ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಜೊತೆ ಶಾರುಖ್ ಖಾನ್ ಸಿನಿಮಾ ಫಿಕ್ಸ್?

ಯಶ್ ಅಂದ್ರೆ ಇದೀಗ ಕರ್ನಾಟಕ ಮಾತ್ರವಲ್ಲದೆ, ಜಗತ್ತಿನಾದ್ಯಂತ ಹವಾ ಇದೆ. ಕನ್ನಡಿಗರ ಕೋಟೆಯಿಂದ ಹೋದ ಈ ಹೀರೋ ಈಗ ಹಾಲಿವುಡ್ ಲೆವೆಲ್‌ಗೆ ಬೆಳೆದು ನಿಂತಿದ್ದಾರೆ. ಈ ಮೂಲಕ ನಟ ಯಶ್ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿದೆ. 'ಕೆಜಿಎಫ್' ಮೂಲಕ 'ಪ್ಯಾನ್ ಇಂಡಿಯಾ' ಸ್ಟಾರ್ ಆಗಿದ್ದ ಯಶ್ ಈಗ 'ಟಾಕ್ಸಿಕ್' ಮೂಲಕ ಹಾಲಿವುಡ್ ಸ್ಟಾರ್ ಆಗಲು ಸಜ್ಜಾಗಿದ್ದಾರೆ. ಆದರೆ ಇದೇ ಸಮಯದಲ್ಲಿ ಶಾರುಖ್ ಖಾನ್ ಜೊತೆಗೂ ಯಶ್ ಸಿನಿಮಾವನ್ನು ಮಾಡ್ತಾರೆ ಅನ್ನೋ ಬ್ರೇಕಿಂಗ್ ನ್ಯೂಸ್ ಈಗ ಓಡಾಡ್ತಿದೆ!

ಅಂದಹಾಗೆ ನಿತೇಶ್ ತಿವಾರಿ ಬಾಲಿವುಡ್‌ನಲ್ಲಿ ಈಗ 'ರಾಮಾಯಣ' ಸಿನಿಮಾ ಮಾಡುತ್ತಿದ್ದು ಈ ಭರ್ಜರಿ ಪ್ರಾಜೆಕ್ಟ್‌ನಲ್ಲಿ ರಾಕಿಭಾಯ್ ಯಶ್ ರಾವಣ ಆಗಲಿದ್ದಾರಂತೆ. ಹೀಗೆ ರಾಕಿಭಾಯ್ ಯಶ್ ಅವರ ಪ್ರಾಜೆಕ್ಟ್‌ಗಳ ಕುರಿತು ಹಲವು ಸುದ್ದಿಗಳು ಓಡಾಡುವಾಗಲೇ, ಯಶ್ ಇದಕ್ಕೆಲ್ಲ ರಿಯಾಕ್ಷನ್ ಕೊಡದೆ ಯಶ್-19 ಅಂದ್ರೆ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಇದೇ ಸಮಯದಲ್ಲಿ ಮತ್ತೊಂದು ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಅದು ಏನೆಂದರೆ ರಾಕಿಂಗ್ ಸ್ಟಾರ್ ಯಶ್ ಅವರು ಶಾರುಖ್ ಖಾನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರಂತೆ.

Is KGF Star Yash And Shah Rukh Khan Sharing Screen in Big Bollywood Project?

ಯಶ್ + ಶಾರುಖ್ ಜೋಡಿ ಫಿಕ್ಸ್?

ಹೌದು ಇದೀಗ ತಮ್ಮ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿ ಇರುವ ನಟ ಯಶ್ ಅವರು ಮುಂದೆ ಮತ್ತೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳಲಿದ್ದಾರಂತೆ. ಅದರಲ್ಲೂ ಶಾರುಖ್‌ರ ಜೊತೆಗೆ ಸಿನಿಮಾ ಮಾಡಲು ಯಶ್ ಮನಸ್ಸು ಮಾಡಿದ್ದಾರಂತೆ. ಯಶ್ & ಶಾರುಖ್ ಖಾನ್ ಸಿನಿಮಾ ಬಗ್ಗೆ ಇದೀಗ ಮುಂಬೈ ಮೂಲಗಳು ಮಾತನಾಡುತ್ತಿವೆ. ಹೀಗಾಗಿ ಯಶ್ ಸಿನಿಮಾ ಬಗ್ಗೆ ಭಾರಿ ಸದ್ದು ಮೊಳಗಿದೆ. ಮತ್ತೊಂದ್ಕಡೆ ಇಬ್ರೂ ನಟರು ಒಟ್ಟಿಗೆ ಕೆಲಸ ಮಾಡಲು ಆಸಕ್ತಿ ಹೊಂದಿದ್ದು ಸರಿಯಾದ ಸ್ಕ್ರಿಪ್ಟ್ ಸಿಗಲಿ ಅಂತಾ ಕಾಯುತ್ತಿದ್ದಾರಂತೆ.

