Sumalatha Ambareesh: ಮಗನನ್ನು ಜೈಲಿನಿಂದ ಬಿಡಿಸಿಕೊಂಡು ಬರುವ ಪ್ರಯತ್ನದಲ್ಲಿದ್ದಾರಾ ಸುಮಲತಾ ಅಮ್ಮ?

ಬೆಂಗಳೂರು ಜೂನ್ 29: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ನೋಡಲು ಸುಮಲತಾ ಅಂಬರೀಷ್ ಈವರೆಗೂ ಹೋಗೇ ಇಲ್ಲ. ರಾಕ್‌ಲೈನ್ ವೆಂಕಟೇಶ್ ಕೂಡ ದರ್ಶನ್ ನೋಡಲು ಜೈಲಿಗೆ ಹೋಗಿರುವ ಸುದ್ದಿಗಳಿಲ್ಲ.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಪರ ಪ್ರಚಾರ ಮಾಡಿದ್ದ ದರ್ಶನ್ ಈಗ ಒಂಟಿಯಾಗಿಬಿಟ್ಟಿದ್ದಾರೆ. ದರ್ಶನ್ ಅವರು ಈ ಹಿಂದೆ ಸುಮಲತಾ ಅಂಬರೀಷ್ ಅವರನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಲು ಭಾರೀ ಶ್ರಮಿಸಿದ್ದರು.

Is Sumalatha Amma trying to get her son Darshan out of jail

ಆದರೆ ದರ್ಶನ್ ತೂಗುದೀಪ್ ಅವರು ಸದ್ಯ ಏಕಾಂಗಿಯಾಗಿಬಿಟ್ಟಿದ್ದಾರೆ. ಇತ್ತ ಅವರನ್ನು ನೋಡಲು ಪತ್ನಿ ಹಾಗೂ ಮಗ ಬಿಟ್ಟರೆ ಅವರ ಪೋಷಕರು ಜೈಲು ಬಳಿ ಸುಳಿದಿಲ್ಲ. ಮತ್ತೊಂದೆಡೆ ಮಂಡ್ಯದ ಮಾಜಿ ಸಂಸದೆ ಸುಮಲತಾ ಕೂಡ ದರ್ಶನ್ ಅವರನ್ನು ನೋಡಲು ಜೈಲು ಬಳಿ ಕಾಣಿಸಿಕೊಂಡಿಲ್ಲ. ದರ್ಶನ್ ಅವರು ಸುಮಲತಾ ಅವರನ್ನು ಅಮ್ಮಾ... ಅಂತಲೇ ಕರೆಯುತ್ತಿದ್ದರು. ಅಂಬರೀಷ್ ಅವರು ಅಗಲಿದ ನಂತರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಅವರನ್ನು ಗೆಲ್ಲಿಸಲು ದರ್ಶನ್ ಸಾಕಷ್ಟು ಶ್ರಮಿಸಿದ್ದರು.

ಮಂಡ್ಯದ ಬಹುತೇಕ ಕಡೆ ದರ್ಶನ್ ಸುಮಲತಾ ಅವರೊಂದಿಗೆ ಪ್ರಚಾರದಲ್ಲಿ ಭಾಗವಹಿಸಿದ್ದರು. ಸುಮಲತಾ ಅವರು ಮೊದಲ ಬಾರಿಗೆ ಸ್ಪರ್ಧಿಸಿ ಮಂಡ್ಯದಲ್ಲಿ ಜಯ ಸಾಧಿಸಿದ್ದರೆ ಅದರಲ್ಲಿ ದರ್ಶನ್ ಅವರದ್ದೂ ಪಾಲಿದೆ. ಮಾತ್ರವಲ್ಲದೆ ವಿರೋಧ ಪಕ್ಷದವರು ಸುಮಲತಾ ಅವರ ಬಗ್ಗೆ ಮಾತನಾಡಿದರೆ, ದರ್ಶನ್ ಅವರಿಗೆ ಗೆಲುವಿನ ಮೂಲಕವೇ ಉತ್ತರ ನೀಡಿದ್ದರು.

