‘ಡಿ-ಬಾಸ್’ ದರ್ಶನ್ ಅವರ ಅಭಿಮಾನಿಗಳು ಈ ಸುದ್ದಿ ಮಿಸ್ ಮಾಡಬೇಡಿ!
ಫೆಬ್ರವರಿ 16 ಬಂದೇ ಬಿಟ್ಟಿದ್ದು, ನಾಳೆಯ ದಿನವನ್ನು ದರ್ಶನ್ ಅವರ ಫ್ಯಾನ್ಸ್ ಎಂದೆಂದಿಗೂ ಮರೆಯಲಾಗದು. ಯಾಕಂದ್ರೆ ಇದೇ ದಿನ ನಟ ದರ್ಶನ್ ಅವರು ಜನಿಸಿದ್ದು, ಹೀಗಾಗಿ ಫ್ಯಾನ್ಸ್ ಫೆಬ್ರವರಿ 16ನ್ನು ಅತ್ಯಂತ ಸಂಭ್ರಮ ಮತ್ತು ಸಡಗರದ ಮೂಲಕ ಆಚರಿಸುತ್ತಾರೆ. ಆದರೆ ಇದೇ ಸಮಯದಲ್ಲಿ ದರ್ಶನ್ ಅವರ ಬಗ್ಗೆ ನಿಮಗೆ ತಿಳಿಯದ ಅಚ್ಚರಿಯ ಸಂಗತಿಗಳು ಇಲ್ಲಿವೆ ಬನ್ನಿ ತಿಳಿಯೋಣ.
ಕನ್ನಡಿಗರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಖಾಡದಲ್ಲಿ ಮಾತ್ರ ಶತ್ರುಗಳನ್ನು ಪುಡಿ ಮಾಡಿಲ್ಲ, ನಿಜ ಬದುಕಿನಲ್ಲಿ ಕೂಡ ಸಾಕಷ್ಟು ಶತ್ರುಗಳನ್ನ ಎದುರಿಸಿದ್ದಾರೆ. ಹೀಗೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಗೆದ್ದು ನಿಂತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ದೊಡ್ಡ ಹೆಸರು ಮಾಡಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಡಿ-ಬಾಸ್ ದರ್ಶನ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಹೀಗೆ, ನಟ ದರ್ಶನ್ ಅವರಿಗೆ ದೊಡ್ಡ ಫ್ಯಾನ್ ಫಾಲೋವರ್ಸ್ ಇದೆ. ಹಾಗಾದ್ರೆ ನಟ ದರ್ಶನ್ ಅವರ ಬಗ್ಗೆ ನಿಮಗೆ ಗೊತ್ತೇ ಇರದ ಸಂಗತಿಗಳನ್ನು ಇಲ್ಲಿ ತಿಳಿಯಿರಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟೂರು
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟಿದ ಊರು ಮೈಸೂರು ಅಲ್ಲ. ಆದರೆ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯಲ್ಲಿ. ನಟ ದರ್ಶನ್ ಅವರ ತಂದೆ ಕನ್ನಡ ಸಿನಿ ರಂಗ ಕಂಡ ಅತ್ಯಂತ ಶ್ರೇಷ್ಠ ನಟ ತೂಗುದೀಪ ಶ್ರೀನಿವಾಸ್ ಅವರು, ದರ್ಶನ್‌ರ ತಾಯಿಯವರು ಮೀನಾ ತೂಗುದೀಪ. ಹೀಗೆ ಶ್ರೀನಿವಾಸ್ & ಮೀನಾ ದಂಪತಿ ಪುತ್ರನಾಗಿ ಜನಿಸುವ ದರ್ಶನ್ ಅವರು, 1977ರ ಫೆಬ್ರವರಿ 16ರಂದು ಜನ್ಮತಾಳಿದ್ದರು. ಈಗ ಅವರು 47ನೇ ವಯಸ್ಸಿಗೆ ಎಂಟ್ರಿ ಕೊಡುತ್ತಿದ್ದಾರೆ.
ಹಾಲು ಕರೆದು ಜೀವನ ಸಾಗಿಸಿದರು
ಆರಂಭದಲ್ಲಿ ನಟ ದರ್ಶನ್ ಅವರ ಸಿನಿಮಾ ಬದುಕು ಅಷ್ಟು ಸುಲಭ ಆಗಿರಲೇ ಇಲ್ಲ. ಈ ನಟ ಸಾಲು ಸಾಲು ಸಮಸ್ಯೆಗಳನ್ನ ಎದುರಿಸಿ ನಿಲ್ಲಬೇಕಾಗಿ ಬಂತು. ಅದರಲ್ಲೂ ದರ್ಶನ್‌ರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಹೀಗಿದ್ದರೂ ಅದನ್ನೆಲ್ಲಾ ಎದುರಿಸಿ ನಿಂತಿದ್ದ ಅವರು, ಸಿನಿಮಾಟೋಗ್ರಾಫರ್ ಬಿಸಿ ಗೌರಿಶಂಕರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದರಂತೆ. ಅಲ್ಲದೆ ಲೈಟ್ ಬಾಯ್ ಆಗಿ, ವಿಲನ್ ಪಾತ್ರಗಳನ್ನೂ ಮಾಡಿ ಆರಂಭದಲ್ಲಿ ಕಷ್ಟಪಟ್ಟಿದ್ದರು ನಟ ದರ್ಶನ್. ಧಾರಾವಾಹಿಗಳಲ್ಲಿ ಕೂಡ ದರ್ಶನ್ ಅವರು ನಟನೆ ಮಾಡಿದ್ದರು.