ಶಾರುಖ್‌ ಖಾನ್‌ಗೂ ಯಶ್ ಇಷ್ಟ!

ಅಷ್ಟಕ್ಕೂ ಯಶ್ ಅವರನ್ನ ಕಂಡರೆ ಸಿನಿಮಾ ಇಂಡಸ್ಟ್ರಿಗೆ ಕೂಡ ಸಿಕ್ಕಾಪಟ್ಟೆ ಇಷ್ಟವಾಗುತ್ತೆ ಮತ್ತು ಅವರ ಜೊತೆ ಸಿನಿಮಾ ಮಾಡುವ ಮನಸ್ಸು ಕೂಡ ಆಗುತ್ತೆ. ಯಾಕಂದ್ರೆ ಯಶ್ ಅವರ ಕೆಪಾಸಿಟಿ ಹಂಗಿದೆ ಅಂತಾರೆ ಅಭಿಮಾನಿಗಳು. ಅದರಲ್ಲೂ ಬಾಲಿವುಡ್ ಬಾದ್ ಷಾ ಅಂತಾ ಬಿರುದು ಪಡೆದಿರುವ ನಟ ಶಾರುಖ್ ಖಾನ್ ಅವರಿಗೂ, ಯಶ್ ಅವರನ್ನ ಕಂಡರೆ ತುಂಬಾ ಇಷ್ಟವಂತೆ. ಈ ಕಾರಣಕ್ಕೆ ಶಾರುಖ್ ಕೂಡ ಯಶ್ ಜೊತೆ ಸಿನಿಮಾ ಮಾಡಲು ಒಪ್ಪಿಗೆಯನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಸುದ್ದಿಗಳು ಇನ್ನೂ ಅಧಿಕೃತ ಆಗಿಲ್ಲ, ಹೀಗಾಗಿಯೇ ಯಶ್ & ಶಾರುಖ್ ಕಾಂಬಿನೇಷನ್ ಬಗ್ಗೆ ಕುತೂಹಲ ಡಬಲ್ ಆಗಿದೆ.

ಡ್ರಗ್ಸ್ ಲೋಕದ ಕಥೆ ಹೇಳುತ್ತಾರಾ?

ಟೈಟಲ್ ಮೂಲಕವೇ ಗಮನ ಸೆಳೆದಿರುವ ಯಶ್ ಸಿನಿಮಾ ಟಾಕ್ಸಿಕ್, ಅಬ್ಬರದಿಂದ ಶೂಟಿಂಗ್‌ನ ಮುಂದುವರಿಸಿದೆ. ಇದಕ್ಕಾಗಿ ಹುಟ್ಟುಹಬ್ಬದ ಆಚರಣೆ ಸಮಯದಲ್ಲೂ, ಅಭಿಮಾನಿಗಳಿಂದ ದೂರ ಉಳಿದಿದ್ದರು ಯಶ್. ಯಶ್ ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾ ವಿಭಿನ್ನವಾಗಿ, ಕಲರ್ ಫುಲ್ ಆಗಿ ಮಾಡ್ತಾರೆ ಹೀಗಾಗಿ ಮುಂದಿನ ಸಿನಿಮಾಗೆ ಸಾಕಷ್ಟು ಸಮಯ ತೆಗೆದುಕೊಂಡು 19ನೇ ಸಿನಿಮಾ ಟೈಟಲ್‌ಗೆ 'ಟಾಕ್ಸಿಕ್' ಎಂದು ಹೆಸರು ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಗೋವಾ ಡ್ರಗ್ಸ್ ಲೋಕದ 1960-70ರ ಕಥೆ ಹೇಳಲು ನಟ ಯಶ್ ಹೊರಟಿದ್ದಾರೆ ಅಂತಾ ಹೇಳಲಾಗಿದೆ.

Is KGF Star Yash And Shah Rukh Khan Sharing Screen in Big Bollywood Project?

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆ ಸೇರಿ, ಈಗ ಯಶ್ ಕಮಾಲ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಗೀತು ಮೋಹನ್‌ದಾಸ್ ಡೈರೆಕ್ಷನ್ ಮಾಡಿರುವ, 'ಲೈಯರ್ಸ್​ ಡೈಸ್​' ಸಿನಿಮಾ 87ನೇ ಆಸ್ಕರ್​ ಪ್ರಶಸ್ತಿ ಸ್ಪರ್ಧೆಗೆ, ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿತ್ತು. ಈ ಸಿನಿಮಾಗೆ 2 ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿವೆ. ಇದೇ ಹಿನ್ನೆಲೆ, ಟಾಕ್ಸಿಕ್ ಮೇಲಿನ ಕುತೂಹಲ ಡಬಲ್ ಆಗುತ್ತಿದೆ. ಇದರ ಜೊತೆಗೆ ಯಶ್ ಮತ್ತು ಶಾರುಖ್ ಜೊತೆಯಾಗಿ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಕೂಡ ಹಲ್‌ಚಲ್ ಎಬ್ಬಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+