Taapsee Pannu: ನಟಿ ತಾಪ್ಸಿ ಪನ್ನುಗೆ ಪಿಆರ್ ತರಬೇತಿ ಅಗತ್ಯವಿದೆ ಎಂದ ಸೋಶಿಯಲ್ ಮೀಡಿಯಾ ಸ್ಟಾರ್‌ಗೆ ನೆಟ್ಟಿಗರ ತರಾಟೆ!
ನಟ ಅಕ್ಷಯ್ ಕುಮಾರ್ ಜೊತೆಗೆ ಖೇಲ್ ಖೇಲ್ ಮೇ ಚಿತ್ರದಲ್ಲಿ ನಟಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಹೊಸ ಹಾಡು ಹೌಲೇ ಹೌಲೆ ಬಿಡುಗಡೆಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ತಾಪ್ಸಿ ಪನ್ನು ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟಾರ್ ಅನನ್ಯ ದ್ವಿವೇದಿ ಸೆಲ್ಫಿ ಕೇಳಿದ್ದಾರೆ. ಇದಕ್ಕೆ ನಟಿ ಸಹಜವಾಗಿ ನಿರಾಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೆ ಅನನ್ಯಾ ಪ್ರತಿಕ್ರಿಯಿಸಿ ತಾಪ್ಸಿ ಪನ್ನುಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಸಕತ್ ತರಾಟೆ ತೆಗೆದುಕೊಂಡಿದ್ದಾರೆ.

ಸೆಲ್ಫಿ ನಿರಾಕರಿಸಿದ್ದಕ್ಕೆ ಅಸಮಾಧಾನ!
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿ ಪನ್ನುಗೆ ಹಸ್ತಲಾಘವ ಮಾಡಿ ಸೆಲ್ಫಿ ಕೇಳಿದ್ದಾರೆ. ಆದರೆ, ನಗುಮುಖದಿಂದಲೇ ಸೆಲ್ಫಿಗೆ ನಿರಾಕರಿಸಿದ್ದಾರೆ. ಇದಕ್ಕೆ ಇನ್‌ಫ್ಲುಯೆನ್ಸರ್ ಅಸಮಾಧಾನಗೊಂಡಂತಿದೆ. ಬಳಿಕ ಈ ವಿಡಿಯೋ ಸಕತ್ ವೈರಲ್ ಆಗಿದೆ.
ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ವೈರಲ್ ಮಾಡಲಾಗಿತ್ತು. ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಬಾಲಿವುಡ್ ಪಾಪರಾಜಿಯೊಬ್ಬರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. "ಅದು ನಾನು. ನೀವು ಈಗಾಗಲೇ ಕ್ಯಾಮೆರಾಗಳಿಂದ ಸುತ್ತುವರಿದಿರುವಾಗ ಯಾರಾದರೂ ಸೆಲ್ಫಿಯನ್ನು ಕೇಳಿದರೆ ಏಕೆ ನಿರಾಕರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನಂತಹ ಇನ್‌ಫ್ಲುಯೆನ್ಸರ್ ಕರೆದ ಏಕೈಕ ಕಾರಣವೆಂದರೆ ಅವರ ಹಾಡನ್ನು ಪ್ರಚಾರ ಮಾಡಲು! ಆಕೆಗೆ ನಿಜವಾಗಿಯೂ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ" ಎಂದಿದ್ದಾರೆ. ಬಳಿಕ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದರೂ, ಕಾಮೆಂಟ್‌ಗಳು ವೈರಲ್ ಆಗಿದೆ.
ಇನ್‌ಫ್ಲುಯೆನ್ಸರ್‌ಗೆ ನೆಟ್ಟಿಗರ ತರಾಟೆ
ಕಾಮೆಂಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇನ್‌ಫ್ಲುಯೆನ್ಸರ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. ಅಭಿಮಾನಿಯೊಬ್ಬರು ತಾಪ್ಸಿಯನ್ನು ಸಮರ್ಥಿಸಿಕೊಂಡು, ಹೀಗೆ ಬರೆದಿದ್ದಾರೆ.. "ಹೌದು.. ಆದರೆ ಅವರು ಕೆಲವೇ ಕೆಲವು ಮಾತು ಹೇಳಿ ತಕ್ಷಣ ತಮ್ಮ ಫೋನ್ ಕ್ಯಾಮೆರಾ ತೆಗೆದಿದ್ದಾರೆ. ತಾಪ್ಸಿ ಬಹುಶಃ ಸರಿಯಾದ ಫೋಟೋಗಳನ್ನು ತೆಗೆದುಕೊಳ್ಳುವಂತೆ ಹೇಳಿತ್ತಿದ್ದರು" ಎಂದಿದ್ದಾರೆ.

ಮತ್ತೊಬ್ಬ ಅಭಿಮಾನಿ, "ಅವರು ಯಾವುದೇ ತಪ್ಪು ಮಾಡಿಲ್ಲ, ಆಕೆಗೆ ಸೆಲ್ಫಿ ಕೊಡುವ ಯಾವುದೇ ಕೆಲಸ ಇಲ್ಲ, ಜೊತೆಗೆ ಅವರಿಗೆ ಸರಿಯಾದ ಫೋಟೋಗಳನ್ನು ತೆಗೆಯಲು ಅಲ್ಲಿಯೇ ಕ್ಯಾಮೆರಾಗಳಿವೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬ ಅಭಿಮಾನಿ, "ಅವರು ನಟಿ ಎಂಬ ಕಾರಣಕ್ಕೆ ಪ್ರತಿ ಫೋಟೋಗೆ ಅವರು ಹೌದು ಎಂದು ಹೇಳಬೇಕು ಎಂದಲ್ಲ. ಬಹುಶಃ ಅವಳು ಸೆಲ್ಫಿಗಳಲ್ಲಿ ತನ್ನನ್ನು ಇಷ್ಟಪಡುವುದಿಲ್ಲ, ಬಹುಶಃ ವೃತ್ತಿಪರ ಕ್ಯಾಮೆರಾಗಳು ಇವೆ. ಇವುಗಳಲ್ಲಿಯೇ ಸ್ಪಷ್ಟವಾಗಿ ಫೋಟೋಗಳು ಬರುತ್ತವೆ ಎಂದುಕೊಂಡಿರಬೇಕು. ಸಾರ್ವಜನಿಕ ವ್ಯಕ್ತಿ ಎಂಬ ಕಾರಣಕ್ಕಾಗಿ ಅವರು ಎಲ್ಲರಿಗೂ ಸೆಲ್ಫೀ ನೀಡಬೇಕು ಎಂಬ ನಿಯಮವಿಲ್ಲ" ಎಂದಿದ್ದಾರೆ.
ಇನ್ನು, ನಟಿ ತಾಪ್ಸಿ ಪನ್ನು ಅಭಿನಯದ ಖೇಲ್ ಖೇಲ್ ಮೇ ಚಿತ್ರದಲ್ಲಿ ವಾಣಿ ಕಪೂರ್, ಆದಿತ್ಯ ಸೀಲ್, ಆಮಿ ವಿರ್ಕ್ ಮತ್ತು ಫರ್ದೀನ್ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದರ ಜೊತೆಗೆ ಜಯಪ್ರದ್ ದೇಸಾಯಿ ಅವರ ಫಿರ್ ಆಯಿ ಹಸೀನ್ ದಿಲ್ರುಬಾದಲ್ಲಿಯೂ ಸಹ ಕಾಣಿಸಿಕೊಳ್ಳಲಿದ್ದಾರೆ.












Click it and Unblock the Notifications