Ugram Manju: ಬಿಗ್‌ ಬಾಸ್‌ ಕನ್ನಡ ವಿನ್ನರ್‌ ಆಗ್ತಾರಾ ಉಗ್ರಂ ಮಂಜು?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಕೊನೆಯ ವಾರಕ್ಕೆ ಕಾಲಿಟ್ಟಿದೆ. ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್‌ ಬಾಸ್‌ ಸ್ಪರ್ಧಿಗಳು ಈಗ ಫಿನಾಲೆ ವಾರಕ್ಕೆ ಕಾಲಿಟ್ಟಿರುವ ಖುಷಿಯಲ್ಲಿದ್ದಾರೆ. ರಜತ್‌, ತ್ರಿವಿಕ್ರಮ್‌, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.

ಗ್ರ್ಯಾಂಡ್‌ ಫಿನಾಲೆಗೆ ಇನ್ನೇನು ಐದೇ ಐದು ದಿನಗಳು ಬಾಕಿಯಿದ್ದು, ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ವಿನ್ನರ್‌ ಯಾರಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಉಳಿದ ಆರು ಜನರ ಪೈಕಿ ಪ್ರತಿಯೊಬ್ಬರು ಕೂಡ ಗೆಲುವಿಗೆ ಅರ್ಹತೆ ಇರುವವರಾಗಿದ್ದಾರೆ. ಹೀಗಾಗಿ ಕಳೆದ ಎಲ್ಲಾ ಸೀಜನ್‌ಗಳಂತೆ ಈ ಬಾರಿ ಇವರೇ ಗೆಲುವು ಸಾಧಿಸಬಹುದು ಎಂದು ಊಹಿಸುವುದು ಕಷ್ಟ ಸಾಧ್ಯವಾಗಿದೆ.

Is Ugram Manju The Winner Of Bigg Boss Kannada Season 11

ರಜತ್‌, ತ್ರಿವಿಕ್ರಮ್‌, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಪೈಕಿ ಉಗ್ರಂ ಮಂಜು ಗೆಲುವಿಗೆ ಹತ್ತಿರವಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿ ಉಗ್ರಂ ಮಂಜು ಎಂದು ಗುರುತಿಸಿಕೊಂಡಿದ್ದ ನಟ ಮಂಜುನಾಥ ಗೌಡ, ಇದೀಗ ಕನ್ನಡಿಗರ ಪಾಲಿನ ಪ್ರೀತಿಯ ಮಂಜಣ್ಣ.

ಒಬ್ಬ ಬಲಿಷ್ಠ ಬಿಗ್‌ ಬಾಸ್‌ ಸ್ಪರ್ಧಿಗೆ ಇರಬೇಕಾದಂತಹ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಉಗ್ರಂ ಮಂಜು ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಆರಂಭದಲ್ಲಿಯೇ ಇವರು ಪಕ್ಕಾ ಫಿನಾಲೆ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದರು. ಉಗ್ರಂ ಮಂಜು ಗುಡುಗಿಗೆ ಎದುರು ನಿಲ್ಲುವವರು ಯಾರೂ ಇರಲಿಲ್ಲ. ಅಲ್ಲದೇ ಆಟದಲ್ಲಿ ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತಿದ್ದ ಉಗ್ರಂ ಮಂಜು ಗ್ರೇ ಏರಿಯಾ ಕಿಂಗ್‌ ಅಂತಾ ಕರೆಸಿಕೊಂಡರು. ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿದ್ದ ಉಗ್ರಂ ಮಂಜು ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದರು.

Is Ugram Manju The Winner Of Bigg Boss Kannada Season 11

ಭಾವನಾತ್ಮಕ ಜೀವಿ ಮಂಜಣ್ಣ

ಹೆಸರಿನಲ್ಲಿ ಉಗ್ರತೆ ಇಟ್ಟುಕೊಂಡಿರುವ ಉಗ್ರಂ ಮಂಜು ಸ್ವಭಾವದಲ್ಲಿ ಭಾವನಾತ್ಮಕ ಜೀವಿ. ಮೊದಲಿನಿಂದಲೂ ಬಿಗ್‌ ಬಾಸ್‌ ಇತರ ಸ್ಪರ್ಧಿಗಳ ಜೊತೆ ಒಳ್ಳೆಯ ಸ್ನೇಹ ಬೆಳೆಸಿಕೊಂಡಿದ್ದ ಮಂಜು, ತಮ್ಮ ಸ್ವಭಾವದ ಮೂಲಕ ಎಲ್ಲರಿಗೂ ಆತ್ಮೀಯರಾಗಿದ್ದರು. ಮೊದಲ ದಿನಗಳಲ್ಲಿ ಕುಟುಂಬಸ್ಥರಿಂದ ಪತ್ರ ಹಾಗೂ ಊಟ ಬರುವ ದಿನ ಐಶ್ವರ್ಯಾ ಸಿಂಧೋಗಿ ಯಾರೂ ತನಗೆ ಪತ್ರ ಬರೆದಿಲ್ಲ, ಊಟ ಕಳುಹಿಸಿಲ್ಲ ಎಂದು ತೀವ್ರ ನೊಂದುಕೊಂಡಿದ್ದರು. ಈ ವೇಳೆ ಮಂಜು ತಮಗೆ ಬಂದ ಊಟವನ್ನು ಐಶ್ವರ್ಯಾ ಹೆಸರು ಅಂಟಿಸಿ ಆಕೆಗೆ ನೀಡಿದ್ದರು.

Is Ugram Manju The Winner Of Bigg Boss Kannada Season 11

ಇನ್ನು ಗೌತಮಿ, ಮೋಕ್ಷಿತಾ ಹಾಗೂ ತ್ರಿವಿಕ್ರಮ್‌ ಜೊತೆ ಮಂಜು ಉತ್ತಮ ಸ್ನೇಹ ಹೊಂದಿದ್ದರು. ಇನ್ನು ಫಿನಾಲೆ ವಾರದಲ್ಲಿ ಬಿಗ್‌ ಬಾಸ್‌ ನೀಡಿದ ಕೋರಿಕೆ ಅವಕಾಶದಲ್ಲಿಯೂ ಸಹ ಇತರ ಸ್ಪರ್ಧಿಗಳು ತಮಗೆ ಏನು ಬೇಕು ಎಂದು ಕೇಳಿಕೊಂಡರೆ ಮಂಜು ಮಾತ್ರ ಈ ಹಿಂದೆ ತಮ್ಮ ತಂದೆ-ತಾಯಿ ಬಂದಾಗ ತಂದ ಊಟವನ್ನು ಮನೆಯಲ್ಲಿ ಇರುವವರು ತುಂಬಾ ಇಷ್ಟಪಟ್ಟಿದ್ದಾರೆ. ಹೀಗಾಗಿ ಮತ್ತೊಮ್ಮೆ ಎಲ್ಲರಿಗೂ ಅದನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಆಟ ಹಾಗೂ ವ್ಯಕ್ತಿತ್ವ ಎರಡರಲ್ಲಿಯೂ ಜನರಿಂದ ಉತ್ತಮ ಗಳಿಸಿರುವ ಉಗ್ರಂ ಮಂಜು ಗೆಲುವಿಗೆ ಹತ್ತಿರವಿದ್ದಾರೆ ಎನ್ನುವುದು ಕೆಲ ಬಿಗ್‌ ಬಾಸ್‌ ಪ್ರೇಕ್ಷಕರ ಅಭಿಪ್ರಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+