ಟಿ ಸಹ ಬಂದಿದ್ದರು. ಜೊತೆಗೆ ಹೊಂಬಾಳೆ ಫಿಲ್ಮ್ಸ್ ಮುಖ್ಯಸ್ಥ & ಕನ್ನಡದ ನಿರ್ಮಾಪಕ ವಿಜಯ್ ಕಿರಂಗಂದೂರು ಅವರು ಕೂಡ ಹಾಜರಿದ್ದರು. ಹೀಗಾಗಿಯೇ ಈ ಮೂವರು ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರಾ? ಎಂಬ ಅನುಮಾನ ಮೂಡಿದೆ.
ಜೂ.ಎನ್‌ಟಿಆರ್ ಜೊತೆ ನೀಲ್ ಸಿನಿಮಾ
ಈಗಾಗಲೇ ಪ್ರಶಾಂತ್ ನೀಲ್ ಅವರು, ಜೂ.ಎನ್‌ಟಿಆರ್ ಅವರ ಜೊತೆಗೆ ಸಿನಿಮಾ ಮಾಡ್ತಾ ಇದ್ದಾರೆ. ಪ್ರಶಾಂತ್ ನೀಲ್ ಮತ್ತು ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿದೆ. ಅದರ ಕೆಲಸಕ್ಕೆ ಅಂತಾನೆ ಜೂ.ಎನ್‌ಟಿಆರ್ ಅವರು ಬೆಂಗಳೂರಿಗೆ ಬಂದಿದ್ದರೆಂದು ಹೇಳಲಾಗುತ್ತಿದೆ. ಸದ್ಯಕ್ಕೆ, ಜೂ.ಎನ್‌ಟಿಆರ್ ಅವರು 'ದೇವರ: ಪಾರ್ಟ್-1' (Devara) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದ್ಕಡೆ ಪ್ರಶಾಂತ್ ನೀಲ್ ಅವರು ತಮ್ಮ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಈ ಸಿನಿಮಾ ಮುಗಿದ ನಂತರ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಿದ್ದಾರೆ. ಹೀಗಾಗಿ ಜೂ.ಎನ್‌ಟಿಆರ್ ಸಿನಿಮಾ ಭಾರಿ ಕುತೂಹಲವನ್ನು ಕೆರಳಿಸಿದೆ.

ಜೂ.ಎನ್‌ಟಿಆರ್ ಜೊತೆ ರಿಷಬ್ ಸಿನಿಮಾ?
ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಜೂ.ಎನ್‌ಟಿಆರ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ನಟನೆ ಮಾಡುತ್ತಾರಾ? ಅನ್ನೋ ಕುತೂಹಲ ಹೆಚ್ಚಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಇಷ್ಟೆಲ್ಲಾ ಇದ್ದರೂ ಜೂ.ಎನ್‌ಟಿಆರ್, ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ & ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಭೇಟಿ ಮಾಡಿ ಚರ್ಚೆ ಮಾಡಿರುವುದು ಈಗ ಕುತೂಹಲ ಡಬಲ್ ಮಾಡಿದೆ.
'ಕಾಂತಾರ' ಮೂಲಕ ದೊಡ್ಡ ತಿರುವು
2022ರಲ್ಲಿ ರಿಲೀಸ್ ಆದ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿದ್ದ 'ಕಾಂತಾರ' ದೊಡ್ಡ ಸಕ್ಸಸ್ ಪಡೆದಿತ್ತು. ಈ ಸಿನಿಮಾ ಮೂಲಕ ರಿಷಬ್ ಇದೀಗ ಪ್ಯಾನ್ ಇಂಡಿಯಾ ಮೀರಿ, ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದಾರೆ. ಸದ್ಯ ರಿಷಬ್, 'ಕಾಂತಾರಾ ಎ ಲೆಜೆಂಡ್: ಅಧ್ಯಾಯ 1'ರ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಿಷಬ್ ಶೆಟ್ಟಿ, ಬಾಲಿವುಡ್‌ನ ಖ್ಯಾತ ನಿರ್ದೇಶಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ ಎಂಬ ಸುದ್ದಿ ಕೂಡ ಓಡಾಡುತ್ತಿದೆ. ಹೀಗಿದ್ದಾಗ ಜೂ.ಎನ್‌ಟಿಆರ್ ಅವರ ಜೊತೆಗೆ ರಿಷಬ್‌ರ ಭೇಟಿ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.












Click it and Unblock the Notifications