'ತೂಗುದೀಪ' ಹೆಸರು ಹೇಗೆ ಬಂತು?
ದರ್ಶನ್ ಅವರ ತಂದೆಯವರ ಹೆಸರು ತೂಗುದೀಪ ಶ್ರೀನಿವಾಸ್ ಎಂದು. ಹೀಗೆ ತೂಗುದೀಪ ಅನ್ನೋದು ಅವರ ಕುಟುಂಬದ ಹೆಸರಲ್ಲ. ಆದರೆ 'ತೂಗುದೀಪ' ಎನ್ನುವ ಸಿನಿಮಾ ಮೂಲಕ ದರ್ಶನ್ ಅವರ ತಂದೆಯವರಿಗೆ ದೊಡ್ಡ ಹೆಸರು ಬಂದಿತ್ತಂತೆ. ಇದೇ ಕಾರಣಕ್ಕೆ ದರ್ಶನ್ & ಅವರ ಸಹೋದರ ದಿನಕರ್ ಅವರಿಗೂ 'ತೂಗುದೀಪ' ಹೆಸರು ಬಳುವಳಿಯಾಗಿ ಬಂದಿದೆ. ಈಗ ಅದೇ ಹೆಸರು ಹೊಡ ಬ್ರಾಂಡ್ ಆಗುತ್ತಿದೆ.

ರಿಯಾಲಿಟಿ ಶೋ ಮಾಡಲ್ಲ ಡಿ-ಬಾಸ್!
ಅಭಿಮಾನಿಗಳ ಕಡೆಯಿಂದ, ಪ್ರೀತಿಯಿಂದ ಡಿ-ಬಾಸ್ ಎಂದು ಕರೆಸಿಕೊಳ್ಳುವ ನಟ ದರ್ಶನ್ ಅವರು ಯಾವುದೇ ರಿಯಾಲಿಟಿ ಶೋ ಮಾಡಲ್ಲವಂತೆ. ಯಾಕಂದ್ರೆ ರಿಯಾಲಿಟಿ ಶೋಗಳನ್ನು ನಡೆಸುವವರು ಕೊಡುವ ಸ್ಕ್ರಿಪ್ಟ್ ರೀತಿ ವರ್ತನೆ ಮಾಡಲು ಆಗಲ್ಲ ಅನ್ನೋದು ದರ್ಶನ್‌ರ ವಿವರಣೆ. ಹೀಗಾಗಿಯೇ ಅವರು ರಿಯಾಲಿಟಿ ಶೋಗಳಿಂದ ದೂರ ಉಳಿಯುತ್ತಾರೆ. ನೇರವಾಗಿ ಮಾತನಾಡುವ ಸ್ವಭಾವದ ದರ್ಶನ್ ಅವರು ಕೋಟಿ ಕೋಟಿ ಫ್ಯಾನ್ಸ್ ಸಂಪಾದಿಸಿದ್ದಾರೆ.
ಇತಿಹಾಸ ಸೃಷ್ಟಿಸಿದ ಕಾಟೇರ!
ಕಾಟೇರ ಸಿನಿಮಾ ನೋಡ ನೋಡುತ್ತಲೇ ಎಲ್ಲಾ ದಾಖಲೆ ಮೀರಿ ಮುನ್ನುಗ್ಗಿದೆ. ಕನ್ನಡಿಗರ ಚಿತ್ರ ಕಾಟೇರ ಒಂದು ಗತ್ತು ಕೊಟ್ಟಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆದ್ರೂ ಕಾಟೇರ ಸಿನಿಮಾ ಮಾತ್ರ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹಣ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿ ಸಾಧನೆ ಮಾಡಿದೆ ಎಂಬ ಮಾತು ಹರಿದಾಡುತ್ತಿದೆ. ಹೀಗಿದ್ದರೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇಷ್ಟೆಲ್ಲದರ ನಡುವೆ ಡಿ-ಬಾಸ್ ದರ್ಶನ್‌ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಒಟ್ನಲ್ಲಿ ಇನ್ನೇನು ದರ್ಶನ್‌ರ ಹುಟ್ಟುಹಬ್ಬದ ಸೆಲೆಬ್ರೇಷನ್‌ಗೆ ಭರ್ಜರಿ ತಯಾರಿ ಆರಂಭವಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಅಭಿಮಾನಿಗಳು ಡಿ-ಬಾಸ್ ಅವರ ಹುಟ್ಟುಹಬ್ಬದ ಆಚರಣೆ ಶುರು ಮಾಡಲಿದ್ದಾರೆ. ಇದಕ್ಕಾಗಿ ಬೇಕಾದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇನ್ನೇನು ಕೆಲವೇ ಸಮಯದಲ್ಲಿ ಹಬ್ಬವೂ ಶುರುವಾಗಲಿದೆ.












Click it and Unblock the Notifications