Is Sumalatha Amma trying to get her son Darshan out of jail

ಸುಮಲತಾ ಅವರನ್ನು ಗೆಲ್ಲಿಸಲೇಬೇಕು ಎನ್ನುವ ಛಲದಿಂದ ನಿಂತಿದ್ದ ದಾಸ ಕೊನೆಗೂ ಗೆಲುವು ಸಾಧಿಸಿಯೇ ಬಿಟ್ಟರು. ಆದೀಗ ಅವರು ಜೈಲಿನಲ್ಲಿ ಒಂಟಿಯಾಗಿ ಮುದ್ದೆ ಊಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ಸಂದರ್ಭದಲ್ಲಿ ಜೊತೆಯಾಗಿದ್ದ ರಾಕ್‌ಲೈನ್‌ ವೆಂಕಟೇಶ್ ಕೂಡ ದರ್ಶನ್ ಬಗ್ಗೆ ಮಾತನಾಡುತ್ತಿಲ್ಲ. ಇದರಿಂದಾಗಿ ಸುಮಲತಾ ಹಾಗೂ ರಾಕ್‌ಲೈನ್‌ ವೆಂಕಟೇಶ್ ಅವರು ತೆರೆಮರೆಯಲ್ಲಿ ದರ್ಶನ್ ಬಿಡುಗಡೆಗೆ ಪ್ರಯತ್ನ ನಡೆಸಿರಬಹುದು ಎನ್ನುವ ಅನುಮಾನ ಶುರುವಾಗಿದೆ.

ಯಾಕೆಂದರೆ ದರ್ಶನ್ ಅವರ ಬಗ್ಗೆ ಸುಮಲತಾ ಮಾಧ್ಯಮದಲ್ಲಿ ಮಾತನಾಡುವುದು ಇರಲಿ ಅವರನ್ನು ನೋಡಲು ಜೈಲಿಗೆ ಹೋಗಿರುವುದು ಕೂಡ ಕಂಡು ಬಂದಿಲ್ಲ. ಹೀಗಾಗಿ ಸಮಲತಾ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರು ದರ್ಶನ್ ಅವರ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬಹುದು ಎನ್ನಲಾಗುತ್ತಿದೆ. ಜೊತೆಗೆ ದರ್ಶನ್ ಅವರನ್ನು ಬಿಡಿಸಿಕೊಂಡು ಬರುವ ಪ್ರಯತ್ನದಲ್ಲಿ ಇರಬಹುದು ಎನ್ನಲಾಗುತ್ತಿದೆ.

ಚುನಾವಣೆ, ಸಿನಿಮಾ ಬಗ್ಗೆ ಯಾರೇ ಏನೇ ಮಾತನಾಡಲಿ ಸುಮಲತಾ ಗೆಲುವಿನ ಮೂಲಕ ಉತ್ತರ ಕೊಟ್ಟವರು. ಯಾರು ಏನೇ ಮಾತನಾಡಲಿ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತಮ್ಮ ಪ್ರಯತ್ನ ಶ್ರಮದ ಮೂಲಕ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದರು. ಆಗ ಹೆಗಲಾಗಿದ್ದ ಮಗ(ದರ್ಶನ್) ಈಗ ಜೈಲಿನಲ್ಲಿದ್ದಾರೆ. ಮಗನನ್ನು ತಾಯಿ ಬಿಡಿಸಿಕೊಂಡು ಬರುವ ಪ್ರಯತ್ನದಲ್ಲಿ ಇರಬಹುದು ಎಂದು ಅಭಿಮಾನಿಗಳಿಗೆ ಅನುಮಾನ ಶುರುವಾಗಿದೆ.

ಯಾಕೆಂದರೆ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಯಾರು ಏನೇ ಮಾತನಾಡಲಿ ಸುಮಲತಾ ಮಾತ್ರ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಮೈನವಾಗಿರುತ್ತಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನೇರವಾಗಿ ಹೇಳಿಬಿಡುತ್ತಿದ್ದರು. ಅದೇ ಮೌನವನ್ನು ದರ್ಶನ್ ವಿಚಾರದಲ್ಲಿ ಸುಮಲತಾ ತಾಳಿದ್ದಾರೆ. ಅವರು ಸತ್ಯಾಸತ್ಯತೆ ಬಯಲಾಗುವುದನ್ನು ಕಾಯುತ್ತಿರಬಹುದು ಎಂದು ಹೇಳಲಾಗುತ್ತಿದೆ. ಅಥವಾ ಮಗನನ್ನು ಬಿಡಿಸಿಕೊಂಡು ಬರುವ ಪ್ರಯತ್ನದಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ.

ಆದರೆ ದರ್ಶನ್ ಕೊಲೆ ಮಾಡಿರುವುದು ಸತ್ಯ ಎನ್ನುವುದಕ್ಕೆ ಬಲವಾದ ಸಾಕ್ಷಿಗಳು ಲಭ್ಯವಾಗಿವೆ ಎನ್ನಲಾಗುತ್ತಿದೆ. ಶೆಡ್ಡಿನಲ್ಲಿನ ಸಿಸಿಟಿವಿ ದೃಶ್ಯಗಳು, ರೇಣುಕಾಸ್ವಾಮಿ ಕಾಮೆಂಟ್, ದರ್ಶನ್ ಶೆಡ್ಡಿಗೆ ಆಗಮಿಸಿದ ದೃಶ್ಯ ಇವೆಲ್ಲಾ ಸಾಕ್ಷಿಗಳು ಪೊಲೀಸರ ಬಳಿ ಸುರಕ್ಷಿತವಾಗಿವೆ. ಹೀಗಾಗಿ ಪ್ರಕರಣದಲ್ಲಿ ದರ್ಶನ್ ಕೊಲೆ ಮಾಡಿರುವುದು ಸಾಬೀತಾದರೆ ದರ್ಶನ್ ಹೊರಬರುವುದು ಕಷ್ಟ ಎನ್ನಲಾಗುತ್ತಿದೆ.

ಹೀಗಾಗಿ ಮಾಜಿ ಸಂಸದೆ ಸುಮಲತಾ ಹಾಗೂ ರಾಕ್‌ಲೈನ್‌ ವೆಂಕಟೇಶ್ ಅವರು ದರ್ಶನ್ ತೂಗುದೀಪ್ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಬರುತ್ತಾರಾ? ಅಥವಾ ಅಂತರ ಕಾಯ್ದುಕೊಳ್ಳುತ್ತಾರಾ? ದರ್ಶನ್ ಹೊರಬರಲು ಅವರೂ ಕೂಡ ಸಹಾಯ ಮಾಡುತ್ತಾರಾ ಕಾದು ನೋಡಬೇಕಿದೆ.

ಜೈಲಿಗೆ ಹೋಗಿ ದರ್ಶನ್ ಭೇಟಿಯಾದ ರಕ್ಷಿತಾ ಪ್ರೇಮ್

ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಶನಿವಾರ ನಟಿ ರಕ್ಷಿತಾ ಪ್ರೇಮ್ ತೆರಳಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಕ್ಷಿತಾ, 'ಇದರ ಬಗ್ಗೆ ಏನು ಮಾತಾನಾಡುವುದಿಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ' ಎಂದರು. ದರ್ಶನ್ ಆರಾಮಾಗಿದ್ದಾರಾ ಎಂಬ ಪ್ರಶ್ನೆಗೆ ರಕ್ಷಿತಾ,' ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಆರಾಮಾಗಿ ಇರುತ್ತಾರಾ' ಎಂದು ಭಾವುಕರಾದರು. ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿ, 'ನ್ಯಾಯಾಲಯದಲ್ಲಿರುವ ಕಾರಣ ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+